Advertisement
ದೇಶಪಾಂಡೆ ಪ್ರತಿಷ್ಠಾನ ಇಲ್ಲಿನ ಗೋಕುಲ ರಸ್ತೆಯ ವಿಮಾನ ನಿಲ್ದಾಣ ಬಳಿ ನಿರ್ಮಿಸಿರುವ ದೇಶದ ಅತಿದೊಡ್ಡ ಕೌಶಲ ಅಭಿವೃದ್ಧಿ ಕೇಂದ್ರದ ಪೂಜಾ ಕಾರ್ಯಕ್ರಮದ ಅನಂತರ ಯುವಕರನ್ನುದ್ದೇಶಿಸಿ ಮಾತನಾಡಿದ ಅವರು, ಕೌಶಲ ಅಭಿವೃದ್ಧಿ ಕೇಂದ್ರದ ಕಟ್ಟಡ ಕೇವಲ ಇಟ್ಟಿಗೆ, ಕಬ್ಬಿಣ, ಸಿಮೆಂಟ್‌ನಿಂದ ನಿರ್ಮಾಗೊಂಡಿದ್ದಲ್ಲ, ಇದರ ಹಿಂದೆ ಅನೇಕರ ಚಿಂತನೆ, ಶ್ರಮ ಇದೆ.
Related Articles
Advertisement
ದೇಶಪಾಂಡೆ ಪ್ರತಿಷ್ಠಾನದ ಸ್ಥಾಪನೆಗೆ ಪ್ರೇರಕರಾದ ಶ್ರೀನಿವಾಸ ದೇಶಪಾಂಡೆ ಮಾತನಾಡಿ, ನಮ್ಮ ಭಾಗದ ಯುವಕರು ಸಂದರ್ಶನಕ್ಕೆ ಹಾಜರಾದರೆ ಅದನ್ನು ಎದುರಿಸುವ ಸಾಮರ್ಥ್ಯದ ಕೊರತೆ ಮಾತುಗಳು ಕೇಳಿ ಬರುತ್ತಿದ್ದವು. ಕೌಶಲ ಅಭಿವೃದ್ಧಿ ತರಬೇತಿ ಇದಕ್ಕೆ ಮಹತ್ವದ ಸಹಕಾರಿ ಆಗಲಿದೆ.
ಕೇಂದ್ರ ಸರಕಾರ ಸಹ ಕೌಶಲ ಅಭಿವೃದ್ದಿಗೆ ಒತ್ತು ನೀಡಿದ್ದು, ಯುವಕರು ತರಬೇತಿಯಲ್ಲಿ ಶ್ರದ್ಧೆ ವಹಿಸುವ ಜತೆಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ಕೆನ್ ಅಗ್ರೋಟೆಕ್ ಸಂಸ್ಥಾಪಕ ವಿವೇಕ ನಾಯಕ ಮಾತನಾಡಿ, ಇಂದಿನ ಯುವಕರ ಕಣ್ಣಲ್ಲಿ ಚೈತನ್ಯವಿದೆ, ಅವಕಾಶಗಳಿವೆ ಆದರೆ ಅವುಗಳ ಸದುಪಯೋಗದ ಚಿಂತನೆಯ ಅಗತ್ಯವಿದೆ.
ಈ ನಿಟ್ಟಿನಲ್ಲಿ ದೇಶಪಾಂಡೆ ಪ್ರತಿಷ್ಠಾನದ ಕೌಶಲ ಅಭಿವೃದ್ಧಿ ಕೇಂದ್ರ ಯುವಕರ ನೆರವಿಗೆ ಧಾವಿಸಿದೆ ಎಂದರು. ಕೃಷಿ ಕುಟುಂಬದಲ್ಲಿ ಜನಿಸಿದ ತಾವು ಪದವಿ ಪಡೆದು ಕಂಪನಿಯೊಂದರಲ್ಲಿ ನೌಕರಿಯಲ್ಲಿದ್ದು, ಸ್ವಂತ ಉದ್ಯಮ ಸ್ಥಾಪನೆಗೆ ಮುಂದಾಗಿ ಹುಬ್ಬಳ್ಳಿಗೆ ಬಂದಾಗ ಸಣ್ಣ ಶೆಡ್‌ನಲ್ಲಿ ಮಿಡಿ ಸೌತೇಕಾಯಿ ರಫ್ತು ವಹಿವಾಟು ಆರಂಭಿಸಿದ್ದೆ. ಇಂದು ಸುಮಾರು 15ಸಾವಿರ ಟನ್‌ನಷ್ಟು ಮಿಡಿ ಸೌತೇಕಾಯಿ ರಫ್ತು ಆಗುತ್ತಿದೆ.
ಯುವಕರು ಮೊದಲು ಕೀಳರಿಮೆ ತೊರೆದು ಇದ್ದ ಅವಕಾಶಕಗಳನ್ನು ಸಾಧನೆಯಾಗಿ ಪರಿವರ್ತನೆಗೆ ಮುಂದಾಗಬೇಕು ಎಂದರು. ನ್ಯಾನೋμಕ್ಸ್‌ನ ಸುಚಿತ್ರಾ ಮಾತನಾಡಿ, 24/7 ಸೇಫ್ಹ್ಯಾಂಡ್‌ನ ಶ್ರಾವಣಿ, ದೇಶಪಾಂಡೆ ಪ್ರತಿಷ್ಠಾನದ ಸಿಇಒ ನವೀನ ಝಾ, ನವೋದ್ಯಮಿಯ ಡಾ| ನೀಲಂ ಮಹೇಶ್ವರಿ, ಗುರನಗೌಡ, ರವಿ ಮಾತನಾಡಿದರು.