Advertisement

ಯೂಥ್‌ ಕ್ಯಾನ್‌ ಲೀಡ್‌ ಅಭಿಯಾನಕ್ಕೆ ಸಂಸದ ತೇಜಸ್ವೀ ಸೂರ್ಯ ಚಾಲನೆ

08:20 PM Jul 11, 2021 | Team Udayavani |

ಬೆಂಗಳೂರು :ನಾಗರಿಕರಲ್ಲಿ ಸರ್ಕಾರದ ಯೋಜನೆಗಳು, ಸಾರ್ವಜನಿಕ ಜವಾಬ್ದಾರಿ ಹೆಚ್ಚಿಸಲು ಬೆಂಗಳೂರು ದಕ್ಷಿಣ ಸಂಸದರ ಕಚೇರಿ ವತಿಯಿಂದ ‘ಯೂಥ್‌ ಕ್ಯಾನ್‌ ಲೀಡ್‌’ ಅಭಿಯಾನ ಆರಂಭಿಸಲಾಗಿದ್ದು, 2 ತಿಂಗಳುಗಳ ಅವಧಿಯ ಈ ಕಾರ್ಯಕ್ರಮದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಸರ್ಕಾರಿ ಆಡಳಿತ ಯಂತ್ರದ ಹಲವು ಮಜಲುಗಳು, ನೀತಿನಿರೂಪಣೆಯ ವಿಧಾನ, ಸರ್ಕಾರಿ ಯೋಜನೆಗಳ ಕುರಿತಾದ ಸರ್ವೇ ಸೇರಿದಂತೆ ಹಲವು ರೀತಿಯ ಮಾಹಿತಿಯನ್ನು ಕ್ಷೇತ್ರ ಭೇಟಿ ಮೂಲಕ ತಜ್ಞರಿಂದ ತಿಳಿಸಿಕೊಡಲು ಪ್ರಯತ್ನಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ ತಿಳಿಸಿದ್ದಾರೆ.

Advertisement

ಸರ್ಕಾರದ ಭಾಗವಾಗಿ ನಾವೆಲ್ಲರೂ ಮಾಡಬೇಕಾದ ಕರ್ತವ್ಯಗಳು, ಜವಾಬ್ದಾರಿಗಳ ಕುರಿತಾಗಿ ಈ ಅಭಿಯಾನದಲ್ಲಿ ಸಂಪೂರ್ಣ ತರಬೇತಿ ನೀಡಲಾಗಿದ್ದು, ಇಂತಹ ಕಾರ್ಯಕ್ರಮಗಳಿಂದ ಸಾಮಾಜಿಕ ಪರಿವರ್ತನೆಗೆ ನಾಂದಿಯಾಗಲಿದೆ ಎಂದು ವಿವರಿಸಿದರು.

ಇದನ್ನೂ ಓದಿ : ಜನಸಂಖ್ಯೆ ಹೆಚ್ಚಳವು ದೇಶದ ಅಭಿವೃದ್ಧಿಗೆ ಮಾರಕ, ನಿಯಂತ್ರಿಸಬೇಕಾದ ಅಗತ್ಯವಿದೆ : ಯೋಗಿ

ಇದೇ ಸಂದರ್ಭದಲ್ಲಿ ಯೂತ್‌ ಕ್ಯಾನ್‌ ಲೀಡ್‌ ನ ಅಭ್ಯರ್ಥಿಗಳು ತಮ್ಮ ಅನುಭವ, ಕ್ಷೇತ್ರ ಭೇಟಿ, ಸಾಮಾಜಿಕ ಪರಿವರ್ತನೆಗೆ ಇಂತಹ ಕಾರ್ಯಕ್ರಮಗಳು ಹೇಗೆ ಸಹಾಯಕಾರಿ ಎನ್ನುವುದನ್ನು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next