ಅಹಮದಾಬಾದ್: ಭಾರತೀಯ ಅಂಡರ್ 19 ಕ್ರಿಕೆಟ್ ತಂಡದ ಮಾಜಿ ನಾಯಕ, ಸೌರಾಷ್ಟ್ರದ ಯುವ ಬ್ಯಾಟ್ಸಮನ್ ಅವಿ ಬರೋಟ್ ಅವರು ಶುಕ್ರವಾರ ನಿಧನರಾದರು. 2019-20ರಲ್ಲಿ ರಣಜಿ ಟ್ರೋಫಿ ಗೆದ್ದ ಸೌರಾಷ್ಟ್ರ ತಂಡದ ಸದಸ್ಯನಾಗಿದ್ದ ಅವಿ ಬರೋಟ್, 29ನೇ ವಯಸ್ಸಿನಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅ.15ರ ಸಂಜೆ ತೀವ್ರ ಹೃದಯಾಘಾತದಿಂದ ಅವಿ ನಿಧನರಾದರು ಎಂದು ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ತಿಳಿಸಿದೆ.
ಬಲಗೈ ಬ್ಯಾಟ್ಸಮನ್ ಮತ್ತು ಆಫ್ ಸ್ಪಿನ್ನರ್ ಆಗಿದ್ದ ಅವಿ ಬರೋಟ್ ತಲಾ 38 ಪ್ರಥಮ ದರ್ಜೆ ಮತ್ತು ಲಿಸ್ಟ್ ಎ ಪಂದ್ಯಗಳನ್ನಾಡಿದ್ದರು. 20 ಟಿ20 ಪಂದ್ಯಗಳನ್ನಾಡಿದ್ದರು.
ವಿಕೆಟ್ ಕೀಪಿಂಗ್ ಕೂಡಾ ಬಲ್ಲ ಅವಿ, ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 1547 ರನ್, ಲಿಸ್ಟ್ ಎ ಕ್ರಿಕೆಟ್ ನಲ್ಲಿ 1030 ರನ್ ಮತ್ತು ಟಿ20 ಪಂದ್ಯಗಳಲ್ಲಿ 717 ರನ್ ಗಳಿಸಿದ್ದಾರೆ.
ಇದನ್ನೂ ಓದಿ:ಕೊನೆಗೂ ಫಲ ನೀಡಿತು ಗಂಗೂಲಿ ಪ್ರಯತ್ನ: ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ
2011ರಲ್ಲಿ ಅವಿ ಬರೋಟ್ ಅವರು ಭಾರತೀಯ ಅಂಡರ್ 19 ತಂಡದ ನಾಯಕರಾಗಿದ್ದರು. ಈ ವರ್ಷದ ಸೈಯದ್ ಮುಷ್ತಾಕ್ ಅಲಿ ಕೂಟದಲ್ಲಿ ಕೇವಲ 53 ಎಸೆತಗಳಲ್ಲಿ 122 ರನ್ ಬಾರಿಸಿ ಗಮನ ಸೆಳೆದಿದ್ದರು.