Advertisement
ಡುಕಾಟಿ ಪಾನಿಗಲೆ ವಿ4ಡುಕಾಟಿ ಸಂಸ್ಥೆ ಉತ್ಪಾದಿಸಿದ ಮೊದಲ 4 ಸಿಲಿಂಡರ್‌ಎಂಜಿನ್ ಬೈಕ್ ಇದು. 1,103 ಸಿಸಿ ಶಕ್ತಿ ಹೊಂದಿರುವ ಇದನ್ನು ಪ್ರಯಾಣಕ್ಕೆ ಮಾತ್ರವಲ್ಲ, ಸ್ಪರ್ಧೆಗೂ ಬಳಸಬಹುದು. ಇದರ ಎಂಜಿನ್ 211 ಬಿಎಚ್‌ಪಿ ವೇಗದಲ್ಲಿ ಕೆಲಸ ಮಾಡುವ ಶಕ್ತಿ ಹೊಂದಿದೆ. ಭಾರ ಎಳೆಯುವ ಶಕ್ತಿಯೂ ಅಗಾಧ. ಇದರ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ.
ಈ ಬೈಕನ್ನು ಸವ್ಯಸಾಚಿ ಎಂದರೆ ಅತಿಶಯೋಕ್ತಿ ಎಂದುಕೊಳ್ಳಬೇಡಿ. ಎಂತಹ ರಸ್ತೆಯಲ್ಲೂ ಸಂಚರಿಸುತ್ತದೆ. ಕ್ರೀಡಾಸ್ಪರ್ಧೆಗಳಿಗಂತೂ ಹೇಳಿ ಮಾಡಿ ಸಿದ ಮಧ್ಯಮಭಾರದ ಬೈಕ್.
ಸದ್ಯ ಟೈಗರ್ 900 ಸಾಹಸ ಪ್ರಿಯ ರಿಗೆ, ದೂರದೂರಿಗೆ ಪ್ರಯಾಣ ಹೊರಡುವವರಿಗೆ ಹೇಳಿ ಮಾಡಿಸಿದಂತಿದೆ.
ಸಾಹಸ ಕ್ರೀಡಾ ಬೈಕ್ ಇದು ಜಗತ್ತಿನಲ್ಲೇ ಅತಿ ಜನಪ್ರಿಯವಾಗಿರುವ ಸಾಹಸ ಕ್ರೀಡಾ ಬೈಕ್. ಇದರ ತೂಕ 250 ಕೆಜಿ. 1254 ಸಿಸಿ (ವಾಹನಕ್ಕೆ ಪೂರೈಕೆಯಾಗುವ ಶಕ್ತಿಯ ಅಳತೆ) ಸಾಮರ್ಥಯ ಹೊಂದುವ ಮೂಲಕ, ಇದು ಚಿರತೆಯ ಮೇಲೆ ಕುಳಿತ ಅನುಭವ ನೀಡುತ್ತದೆ. ಎಂಜಿನ್ ವೇಗ 134 ಬಿಎಚ್‌ಪಿ, ಎಳೆಯುವ ಶಕ್ತಿ 143 ಎನ್‌ಎಂ.
Related Articles
ಭಾರತದಲ್ಲಿ ಮಧ್ಯಮಭಾರದ ಸಾಹಸ ಬೈಕ್‌ಗಳ ಬಗೆಗಿನ ಗ್ರಹಿಕೆಯನ್ನೇ ಬದಲಿಸಿದ್ದು ಈ ಬೈಕ್. ಮೇಲ್ನೋಟಕ್ಕೆ ಇದು ಗೇರುಗಳಿಲ್ಲದ (ವಾಸ್ತವವಾಗಿ ಗೇರು ಒಳಗೇ ಇರುತ್ತದೆ, ಓಡಿಸುವಾಗ ತನ್ನಷ್ಟಕ್ಕೇ ತಾನೇ ಬದಲಾಗುವ ವ್ಯವಸ್ಥೆಯಿರುತ್ತದೆ), ತಾನೇತಾನಾಗಿ ವೇಗ ವೃದ್ಧಿಸಿಕೊಳ್ಳುವ ಭಾರತದ ಏಕೈಕ ಕ್ರೀಡಾ ಬೈಕ್. ಕ್ಲಚ್ ಮೂಲಕವೇ ಗೇರನ್ನು ನಿರ್ಧರಿಸಬಹುದು. ಎಂತಹ ರಸ್ತೆಗಳಿಗೂ ಒಗ್ಗಿಕೊಳ್ಳುವ ಇದಕ್ಕೆ ಯಾಕೋ ಜನಪ್ರಿಯತೆ ಸಿಕ್ಕಿಲ್ಲ.
Advertisement
ಸುಜುಕಿ ಜಿಎಸ್‌ಎಕ್ಸ್-ಎಸ್750ಬಹುಶಃ ಈ ಬೈಕ್‌ಗಳನ್ನು ನೀವು ರಸ್ತೆಯಲ್ಲಿ ನೋಡಿರಲಿಕ್ಕಿಲ್ಲ, ಬಹಳ ಕೇಳಿರಲಿಕ್ಕೂ ಇಲ್ಲ. ಆದರೆ ಬೈಕ್ ಸಾಹಸಿಗಳಿಗೆ ಮಾತ್ರ ಇದು ಅಚ್ಚುಮೆಚ್ಚಿನ ವಾಹನ. ಮಧ್ಯಮಗಾತ್ರದ ಈ ಬೈಕ್ ರಸ್ತೆಗೂ, ಸ್ಪರ್ಧಾ ಕಣಕ್ಕೂ ಹೇಳಿ ಮಾಡಿಸಿದಂತಿದೆ. ಕೆಲವು ಸ್ಪರ್ಧಿಗಳಿಗಂತೂ ಇದು ಹೊರಡಿಸುವ ಘರ್ಜನೆಯಂತ ಶಬ್ದ ಬಹಳ ಇಷ್ಟ ಎನ್ನುತ್ತಾರೆ ತಜ್ಞರು. ಸ್ವದೇಶಿ ರಾಯಲ್ ಎನ್ಫಿಲ್ಡ್ 650
ರಾಯಲ್ ಎನ್‌ಫಿಲ್ಡ್ ಬೈಕ್ ಹೆಸರನ್ನು ಕೇಳದವರು ಯಾರು? ಭಾರತದ ಅತ್ಯಂತ ಜನಪ್ರಿಯ ಸ್ವದೇಶಿ ಬೈಕ್ ಇದು. ಇದರ ಹೊಸ ಆವೃತ್ತಿಗಳು ಆರ್‌ಇ ಇನ್‌ಸೆಪ್ಟರ್ 650, ಆರ್‌ಇ ಕಾಂಟಿನೆಂಟಲ್ ಜಿಟಿ 650. ಮುಂಚಿನಿಂದಲೂ ವೇಗಕ್ಕೆ, ಅದ್ಭುತ ಸಾಮರ್ಥಯಕ್ಕೆ ಹೆಸರುವಾಸಿ ಎನ್‌ಫಿಲ್ಡ್‌ನ ಈ ಆವೃತ್ತಿಗಳಂತೂ ಕಣ್ಮನ ಸೆಳೆದಿವೆ.
ಮಧ್ಯಮಭಾರದ ಕ್ರೀಡಾ ಬೈಕ್‌ಗಳ ಪೈಕಿ ಇದಕ್ಕೆ ಬಹಳ ಜನಪ್ರಿಯತೆಯಿದೆ. ಹಲವರು ಇದನ್ನು ತಮ್ಮ ಆಯ್ಕೆಯಾಗಿ ಬಳಸುತ್ತಾರೆ. ಇದು 765 ಸಿಸಿ ಸಾಮರ್ಥಯ ಹೊಂದಿದೆ. ಈ ಬೈಕ್‌ಗೆ ಕೆಟಿಎಂ 790 ಡ್ನೂಕ್‌ನಿಂದ ಸ್ಪರ್ಧೆಯಿತ್ತು. ಆದರೆ ಅದು ಬಹಳ ಕಾಲ ಉಳಿಯದಿದ್ದರಿಂದ ಟ್ರಿಯುಂಫ್ ಟ್ರಿಪಲ್ ಏಕಾಂಗಿಯಾಗಿ ಸ್ಪರ್ಧೆಯಲ್ಲುಳಿಯಿತು ಎನ್ನುತ್ತಾರೆ ತಜ್ಞರು. ಕೆಟಿಎಂ 390 ಡ್ನೂಕ್
ಈ ಬೈಕ್ ಮೊದಲು ಭಾರತದಲ್ಲಿ ಬಿಡುಗಡೆಯಾಗಿದ್ದು 2013ರಲ್ಲಿ. ಇದೀಗ ಬಿಎಸ್6 ದರ್ಜೆಗೆ ತಕ್ಕಂತೆ ಬದಲಾಗಿದೆ. ಇದನ್ನು ಬಳಸಿದ ತಜ್ಞರು, ಈ ದಶಕದಲ್ಲೇ ಭಾರತದಲ್ಲಿ ಬಿಡುಗಡೆಯಾದ ಅತ್ಯುತ್ತಮ ಬೈಕ್‌ಗಳಲ್ಲಿ ಇದೂ ಒಂದು ಎನ್ನುತ್ತಾರೆ. ಇದರ ವಿಶೇಷತೆಯೆಂದರೆ ಇದು ಆಸ್ಟ್ರಿಯದ ಕೆಟಿಎಂ, ಭಾರತದ ಬಜಾಜ್ ಸೇರಿ ತಯಾರಿಸುವ ಬೈಕ್.