Advertisement

Tragic: ಜೀಪು ಡಿಕ್ಕಿ; ಟ್ರೆಕ್ಕಿಂಗ್‌ಗೆ ತೆರಳಲು ಸಿದ್ಧಳಾಗಿದ್ಧ ಯುವತಿ ದುರ್ಮರಣ

11:29 AM Dec 18, 2023 | Team Udayavani |

ಬೆಂಗಳೂರು: ಅತೀವೇಗವಾಗಿ ಬಂದ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ರಸ್ತೆಬದಿ ನಿಂತಿದ್ದ ಯುವತಿ ಮೃತಪಟ್ಟಿರುವ ಘಟನೆ ಚಿಕ್ಕಜಾಲ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಹುಣಸಮಾರನಹಳ್ಳಿ ನಿವಾಸಿ ಬಿ. ಬಾನು (22) ಮೃತ ಯುವತಿ. ಡೆಕಥ್ಲಾನ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ, ಶನಿವಾರ ಮುಂಜಾನೆ ಸ್ನೇಹಿತರು ಹಾಗೂ ತನ್ನ ಸಹೋದ್ಯೋಗಿಗಳ ಜತೆ ನಂದಿಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ಹೋಗಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆ ಬೆಟ್ಟಅಲಸೂರಿನ ಅಂಡರ್‌ಪಾಸ್‌ ಬಳಿ ಇರುವ ಡೆಕಥ್ಲಾನ್‌ ಕಂಪನಿಯ ಮುಂಭಾಗ ಸ್ನೇಹಿತರಿಗಾಗಿ ಕಾಯುತ್ತಿದ್ದರು. ಇದೇ ವೇಳೆ ಅತೀ ವೇಗವಾಗಿ ಬಂದ ಬೊಲೆರೋ ವಾಹನ ಭಾನುಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಭಾನುವಾರ ಮುಂಜಾನೆ ಮೃತಪಟ್ಟಿದ್ದಾರೆ.

ಕೃತ್ಯ ಎಸಗಿದ ವಾಹನ ಹಾಗೂ ಅದರ ಚಾಲಕನ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಸಂಚಾರ ಪೊಲೀಸರು ಹೇಳಿದರು. ಈ ಸಂಬಂಧ ಚಿಕ್ಕಜಾಲ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next