Advertisement

ನಿಮ್ಮ ಗ್ರಹಬಲ: ಈ ರಾಶಿಯವರಿಗೆ ಈ ವರ್ಷವಿಡೀ ಸುಖದುಃಖಗಳ ಸಮ್ಮಿಶ್ರ ಫ‌ಲವು ಕಂಡು ಬರಲಿದೆ

08:13 AM Jan 15, 2021 | Team Udayavani |

15-01-2021

Advertisement

ಮೇಷ: ಸಾಂಸಾರಿಕವಾಗಿ ಹೆಂಡತಿ ಮಕ್ಕಳಿಂದ ಉತ್ತಮವಾದುದನ್ನೇ ನಿರೀಕ್ಷಿಸಬಹುದಾಗಿದೆ. ಆಗಾಗ ದೂರಸಂಚಾರದಿಂದ ಧನವ್ಯಯವು ಕಂಡು ಬರಲಿದೆ. ಮನೆಯಲ್ಲಿ ಮಂಗಳ ಕಾರ್ಯದ ಬಗ್ಗೆ ಚಿಂತನೆಯು ನಡೆಯಲಿದೆ.

ವೃಷಭ: ಉತ್ತಮ ಅನುಗ್ರಹವು ಇದ್ದು ಗೃಹ ಸೌಖ್ಯ ಇರುವುದು. ಸಾಮಾಜಿಕ ರಂಗದಲ್ಲಿ ಸ್ಥಾನಮಾನ, ಗೌರವ ಪ್ರಾಪ್ತಿಯಾಗಲಿದೆ. ಮನೋನಿಶ್ಚಿತ ಕೆಲಸ ಕಾರ್ಯಗಳು ಹಂತಹಂತವಾಗಿ ನೆರವೇರಲಿದೆ. ಕಿರುಸಂಚಾರ ಕಂಡು ಬಂದೀತು.

ಮಿಥುನ: ಜೀವನದಲ್ಲಿ ನಾನಾ ರೀತಿಯ ಏರುಪೇರುಗಳಿಂದ ನೊಂದು ಬಳಲಿದ್ದ ನಿಮಗೆ ಈಗ ಸ್ವಲ್ಪ ಸಂತೋಷ ಸಮಾಧಾನವು ಕಂಡು ಬರುವುದು. ಆರೋಗ್ಯದಲ್ಲೂ ಉತ್ತಮ ಸುಧಾರಣೆಯು ಕಂಡು ಬರುವುದು ಶುಭವಿದೆ.

ಕರ್ಕ: ಹಲವು ಅಡೆತಡೆಗಳು ತೋರಿಬಂದರೂ ನಿಮ್ಮ ಕೆಲಸವು ಕೆಗೂಡಲಿದೆ. ವರ್ಷದ ಆರಂಭದಿಂದಲೇ ಯೋಗ್ಯ ವಯಸ್ಕರಿಗೆ ವಿವಾಹ ಪ್ರಸ್ತಾಪಗಳು ಕಂಕಣ ಬಲಕ್ಕೆ ಸಾಧಕವಾಗಲಿದೆ. ಉದ್ಯೋಗದಲ್ಲಿ ಬದಲಾವಣೆ ಇದೆ.

Advertisement

ಸಿಂಹ: ಈ ವರ್ಷವಿಡೀ ಸುಖದುಃಖಗಳ ಸಮ್ಮಿಶ್ರ ಫ‌ಲವು ನಿಮಗೆ ಕಂಡು ಬರಲಿದೆ. ನಿಮ್ಮ ಆತ್ಮಸ್ಥೈರ್ಯ ಹಾಗೂ ದೃಢ ನಿರ್ಧಾರಗಳು ನಿಮ್ಮನ್ನು ಮುನ್ನಡೆಸಲಿದೆ. ಆರ್ಥಿಕವಾಗಿ ಋಣಭಾದೆ ಸ್ವಲ್ಪ ಸ್ವಲ್ಪ ಕಡಿಮೆಯಾಗಿ ಸಂತಸ.

ಕನ್ಯಾ: ವಿದ್ಯಾರ್ಥಿಗಳು ದುರ್ವ್ಯಸನಗಳಿಂದ ದೂರವಿದ್ದಷ್ಟು ಉತ್ತಮ. ಹೊಸ ಪರಿಸರಕ್ಕೆ ವರ್ಗಾವಣೆ ತಂದೀತು. ಹಿರಿಯರೊಂದಿಗೆ ದೂರ ಸ್ಥಳಗಳನ್ನು ಸಂದರ್ಶಿಸುವ ಅವಕಾಶವಿರುತ್ತದೆ. ಆರ್ಥಿಕವಾಗಿ ನೆಮ್ಮದಿಯ ದಿನಗಳಿವು.

ತುಲಾ: ನಾನಾ ರೀತಿಯ ಕಷ್ಟ ನಷ್ಟಗಳ ಅನುಭವವು ನಿಮಗೆ ಚಿಂತೆಗೀಡು ಮಾಡಿದರೂ ಅದು ಸುಧಾರಿಸುವುದು. ಹೊಸ ಹೊಸ ಅವಕಾಶಗಳು ಬರುವವು. ಗೃಹ ನಿರ್ಮಾಣ ಕಾರ್ಯದಲ್ಲಿ ಮುನ್ನಡೆ ಕಂಡು ಬಂದು ಸಮಾಧಾನವಾದೀತು.

ವೃಶ್ಚಿಕ: ನಿರುದ್ಯೋಗಿಗಳಿಗೆ ಆಕಸ್ಮಿಕವಾಗಿ ಉದ್ಯೋಗಾವಕಾಶಗಳು ಒದಗಿ ಬಂದಾವು. ಹಿರಿಯರಿಗೆ ಉತ್ತಮ ವೈದ್ಯರಿಂದ ತಪಾಸಣೆ ಮಾಡಿದರೆ ಉತ್ತಮ. ವಾಹನ ಸಂಚಾರದಲ್ಲಿ ಅತೀ ಜಾಗ್ರತೆ ಮಾಡತಕ್ಕದ್ದು. ಉದ್ಯೋಗದಲ್ಲಿ ಸ್ಪರ್ದೆ ಎದುರಾಗಲಿದೆ.

ಧನು: ಕುಟುಂಬಿಕವಾಗಿ ಸಮಾಧಾನಕರ ವಾತಾವರಣದಿಂದ ತುಸು ಮಾನಸಿಕ ಶಾಂತಿ ದೊರಕಲಿದೆ. ಕಾರ್ಯರಂಗದಲ್ಲಿ ಮುನ್ನಡೆಯಲು ಉತ್ತಮ ಅವಕಾಶಗಳು ದೊರಕಲಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಖರ್ಚುವೆಚ್ಚ ಅಧಿಕವಾಗಲಿದೆ.

ಮಕರ: ಸೊಂಟದ ಕೆಳಭಾಗದಲ್ಲಿ ನೋವು ಕಾಡಲಿದೆ. ನಿಮ್ಮ ಸಂಬಂಧಿಕರಿಂದ ಉತ್ತಮ ಪ್ರೋತ್ಸಾಹವು ದೊರಕಲಿದೆ. ಅನಿರೀಕ್ಷಿತ ಧನಲಾಭ ಕಂಡು ಬರುವುದು. ಹಲವು ಸಮಯದಿಂದ ಬಾಕಿಯಾದ ಕೆಲಸ ಮುನ್ನಡೆದೀತು.

ಕುಂಭ: ಸ್ವಾಭಿಮಾನಿಗಳಾಗಿ ಗೌರವವನ್ನು ಉಳಿಸಿಕೊಳ್ಳಿರಿ. ಮಾನಸಿಕ ಚಂಚಲತೆ ಕಾಡಿದರೂ ನಿರಂತರವಾಗಿ ಧನಾಗಮನವಿದ್ದು ಸಮಾಧಾನವಾಗಲಿದೆ. ಎಲ್ಲಾ ವಿಚಾರದಲ್ಲಿ ಆದಷ್ಟು ಜಾಗ್ರತೆ ಮಾಡಿರಿ. ಹಳೆ ಕಾಯಿಲೆ ಪುನರಾಗಮನ.

ಮೀನ: ದೂರ ಸಂಚಾರದಲ್ಲಿ ಅಪಘಾತದ ಭಯ ಇರುವುದು. ನಿಮ್ಮಿಂದ ಉಪಕೃತರಾದವರೇ ನಿಮಗೆ ಸಮಸ್ಯೆ ತಂದಿಟ್ಟಾರು. ಕಚೇರಿ ವ್ಯವಹಾರದಲ್ಲಿ ಜಾಗ್ರತೆ ಮಾಡಿರಿ. ಕಾರ್ಮಿಕ ವರ್ಗಕ್ಕೆ ಅತೀ ಶ್ರಮವು ಕಂಡು ಬರಲಿದೆ.

 

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next