Advertisement

ಹಿಂದೂಸ್ಥಾನಿ ಸಂಗೀತದಿಂದ ಯುವ ಸಮುದಾಯ ವಿಮುಖ

11:54 AM Sep 11, 2017 | Team Udayavani |

ಬೆಂಗಳೂರು: ದೇಶದ ಸತ್ವವುಳ್ಳ ಹಾಗೂ ಪರಂಪರೆಯ ಮೂಲ ಭಾಗವಾಗಿರುವ ಹಿಂದೂಸ್ಥಾನಿ ಸಂಗೀತವನ್ನು ಕಡೆಗಣಿಸುತ್ತಿರುವುದು ವಿಷಾದನೀಯ ಎಂದು ಪದ್ಮಶ್ರೀ ಪುರಸ್ಕೃ ಸಾಹಿತಿ  ಡಾ.ಕೆ.ಎಸ್‌.ನಿಸಾರ್‌ ಆಹ್ಮದ್‌ ವಿಷಾದ ವ್ಯಕ್ತಪಡಿಸಿದ್ದಾರೆ.

Advertisement

ಉಸ್ತಾದ್‌ ಬಾಲೇಖಾನ್‌ ಮೆಮೋರಿಯಲ್‌ ಟ್ರಸ್ಟ್‌ ಹಾಗೂ ಇನ್ಫೋಸಿಸ್‌ ಫೌಂಡೇಶನ್‌ ನಗರದ ಜೆಎಸ್‌ಎಸ್‌ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಂಡಿತ್‌ ಗಣಪತಿ ಭಟ್‌ ಹಾಸಂಗಿ ಅವರಿಗೆ ಇನ್ಫೋಸಿಸ್‌- ಉಸ್ತಾದ್‌ ಬಾಲೇಖಾನ್‌ ಸ್ಮರಣಾರ್ಥ ಪ್ರಶಸ್ತಿ ಪ್ರಧಾನ ಮಾಡಿ ಅವರು ಮಾತನಾಡಿದರು.

ದೇಶದ ಪರಂಪರೆಯನ್ನು ನಾವೇ ಕಡೆಗಣಿಸುತ್ತಿರುವುದು ಬೇಸರದ ಸಂಗತಿ. ನಮ್ಮ ಸಂಗೀತ ಹಾಗೂ ಪರಂಪರೆಯ ಬಹಳಷ್ಟು ಭಾಗಗಳ ಪರಿಚಯ ಇಂದಿನ ಯುವಜನಾಂಗಕ್ಕೆ ಇಲ್ಲ. ಪಾಶ್ಚಿಮಾತ್ಯ ಸಂಗೀತಕ್ಕೆ ಮಾರು ಹೋಗಿರುವ ಇವರಿಗೆ ಅಂತಃಸತ್ವವುಳ್ಳ ಹಿಂದೂಸ್ಥಾನಿ ಸಂಗೀತ ಬಗ್ಗೆ ಅರಿವು ಮೂಡಿಸುವ ಕಾರ್ಯ ಆಗಬೇಕು ಎಂದರು.

ದೇಶದ ಕೆಲವೇ ಸಂಸ್ಥೆಗಳು ಪರಂಪರೆಯ ಭಾಗವಾಗಿರುವ ಸಂಗೀತವನ್ನು ಪ್ರಚುರಪಡಿಸುತ್ತಿವೆ. ಇನ್ಫೋಸಿಸ್‌ ಫೌಂಡೇಶನ್‌ ಸಹಯೋಗದಲ್ಲಿ ಬಾಲೇಖಾನ್‌ ಮೆಮೋರಿಯಲ್‌ ಟ್ರಸ್ಟ್‌ ಸಂಗೀತಾಸಕ್ತರಿಗೆ ಇಂತಹ ವೇದಿಕೆ ಒದಗಿಸಿರುವುದು ಶ್ಲಾಘನೀಯ ಎಂದರು. 

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಂಡಿತ್‌ ಗಣಪತಿ ಭಟ್‌ ಹಾಸಣಗಿ, ನನ್ನ ಅಣ್ಣನಂತಹ ಬಾಲೇಖಾನ್‌ ಅವರ ಸ್ಮರಣಾರ್ಥ ಪ್ರಶಸ್ತಿ ಸ್ವೀಕರಿಸುತ್ತಿರುವುದು ಸಂತಸದ ವಿಷಯ ಎಂದರು. ಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ, ಬಿಎನ್‌ಎಂ ಚಾರಿಟೀಸ್‌ ಟ್ರಸ್ಟ್‌ನ ಕಾರ್ಯದರ್ಶಿ ನಾರಾಯಣ ರಾವ್‌ ಆರ್‌.ಮಾನೆ, ಉಸ್ತಾದ್‌ ಬಾಲೆಖಾನ್‌ ಅವರ ಪುತ್ರ ಹಫೀಜ್‌ ಬಾಲೇಖಾನ್‌ ಸೇರಿದಂತೆ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.

Advertisement

ರೈಸ್‌ ಬಾಲೇಖಾನ್‌ ಮತ್ತು ಹಫೀಸ್‌ ಬಾಲೇಖಾನ್‌ ಅವರು ಹಾಡಿರುವ ಮತ್ತು ಉಸ್ತಾದ್‌ ರಫೀಕ್‌ ಖಾನ್‌ ಮತ್ತು ಪಂಡಿತ್‌ ಶ್ರೀನಿವಾಸ್‌ ಜೋಶಿ ಅವರು ಸಂಗೀತ ಸಂಯೋಜನೆ ಮಾಡಿರುವ ವಚನ ಸ್ವರಧಾರೆ ಸಿ.ಡಿ.ಯನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು. ಅಲ್ಲದೆ, ಎಂ.ಆರ್‌.ಕಲಾವತಿ ಅವರಿಗೆ ಸೌಭಾಗ್ಯಲಕ್ಷ್ಮೀ ವಸಂತರಾವ್‌ ಜಾಜೀ ಹಾಗೂ ಬಿ.ಕೆ.ಮಮತಾ ಅವರಿಗೆ ಹುಮೀದಾ ಬೇಗಂ ಬಾಲೇಖಾನ್‌ ಶಿಷ್ಯವೇತನ ನೀಡಿ ಗೌರಸಲಾಯಿತು. ನಂತರ ಗಣಪತಿ ಭಟ್‌ ಹಾಸಣಗಿ ಅವರ ಸಂಗೀತ ಕಛೇರಿಯೂ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next