ಲಕ್ನೋ: ಪೊಲೀಸ್ ಕಾನ್ಸ್ ಟೇಬಲ್ ಸಚಿನ್ ರಾಟೆ ಕುಟುಂಬವು ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ವಿವಾಹ ಸಮಾರಂಭದ ಸಿದ್ಧತೆಯಲ್ಲಿ ತೊಡಗಿಕೊಂಡಿತ್ತು. ಆದರೆ ಇದೀಗ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ. ಅದಕ್ಕೆ ಕಾರಣ ಕಳೆದ ರಾತ್ರಿ ನಟೋರಿಯಸ್ ಕ್ರಿಮಿನಲ್ ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಗಾಯಗೊಂಡಿದ್ದ ಉತ್ತರ ಪ್ರದೇಶದ ಪೊಲೀಸ್ ಕಾನ್ಸ್ ಟೇಬಲ್ ಸಚಿನ್ ರಾಟೆ (30ವರ್ಷ) ಕೊನೆಯುಸಿರೆಳೆದಿದ್ದಾರೆ.!
ಇದನ್ನೂ ಓದಿ:ಮಕ್ಕಳಲ್ಲಿ ಕಂಡುಬರುವ ಹೊಟ್ಟೆನೋವಿನ ಕುರಿತು ಖ್ಯಾತ ವೈದ್ಯರು ಹೇಳುವುದೇನು ? |
ಸುಮಾರು 20 ಪಕ್ಷರಣಗಳಲ್ಲಿ ಬೇಕಾಗಿದ್ದ ಕೊಲೆ ಆರೋಪಿ ಅಶೋಕ್ ಯಾದವ್ ಬಂಧನಕ್ಕಾಗಿ ತೆರಳಿದ್ದ ನಾಲ್ವರು ಪೊಲೀಸ್ ತಂಡದ ಜತೆ ಸಚಿನ್ ಕೂಡಾ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಅಶೋಕ್ ಯಾದವ್ ಹಾಗೂ ಆತನ ಪುತ್ರ ಅಭಯ್ ಯಾದವ್ ಪೊಲೀಸರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಒಂದು ಗಂಟೆಗಳ ಕಾಲ ನಡೆದ ಗುಂಡಿನ ದಾಳಿಯ ವೇಳೆ ಸಚಿನ್ ಗೆ ಗುಂಡು ತಗುಲಿತ್ತು.
ಗುಂಡಿನ ಚಕಮಕಿ ಮುಂದುವರಿದ ಪರಿಣಾಮ ಪೊಲೀಸರು ಸ್ಥಳಕ್ಕೆ ಹೆಚ್ಚಿನ ಪಡೆಯನ್ನು ಕಳುಹಿಸುವಂತೆ ಮನವಿ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭಾರೀ ಪ್ರಮಾಣದ ಪೊಲೀಸರು ಆಗಮಿಸಿದ್ದು,ನಂತರ ಅಶೋಕ್ ಯಾದವ್ ಮತ್ತು ಅಭಯ್ ಯಾದವ್ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆಯಲಾಗಿತ್ತು ಎಂದು ವರದಿ ವಿವರಿಸಿದೆ.
ಗುಂಡೇಟು ತಗುಲಿದ್ದ ಪೊಲೀಸ್ ಕಾನ್ಸ್ ಟೇಬಲ್ ರಾಟೆಯನ್ನು ಕಾನ್ಪುರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅತೀಯಾದ ರಕ್ತಸ್ತಾವದ ಪರಿಣಾಮ ಮಧ್ಯರಾತ್ರಿ ಅವರು ಕೊನೆಯುಸಿರೆಳೆದಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮೂಲತಃ ಮುಜಾಫರ್ ನಗರದ ನಿವಾಸಿಯಾಗಿರುವ ಸಚಿನ್ ರಾಟೆ 2019ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದರು. 2024ರ ಫೆಬ್ರುವರಿ 5ರಂದು ಮಹಿಳಾ ಕಾನ್ಸ್ ಟೇಬಲ್ ಜತೆ ವಿವಾಹ ನಿಶ್ಚಯವಾಗಿತ್ತು. ಈ ನಿಟ್ಟಿನಲ್ಲಿ ಕುಟುಂಬ ಸದಸ್ಯರು ವಿವಾಹ ಸಿದ್ಧತೆಯಲ್ಲಿದ್ದರು. ಆದರೆ ಇದೀಗ ಶೋಕಾಚರಣೆಯಲ್ಲಿ ಮುಳುಗುವಂತೆ ಮಾಡಿರುವುದಾಗಿ ವರದಿ ತಿಳಿಸಿದೆ.