Advertisement

ಕಾಲಿವುಡ್‌ಗೆ ಮತ್ತೊಂದು ಆಘಾತ!: ನೇಣು ಬಿಗಿದ ಸ್ಥಿತಿಯಲ್ಲಿ ಯುವ ನಟಿ ಪತ್ತೆ

02:52 PM Sep 18, 2022 | Shwetha M |

ಚೆನ್ನೈ: ಇತ್ತೀಚೆಗೆ ತೆರೆಕಂಡಿದ್ದ ‘ವೈಧಾ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ತಮಿಳು ಯುವ ನಟಿ ದೀಪಾ ಚೆನ್ನೈನ ವಿರುಗಂಬಾಕ್ಕಂನಲ್ಲಿರುವ ತಮ್ಮ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

Advertisement

ಇದನ್ನೂ ಓದಿ:ಹೈಸ್ಕೂಲ್‌ಗಳಿಂದ ಅಫ್ಘಾನ್ ಹುಡುಗಿಯರನ್ನು ಹೊರಗಿಡುವುದು ನಾಚಿಕೆಗೇಡು: ವಿಶ್ವಸಂಸ್ಥೆ

ಪ್ರಾಥಮಿಕ ವರದಿಯ ಪ್ರಕಾರ ಆತ್ಮಹತ್ಯೆ ಎಂದು ಶಂಕಿಸಲಾಗಿದೆ. ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರೀತಿ ವಿಚಾರವಾಗಿ ಈ ದುಡುಕಿನ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

29 ವರ್ಷ ವಯಸ್ಸಿನ ನಟಿಯ ನಿಜವಾದ ಹೆಸರು ಪಾಲಿನ್ ಜೆಸ್ಸಿಕಾ ಮಿಸ್ಕಿನ್ ಆಗಿದ್ದು, ದೀಪಾ ಎಂದು ಖ್ಯಾತಿಹೊಂದಿದ್ದರು.  ‘ತುಪ್ಪರಿವಾಲನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಕೆ ಪ್ರೀತಿ ವಿಚಾರವಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ.

ಕೆಲ ದಿನಗಳ ಹಿಂದಷ್ಟೇ ಖ್ಯಾತ ಗೀತರಚನೆಕಾರ ಕಬಿಲನ್ ಅವರ ಪುತ್ರಿ ತೂರಿಗೈ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಪೋಷಕರು ಆಕೆಯ ಇಚ್ಛೆಗೆ ವಿರುದ್ಧವಾಗಿ ಮದುವೆಗೆ ಒತ್ತಾಯಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಮತ್ತೊಬ್ಬ ಯುವನಟಿ ಮೃತಪಟ್ಟಿರುವುದರಿಂದ ಕಾಲಿವುಡ್ ದೊಡ್ಡ  ಆಘಾತಕ್ಕೊಳಗಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next