Advertisement

ದುರುದ್ದೇಶವಿಲ್ಲದ್ದರಿಂದ ಶಿಕ್ಷೆ ಕಡಿತ; ಯೂಸುಫ್ IPL ಆಡಬಹುದು!

11:48 AM Jan 10, 2018 | |

ನವದೆಹಲಿ: ಉದ್ದೀಪನ ಸೇವನೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಕ್ರಿಕೆಟಿಗ ಯೂಸುಫ್ ಪಠಾಣ್‌ಗೆ 5 ತಿಂಗಳು ನಿಷೇಧ ವಿಧಿಸಲಾಗಿದೆ. ಉದ್ದೇಶ ಪೂರ್ವಕ ವಾಗಿ ತಪ್ಪು ಮಾಡಿಲ್ಲದಿರುವುದರಿಂದ ಶಿಕ್ಷೆ ಪ್ರಮಾಣ ತಗ್ಗಿಸಿ 2017ರ ಆಗಸ್ಟ್‌ನಿಂದ ಪೂರ್ವಾನ್ವ ಯವಾಗುವಂತೆ ಮಾಡಲಾಗಿದೆ. ಆದ್ದರಿಂದ ಯೂಸುಫ್ ಐಪಿಎಲ್‌ ಕನಸಿಗೇನು ಧಕ್ಕೆಯಿಲ್ಲ.

Advertisement

ಆಗಿದ್ದೇನು: 2016ರ ಮಾರ್ಚ್‌ನಲ್ಲಿ ದೇಶಿಯ ಟಿ20 ಬರೋಡ-ತಮಿಳುನಾಡು ತಂಡಗಳ ನಡುವಿನ ಪಂದ್ಯದ ವೇಳೆ ಕಫ‌ಕ್ಕೆಂದು ಔಷಧಿ ತೆಗೆದುಕೊಂಡಿದ್ದರು. ಪಂದ್ಯದ ಬಳಿಕ ಬಿಸಿಸಿಐ ಉದ್ದೀಪನ ತನಿಖಾ ಸಂಸ್ಥೆ ಯೂಸುಫ್ ಸೇರಿದಂತೆ ಎಲ್ಲ ಆಟಗಾರರ ಮೂತ್ರದ ಮಾದರಿ ಪಡೆದುಕೊಂಡಿತ್ತು.

ಬಳಿಕ ಪ್ರಕಟವಾದ ವರದಿ ಕಂಡು ಸ್ವತಃ ಯೂಸುಫ್ ಪಠಾಣ್‌ ಅವರೇ ಬೆಚ್ಚಿ ಬಿದ್ದಿದ್ದರು. ಏಕೆಂದರೆ ಅವರು ನಿಷೇಧಿತ ಉದ್ದೀಪನ ಮದ್ದು ಸೇವಿಸಿದ್ದರು ಎಂದು ವರದಿಯಲ್ಲಿ ದಾಖಲಾಗಿತ್ತು. ಆದರೆ ನಂತರ ಗೊತ್ತಾಗಿದ್ದು ಏನೆಂದರೆ ಅವರು ಸೇವಿಸಿದ್ದು ಕಫ‌ಕ್ಕೆಂದು ಔಷಧಿ. ಈ ಮದ್ದಿನಲ್ಲಿ ನಿಷೇಧಿತ ಉದ್ದೀಪನ ಮದ್ದು “ಟರ್ಬ್ಯುಟಲೈನ್‌’ ಅಂಶ ಇತ್ತು. ಯೂಸುಫ್ ಹೇಳಿದ್ದೇನು?: ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ, ನನ್ನ ರಾಜ್ಯ ಬರೋಡ ಪ್ರತಿನಿಧಿಸುವುದು ನನಗೆ ಹೆಮ್ಮೆಯ ವಿಷಯ ಹಾಗೂ ಅಷ್ಟೇ ಸಂತೋಷವನ್ನು ಕೊಡುವ ವಿಚಾರ. ನನ್ನ ತಾಯಿ ನೆಲ ಹಾಗೂ ಬರೋಡಕ್ಕೆ ಎಂದಿಗೂ ಕೇಡು ಬಗೆಯಲಾರೆ.ಅವಮಾನ ಎಸಗಲಾರೆ. ಬಿಸಿಸಿಐ ಉದ್ದೀಪನ ಘಟಕದ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದೇನೆ. ಪ್ರತಿ ಔಷಧ ತೆಗೆದುಕೊಳ್ಳುವಾಗಲೂ ಎಚ್ಚರಿಕೆ ವಹಿಸಿದ್ದೇನೆ ಎಂದು ಬೇಸರದಿಂದಪ್ರತಿಕ್ರಿಯಿಸಿದ್ದಾರೆ.

ಔಷಧಿ ಅದಲು-ಬದಲು!
 ಬಿಸಿಸಿಐ ಹೇಳಿರುವುದು ಹೀಗೆ… ಮಿಸ್ಟರ್‌ ಪಠಾಣ್‌ಗೆ ಸೂಚಿಸಿದ್ದ ಔಷಧಿಯೇ ಬೇರೆ. ಅದರಲ್ಲಿ ನಿಷೇಧಿತ ಔಷಧಿಯ ಅಂಶ ಇರಲಿಲ್ಲ. ಆದರೆ ಇಲ್ಲೊಂದು ಅಚಾತುರ್ಯವಾಗಿದೆ. ಇವರಿಗೆ ತಪ್ಪಾಗಿ ಮತ್ತೂಂದು ಔಷಧಿ ನೀಡಲಾಗಿದೆ. ಹೀಗಾಗಿ ಇಂತಹ ಘಟನೆ ನಡೆದಿದೆ ಎಂದು ತಿಳಿಸಿದೆ.

ಪಠಾಣ್‌ ಐಪಿಎಲ್‌ ಆಡೋದಕ್ಕೆ ಧಕ್ಕೆಯಿಲ್ಲ
ಯೂಸುಫ್ ಪಠಾಣ್‌ ನಿಷೇಧ ಶಿಕ್ಷೆ 2017 ಆಗಸ್ಟ್‌ನಿಂದ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಲಾಗಿದೆ. ಹೀಗಾಗಿ ಮುಂಬರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನಲ್ಲಿ ಪಾಲ್ಗೊಳ್ಳಲು ಇವರಿಗೆ ಯಾವುದೇ ಅಡಚಣೆ ಆಗುವುದಿಲ್ಲ. ಇವರ ನಿಷೇಧ ಶಿಕ್ಷೆ ಜ.14ರ ಮಧ್ಯರಾತ್ರಿವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ಒಟ್ಟಾರೆ ಶಿಕ್ಷೆಯ ಪ್ರಮಾಣವನ್ನು ಬಿಸಿಸಿಐ 5 ತಿಂಗಳು ಎಂದು ಪ್ರಕಟಿಸಿದೆ. ಪಠಾಣ್‌ ಅವರು ಗೊತ್ತಿಲ್ಲದೇ ಉದ್ದೀಪನ ಸೇವಿಸಿದ್ದರು. ಇದು ಬಿಸಿಸಿಐ ವಿಚಾರಣೆ ಸಮಿತಿಗೂ ಮನವರಿಕೆಯಾಗಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next