Advertisement

2021ರ ಏಪ್ರಿಲ್ ನಿಂದ ಟೇಕ್ ಹೋಮ್ ಸ್ಯಾಲರಿ ಮತ್ತಷ್ಟು ಕಡಿತ…ಏನಿದು ಹೊಸ ನಿಯಮ?

03:27 PM Dec 09, 2020 | Nagendra Trasi |

ನವದೆಹಲಿ:ಕೋವಿಡ್ ಸೋಂಕಿನ ನಡುವೆ ಆರ್ಥಿಕ ಚೇತರಿಕೆ ಕಾಣುತ್ತಿರುವ ಸಂದರ್ಭದಲ್ಲಿ ಇದೀಗ ಮತ್ತೊಂದು ಕಹಿ ಸುದ್ದಿ ಹೊರಬಿದ್ದಿದೆ. 2021ರ ಏಪ್ರಿಲ್ ನಂತರ ಉದ್ಯೋಗಿಗಳ ಕೈಗೆ ಸಿಗುವ (ಟೇಕ್ ಹೋಮ್ ಸ್ಯಾಲರಿ) ಸಂಬಳ ಮತ್ತಷ್ಟು ಕಡಿತವಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

Advertisement

ಸಾಮಾನ್ಯವಾಗಿ ಕೈಗೆ ಸಿಗುವ ಸಂಬಳ ಕಂಪನಿ ನಿಗದಿಪಡಿಸಿದ ಸಂಬಳಕ್ಕಿಂತ ಕಡಿಮೆಯಾಗಿರುತ್ತದೆ. ಅದಕ್ಕೆ ಕಾರಣ ತೆರಿಗೆ, ಪಿಎಫ್, ಇಎಸ್ ಐ, ಎಚ್ ಆರ್ ಎ ಸೇರಿದಂತೆ ಇನ್ನಿತರ ಕಡಿತಗಳ ನಂತರ ಸಿಗುವ ಮೊತ್ತವನ್ನು ಟೇಕ್ ಹೋಮ್ ಸ್ಯಾಲರಿ ಎಂದು ಹೇಳುತ್ತೇವೆ.

ಕೇಂದ್ರ ಸರ್ಕಾರ ಹೊರಡಿಸಿರುವ ನೂತನ ವೇತನ ನಿಯಮದ ಅಧಿಸೂಚನೆ ಪ್ರಕಾರ ಮುಂದಿನ ಆರ್ಥಿಕ(2021) ವರ್ಷದಲ್ಲಿ ಕಂಪನಿಗಳು ಉದ್ಯೋಗಿಗಳಿಗೆ ನೀಡುವ ವೇತನ ಪ್ಯಾಕೇಜ್ ಪುನರ್ ವಿಂಗಡಿಸಬೇಕಾದ ಅಗತ್ಯವಿದೆ ಎಂದು ವರದಿ ವಿವರಿಸಿದೆ.

ಈ ನೂತನ ನಷ್ಟ ಪರಿಹಾರ ನಿಯಮ ವೇಜ್ (ವೇತನ)2019 ಕೋಡ್ ನ ಒಂದು ಭಾಗವಾಗಿದ್ದು, ಬಹುತೇಕ ಈ ಕಾಯ್ದೆ 2021ರ ಏಪ್ರಿಲ್ ನಲ್ಲಿಜಾರಿಯಾಗುವ ಸಾಧ್ಯತೆ ಇದ್ದಿರುವುದಾಗಿ ತಿಳಿಸಿದೆ.

ಹೊಸ ವೇತನ ನಿಯಮ ಏನು ಹೇಳುತ್ತದೆ?

Advertisement

ಕರಡು ನಿಯಮದ ಪ್ರಕಾರ ನೌಕರರ (ಉದ್ಯೋಗಿ) ಭತ್ಯೆಯು ವೇತನ ಪ್ಯಾಕೇಜ್ ನ ಶೇ.50ರಷ್ಟು ಮೀರಬಾರದು. ಇದರ ಪರಿಣಾಮ ಕಂಪನಿ ಅಥವಾ ಉದ್ಯೋಗಿಗಳ ಶೇ.50ರಷ್ಟು ಮೂಲ ವೇತನದಲ್ಲಿಯೇ ಸಂಬಳ ಕಡಿತವಾಗಲಿದೆ. ಅಂದರೆ ನೌಕರರ ಗ್ರ್ಯಾಚ್ಯುವಿಟಿ ಮತ್ತು ಪಿಎಫ್ ಗೆ ಹೆಚ್ಚಿನ ಪಾಲು ಸಂಬಳ ಸಂದಾಯವಾಗುತ್ತದೆ.

ಇದನ್ನೂ ಓದಿ:ಬೆಂಗಳೂರು: ಆಂಜನೇಯ ದೇವಾಲಯ ನಿರ್ಮಾಣಕ್ಕೆ ಮುಸ್ಲಿಂ ವ್ಯಕ್ತಿಯಿಂದ ಭೂಮಿ ದಾನ

ಈ ನೂತನ ವೇತನ ಕಾಯ್ದೆಯಿಂದ ಉದ್ಯೋಗಿಗಳ ಟೇಕ್ ಹೋಮ್ ಸ್ಯಾಲರಿ ಕಡಿಮೆಯಾಗಲಿದ್ದು, ಗ್ರ್ಯಾಚುವಿಟಿ ಮತ್ತು ಪಿಎಫ್ ಪಾಲು ಹೆಚ್ಚಳವಾಗಲಿದೆ ಎಂದು ವರದಿ ಹೇಳಿದೆ. ಟೇಕ್ ಹೋಮ್ ಸಂಬಳ ಕಡಿಮೆಯಾಗಬಹುದು ಆದರೆ ನಿವೃತ್ತಿಯ ನಂತರ ಉದ್ಯೋಗಿಗೆ ಸಿಗುವ ಲಾಭದ ಮೊತ್ತ ಹೆಚ್ಚಳವಾಗಲಿದೆ ಎಂದು ತಿಳಿಸಿದೆ.

ಪ್ರಸ್ತುತ ಬಹುತೇಕ ಖಾಸಗಿ ಕಂಪನಿಗಳು ಒಟ್ಟು ಪರಿಹಾರದ ಭತ್ಯೆ ರಹಿತ ಭಾಗವನ್ನು ಶೇ.50ಕ್ಕಿಂತ ಕಡಿಮೆ ಇರಿಸಲು ಬಯಸುತ್ತವೆ. ಆದರೆ ಭತ್ಯೆಯನ್ನು ಹೆಚ್ಚಿಗೆ ನೀಡುತ್ತವೆ. ಇದೀಗ ಹೊಸ ವೇತನ ನಿಯಮ ಜಾರಿಗೆ ಬಂದಲ್ಲಿ, ಇದು ಖಾಸಗಿ ವಲಯದ ನೌಕರರ ಸಂಬಳದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಯಾಕೆಂದರೆ ಸಾಮಾನ್ಯವಾಗಿ ಹೆಚ್ಚಿನ ಭತ್ಯೆ ಪಡೆಯುತ್ತಿರುವುದು ಇದಕ್ಕೆ ಕಾರಣ.

ಹೊಸ ನಿಯಮದ ಪ್ರಕಾರ ಉದ್ಯೋಗಿಗಳ ಶೇ.50ರಷ್ಟು ಮೂಲ ವೇತನವನ್ನು ಹೆಚ್ಚಿಸಬೇಕಾಗುತ್ತದೆ. ಅಲ್ಲದೇ ಹೊಸ ನಿಯಮ ಉದ್ಯೋಗಿಗಳ ಟೇಕ್ ಹೋಮ್ ಸಂಬಳ ಕಡಿತವಾಗಲಿದೆ. ಆದರೆ ತಜ್ಞರ ಪ್ರಕಾರ ಉದ್ಯೋಗಿಗಳ ಸಾಮಾಜಿಕ ರಕ್ಷಣೆ ಮತ್ತು ನಿವೃತ್ತಿಯ ಲಾಭ ಹೆಚ್ಚಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next