ಈವರೆಗೆ ನೀವು ಯಾರಿಗಾದರೂ ಹಣ ನೀಡುವುದಿದ್ದರೆ ಚೆಕ್ ನೀಡುವ ಮೂಲಕ ಪಾರಾಗುತ್ತಿದ್ದಿರಿ. ವಾರಾಂತ್ಯದ ದಿನಗಳ್ಳೋ ಅಥವಾ ಸರಣಿ ರಜಾದಿನ ಗಳು ಇದ್ದರೆ ಈ ಚೆಕ್‌ನ್ನು ನಗದೀಕರಿಸಲು ಮುಂದಿನ ಕೆಲಸದ ದಿನದವರೆಗೆ ಕಾಯಬೇಕಿತ್ತು. ಆದರೆ ಇನ್ನು ಹಾಗಿಲ್ಲ. ನೀವು ಚೆಕ್ ನೀಡಿದಾಕ್ಷಣ ಅದನ್ನು ನಗದೀಕರಿಸಲು ಸಾಧ್ಯ. ಆದ್ದರಿಂದ ಹಣ ಪಾವತಿಗಾಗಿ ಯಾರಿಗಾದರೂ ಚೆಕ್ ನೀಡುವುದಾದರೆ ಮೊದಲು ನಿಮ್ಮ ಖಾತೆಯಲ್ಲಿ ನಗದು ಎಷ್ಟು ಇದೆ ಎಂದು ಪರೀಕ್ಷಿಸಿಕೊಳ್ಳಿ. ಆ. 1ರಿಂದ ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ (NACH) ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದೆ.
ಹೊಸ ನಿಯಮಗಳು ಅನ್ವಯ ಹೇಗೆ ? :
ರಾಷ್ಟ್ರೀಯ ಸ್ವಯಂ ಚಾಲಿತ ಕ್ಲಿಯರಿಂಗ್ ಹೌಸ್ ಎಲ್ಲ ದಿನಗಳಲ್ಲೂ ಲಭ್ಯವಿರುವುದರಿಂದ ಚೆಕ್ ಮೂಲಕ ಪಾವತಿ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು. ಏಕೆಂದರೆ ಅದು ಕೂಡಲೇ ಕ್ಲಿಯರಿಂಗ್‌ಗೆ ಹೋಗಬಹುದು. ವ್ಯವಹಾರ ರಹಿತ ದಿನಗಳು, ರಜಾ ದಿನಗಳಲ್ಲೂ ನಗದೀಕರಣ ಆಗಬಹುದು. ಹೀಗಾಗಿ ಚೆಕ್ ನೀಡುವ ಮೊದಲು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಇಲ್ಲವಾದರೆ ಚೆಕ್ ಬೌನ್ಸ್ ಆಗಿ ದಂಡವನ್ನು ಪಾವತಿಸಬೇಕಾಗಬಹುದು.