Advertisement

ಮಡಿವಾಳದಲ್ಲಿ ನಡುರಾತ್ರಿ ರಸ್ತೆಯಲ್ಲೇ ಯುವತಿಯ ನಗ್ನ ಶೋ !

01:53 PM May 28, 2017 | Team Udayavani |

ಬೆಂಗಳೂರು : ನಗರದ ಮಡಿವಾಳದಲ್ಲಿ  ಶನಿವಾರ ತಡರಾತ್ರಿ ಯುವತಿಯೊಬ್ಬಳು ವಸ್ತ್ರಗಳನ್ನು ಬಿಚ್ಚಿ  ಅರೆನಗ್ನವಾಗಿ ದೇಹದ ಅಂಗಾಂಗಳನ್ನು ಪ್ರದರ್ಶಿಸಿ ವಿಕೃತವಾಗಿ ಜನರನ್ನು ಸೆಳೆಯುತ್ತಿದ್ದ ಘಟನೆ ನಡೆದಿದ್ದು, ಈ ಸಂಬಂಧ ಯುವತಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. 

Advertisement

ಮಡಿವಾಳದ ಮೆಡಿಕಲ್‌ವೊಂದರ ಎದುರು ಅರೆನಗ್ನ ಶೋ ನೀಡುತ್ತಿದ್ದ ರೂಪಾ ಬಿಸ್ವಾಸ್‌ ಎಂಬ ಯುವತಿಗೆ ಜಲಾಲ್‌ ಪಾಷಾ,ರಾಹುಲ್‌ ಮತ್ತು ಇನಾಯತ್‌ ಎಂಬ ಯುವಕರು ಸಾಥ್‌ ನೀಡಿದ್ದರು.ಯುವತಿ ಸೇರಿದಂತೆ ನಾಲ್ವರೂ ಮದ್ಯಪಾನ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಅಸಹ್ಯಕರ ದೃಶ್ಯ ನೋಡಿದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇಚ ಸ್ಥಳಕ್ಕಾಗಮಿಸಿದ ಮಡಿವಾಳಾ ಠಾಣಾ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

ಹಣ ಬಿಸಾಡಿ ..ಮಜಾ ನೋಡಿ..ಎಂದು ನಾಲ್ವರೂ ಕೂಗುತ್ತಾ ಜನರನ್ನು ಸೆಳೆಯಲು ಯತ್ನಿಸುತ್ತಿದ್ದರು ಎಂದು ಹೇಳಲಾಗಿದೆ. 

ಸಾರ್ವಜನಿಕ ಪ್ರದೇಶದಲ್ಲಿ ಅನುಚಿತವಾಗಿ ವರ್ತಿಸಿದ್ದು ಮತ್ತು ಮಹಿಳೆಯರ ಗೌರವಕ್ಕೆ ಧಕ್ಕೆ ತಂದ ಆರೋಪದಲ್ಲಿ ಯುವತಿ ಮತ್ತು ಮೂವರನ್ನು ಬಂಧಿಸಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next