Advertisement

ಧರ್ಮ ಅರಿತವ ಪರಿಪೂರ್ಣ ವ್ಯಕ್ತಿ

01:07 PM Mar 02, 2021 | Team Udayavani |

ಗೋಕಾಕ: ಎಲ್ಲ ಧರ್ಮಗಳು ಮನುಷ್ಯನನ್ನು ಸಮಾಜದ ಆಸ್ತಿಯನ್ನಾಗಿ ಮಾಡಲು ಶ್ರಮಿಸುತ್ತವೆ. ಧರ್ಮ ಎನ್ನುವುದು ಜಾತಿ ಸೂಚಕ ಪದವಲ್ಲ. ಧರ್ಮಗಳನ್ನು ಅರಿತು ನಾವು ನಡೆದರೆ ಪರಿಪೂರ್ಣ ವ್ಯಕ್ತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಐಪಿಎಸ್‌ ರವಿ ಚನ್ನಣ್ಣನವರ ಹೇಳಿದರು.

Advertisement

ಸೋಮವಾರ ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಆವರಣದಲ್ಲಿ ಇಲ್ಲಿನ ಶ್ರೀ ಶೂನ್ಯಸಂಪಾದನ ಮಠದ 16 ನೇ ಶರಣ ಸಂಸ್ಕೃತಿ ಉತ್ಸವದ ಯುವ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ತಪ್ಪುಗಳಿಂದ ಮನುಷ್ಯ ಕಲಿಯಬೇಕು. ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ, ಸಾಧನೆ ಮಾಡುವ ಛಲ ಇರಬೇಕು.

ವಿದ್ಯಾರ್ಜನೆಯೇ ನನ್ನ ಕಸಬು ಎಂದ ಅವರು,ಯುವ ಜನತೆಗೆ ಜ್ಞಾನಾರ್ಜನೆ ಮುಖ್ಯ. ನಾನುಸ್ವಾಮಿ ವಿವೇಕಾನಂದ, ಚಂದ್ರಶೇಖರ ಆಝಾದ,ಭಗತ್‌ಸಿಂಗ್‌ ಅವರ ತತ್ವಾದರ್ಶಗಳನ್ನು ಬೆಳೆಸಿಕೊಂಡಿದ್ದೇನೆ. ನನ್ನಿಂದ ಏನೂ ಆಗುವುದಿಲ್ಲಎಂದು ತಾತ್ಸಾರ ಭಾವನೆ ಬರಬಾರದು. ನನ್ನಿಂದ ಎಲ್ಲವೂ ಸಾಧ್ಯವೆಂದು ಭಾವಿಸಬೇಕು. ಮನುಷ್ಯನ್ನು ಸೋಲಿಸುವ ವಸ್ತು ಜಗತ್ತಿನಲ್ಲಿಇಲ್ಲ. ಪ್ರಯತ್ನ ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂದರು.

ಯುವ ಸಮುದಾಯ ಮೊಬೈಲ್‌, ಫೇಸ್‌ಬುಕ್‌, ಟ್ವಿಟರ್‌ಗಳಿಂದ ದೂರವಿರಬೇಕು. ನಿನ್ನನ್ನು ನೀನು ಪ್ರೀತಿಸು, ನಾನೇ ವಿಶೇಷ ಎಂದು ಬದುಕಬೇಕು. ಎಲ್ಲರಿಗೂ ಸಮಯ ಪ್ರಜ್ಞೆ ಅತೀ ಅವಶ್ಯವಾಗಿದೆ. ಕಳೆದ 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ ಮಾಡಿದ್ದರು. ಈಗಲೂ ಮನೆ ಮನೆಯಲ್ಲಿ ಅನುಭವ ಮಂಟಪ ಮಾಡಬೇಕು. ಕಷ್ಟಗಳಿಗೆ ಸ್ಪಂದಿಸುವ ಸಲುವಾಗಿ ನಾನು ಪೊಲೀಸ ಇಲಾಖೆಯಲ್ಲಿ ಸೇವೆ ಮಾಡುತ್ತಿದ್ದೇನೆ. ಬಡತನ ಶಾಪವಲ್ಲ, ಶಿಕ್ಷಣ ಪಡೆಯಬೇಕು. ಜ್ಞಾನಾರ್ಜನೆ ಮಾಡಬೇಕು. ಯಾವುದೇ ಹುದ್ದೆಯಾಗಲಿ ಸೇರಿ ಆರ್ಥಿಕ ಸಬಲತೆ ಹೊಂದಬೇಕು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು. ಶರಣರ ತತ್ವಗಳನ್ನು ಪಾಲಿಸಬೇಕು. ಸಂಸ್ಕಾರ, ಸಂಸ್ಕೃತಿ ಕಲಿಯುವಂತಹ ಕಾರ್ಯ ಮನೆಮನೆಗೆ ಮುಟ್ಟುವ ಕಾರ್ಯ ಈ ವೇದಿಕೆಯಿಂದ ನಡೆಯಲಿ ಎಂದು ನುಡಿದರು.

Advertisement

ಇದೇ ಸಂದರ್ಭದಲ್ಲಿ ಶ್ರೀಮಠದಿಂದ ರವಿ ಚನ್ನಣ್ಣನವರ ಅವರನ್ನು ಸನ್ಮಾನಿಸಲಾಯಿತು. ಮರಡಿಮಠದ ಶ್ರೀ ಪವಾಡೇಶ್ವರ ಸ್ವಾಮಿಗಳು, ಶೂನ್ಯ ಸಂಪಾದನ ಮಠದ ಶ್ರೀಮುರುಘರಾಜೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಸಭಾ ಸದಸ್ಯ ಹಾಗೂ ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ ಈರಣ್ಣ ಕಡಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಪ್ರಶಾಂತ ಕುರಬೇಟ, ಲಕ್ಕಪ್ಪ ಗೌಡರ, ಕೀರ್ತಿ ಸಸಾಲಟ್ಟಿ, ಪವಿತ್ರಾ ಹತ್ತರವಾಟ, ರಿಯಾಜ ನದಾಫ್‌, ಸ್ನೇಹಲ್‌ ಗರಗಟ್ಟಿ, ಮಾಲಾ ಐದುಡ್ಡಿ ಇದ್ದರು. ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಶರಣರು ಮತ್ತು ದಾಸೋಹಮೂರ್ತಿಗಳಾದ ಚಂದ್ರಶೇಖರ ಕೊಣ್ಣೂರ, ಪ್ರಸನ್‌ ತಂಬಾಕೆ, ಮಗನನಾಲ್‌ ಪಟೇಲ ಅವರನ್ನು ಗೌರವಿಸಿ, ಸನ್ಮಾನಿಸಲಾಯಿತು.

ಪ್ರಾಸ್ತಾವಿಕವಾಗಿ ವಿವೇಕ ಜತ್ತಿ ಮಾತನಾಡಿದರು. ಎಸ್‌.ಕೆ.ಮಠದ ಸ್ವಾಗತಿಸಿ, ನಿರೂಪಿಸಿದರು. ಆರ್‌.ಎಲ್‌.ಮಿರ್ಜಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next