Advertisement

ಕೋವಿಡ್ 19 ಸೋಂಕು ದೃಢ, ಯುವಕ ಪರಾರಿ ; ಹಾವೇರಿಯಲ್ಲೊಂದು ವಿಲಕ್ಷಣ ಘಟನೆ!

09:42 PM Jul 05, 2020 | Hari Prasad |

ಹಾವೇರಿ: ಕೋವಿಡ್ 19 ಸೋಂಕಿನ ಲಕ್ಷಣವೇ ಅದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದು.

Advertisement

ಅದಕ್ಕೆಂದೇ ಪಾಸಿಟಿವ್ ದೃಢಪಟ್ಟ ವ್ಯಕ್ತಿಗಳನ್ನು ಐಸೊಲೇಷನ್ ವಾರ್ಡ್ ಗಳಲ್ಲಿ ಸಂಪೂರ್ಣ ಸುರಕ್ಷತೆಯೊಂದಿಗೆ ಚಿಕಿತ್ಸೆ ಮಾಡಲಾಗುತ್ತದೆ.

ಆದರೆ ಇಲ್ಲೊಬ್ಬ ಯುವಕ ತನ್ನ ಗಂಟಲ ದ್ರವ ಪರೀಕ್ಷೆಯ ವರದಿ ಪಾಸಿಟಿವ್ ಬರುತ್ತಿದ್ದಂತೆ ಪರಾರಿಯಾಗಿದ್ದು ಈ ಮೂಲಕ ಜಿಲ್ಲಾಡಳಿತಕ್ಕೆ ಮಾತ್ರವಲ್ಲದೇ ಸ್ಥಳೀಯರಿಗೆ ತಲೆನೋವಾಗಿ ಪರಿಣಮಿಸಿದ್ದಾನೆ.

ತನಗೆ ಕೋವಿಡ್ 19 ಸೋಂಕು ಇದೆ ಎಂಬುದು ಪ್ರಯೋಗಾಲಯ ವರದಿಯಲ್ಲಿ ದೃಢಪಡುತ್ತಿದ್ದಂತೆ ಆ ಯುವಕ ಹೇಳದೆ ಕೇಳದೆ ಪರಾರಿಯಾಗಿರುವ ಘಟನೆ ರಟ್ಟಿಹಳ್ಳಿ ತಾಲೂಕಿನ ಪರ್ವತಸಿದ್ಧಗಿರಿಯಲ್ಲಿ ನಡೆದಿದೆ.

ಇದನ್ನೂ ಓದಿ: ಸೋಂಕಿಗಿಲ್ಲ ಲಾಕ್ ಡೌನ್ ; ಒಂದೇ ದಿನ 1925 ಕೋವಿಡ್ 19 ಪ್ರಕರಣ ; 38 ಸಾವು!

Advertisement

ಈ ನಡುವೆ ತನಗೆ ಜ್ವರದ ಲಕ್ಷಣಗಳು ಕಂಡುಬರುತ್ತಿದ್ದಂತೆ ಸ್ವತಃ ಹೋಗಿ ಸ್ವ್ಯಾಬ್ ಟೆಸ್ಟ್ ಗೆ ಒಳಗಾಗಿದ್ದ. ಆದರೆ ಇಷ್ಟೆಲ್ಲಾ ಮಾಡಿದಾತ ಇದೀಗ ಪರೀಕ್ಷಾ ವರದಿ ಪಾಸಿಟಿವ್ ಬರುತ್ತಿದ್ದಂತೆ ಗಾಯಬ್ ಆಗುವ ಮೂಲಕ ಎಲ್ಲರಲ್ಲೂ ಆತಂಕ ಮೂಡಿಸಿದ್ದಾನೆ.

ರವಿವಾರ ಸೋಂಕು ದೃಢಪಡುತ್ತಿದ್ದಂತೆ ಆತನನ್ನು ಕರೆತರಲು ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಗ್ರಾಮಕ್ಕೆ ಹೋದಾಗ ಯುವಕ ಪರಾರಿಯಾಗಿರುವುದು ಗೊತ್ತಾಗಿದೆ. ಇದೀಗ ಪರಾರಿಯಾಗಿರುವ ಈ ಸೋಂಕಿತನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಜಿಲ್ಲೆಯಲ್ಲಿ ರವಿವಾರ 15 ಹೊಸ ಪಾಸಿಟಿವ್ ಪ್ರಕರಣ ಪತ್ತೆ

ಈ ನಡುವೆ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನ ಆರ್ಭಟ ಮುಂದುವರೆದಿದ್ದು ಜಿಲ್ಲೆಯಲ್ಲಿ ರವಿವಾರ ಮತ್ತೆ 15 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಇವರಲ್ಲಿ ಓರ್ವ ಖಾಸಗಿ ವೈದ್ಯ, ಓರ್ವ ಶಿಕ್ಷಕ, ಓರ್ವ ನ್ಯಾಯವಾದಿ, ಓರ್ವ ಬಾಣಂತಿ, ಓರ್ವ ಪೊಲೀಸ್ ಹಾಗೂ ಮೂವರು ಆಶಾ ಕಾರ್ಯಕರ್ತೆಯರು ಸೇರಿದ್ದಾರೆ.

ಹಾವೇರಿ ಹಾಗೂ ಹಾನಗಲ್ಲ ತಾಲೂಕಿನಲ್ಲಿ ತಲಾ ಐದು, ಶಿಗ್ಗಾವಿ ತಾಲೂಕಿನಲ್ಲಿ ಮೂರು ಹಾಗೂ ಹಿರೇಕೆರೂರು ತಾಲೂಕಿನಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next