ಬೆಂಗಳೂರು: ನಾಲ್ಕು ದಿನಗಳ ಹಿಂದಷ್ಟೇ ಹೈಕೋರ್ಟ್ ವಕೀಲರು ಸೇರಿ ಇಬ್ಬರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಅಂಡಮಾನ್ ನಿಕೋಬಾರ್ ಮೂಲದ ಯುವತಿ ಮಲ್ಲೇಶ್ವರಂ 8ನೇ ಕ್ರಾಸ್‌ನ ಬಳಿಯ ಪೇಯಿಂಗ್ ಗೆಸ್ಟ್ ಒಂದರಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.
ಪುಷ್ಪಾ ಅರ್ಚನಾ ಲಾಲ್ (26) ಆತ್ಮಹತ್ಯೆ ಮಾಡಿಕೊಂಡ ಯುವತಿ. ಎಲ್‌ಎಲ್‌ಬಿ ವ್ಯಾಸಂಗ ಮುಗಿಸಿರುವ ಪುಷ್ಪಾ, 2017ರಲ್ಲಿ ತರಬೇತಿ ಪಡೆಯಲು ಬೆಂಗಳೂರಿಗೆ ಬಂದಿದ್ದು, ಇನೆ#ಂಟ್ರಿ ರಸ್ತೆಯಲ್ಲಿರುವ ಜಯಂತ್ ಎಂ.ಪಟ್ಟಣಶೆಟ್ಟಿ ಆ್ಯಂಡ್ ಅಸೋಸಿಯೇಟ್ಸ್‌ನಲ್ಲಿ ತರಬೇತಿಗೆ ಸೇರಿಕೊಂಡಿದ್ದರು.
ಮಲ್ಲೇಶ್ವರದ ಪಿ.ಜಿ ಒಂದರಲ್ಲಿ ವಾಸವಾಗಿದ್ದರು. ಶನಿವಾರ ಬೆಳಗ್ಗೆ ಕೆಲಸದ ಮಹಿಳೆ ಈಕೆಯ ಕೊಠಡಿಯನ್ನು ಶುಚಿಗೊಳಿಸಲು ಬಂದಿದ್ದು, ಪುಷ್ಪಾ ಪ್ರಜ್ಞೆತಪ್ಪಿ ಬಿದ್ದಿದ್ದರು. ಬಳಿಕ ಪಿ.ಜಿ ಮಾಲೀಕರು ಕೊಠಡಿಗೆ ಬಂದು ಪರಿಶೀಲಿಸಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವೈಯ್ನಾಲಿಕಾವಲ್ ಪೊಲೀಸರು, ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೈ ಮೇಲೆ ಗಾಯ: ಪುಷ್ಪಾ ಅವರ ಕೈಯಲ್ಲಿ ತರಚಿದ ಗಾಯವಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪರೀûಾ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಎರಡು ದಿನಗಳ ಹಿಂದಷ್ಟೇ ಪುಷ್ಪಾ ಪೋಷಕರು ನಗರಕ್ಕೆ ಬಂದಿದ್ದರು ಎಂದು ಹೇಳಲಾಗಿದೆ.
ವಕೀಲರ ವಿರುದ್ಧ ಪ್ರಕರಣ ದಾಖಲಿಸಿದ್ದ ಪುಷ್ಪಾ: ನ.20ರಂದು ಪುಷ್ಪಾ ಅರ್ಚನಾ ಲಾಲ್, ಜಯಂತ್ ಎಂ. ಪಟ್ಟಣಶೆಟ್ಟಿ ಆ್ಯಂಡ್ ಅಸೋಸಿಯೇಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರನಾಯಕ್ ಹಾಗೂ ಹೈಕೋರ್ಟ್‌ನಲ್ಲಿ ವಕೀಲರಾಗಿರುವ ಚೇತನ್ ದೇಸಾಯಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ, ಕಮರ್ಷಿಯಲ್‌ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಚಂದ್ರನಾಯ್ಕ ಮತ್ತು ಚೇತನ್ ದೇಸಾಯಿ ತಮ್ಮನ್ನು ಇಂದಿರಾನಗರ ಸೇರಿ ನಗರದ ವಿವಿಧ ಹೋಟೆಲ್, ಪಬ್, ರೆಸ್ಟೋರೆಂಟ್‌ಗೆ ಕರೆದೊಯ್ದು ಬಲವಂತವಾಗಿ ಮದ್ಯ ಕುಡಿಸಿದ್ದರು. ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ತಮ್ಮ ಜತೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಪುಷ್ಪಾ ದೂರಿನಲ್ಲಿ ಆರೋಪಿಸಿದ್ದಾರೆ.