Advertisement

ಅಧಿಕ ಸಿಸಿ ಬೈಕ್‌ಗಳತ್ತ ಯುವ ಜನರ ಚಿತ್ತ

09:06 AM Jul 19, 2019 | mahesh |

ಮಣಿಪಾಲ: ಹೊಸ ಟ್ರೆಂಡ್‌ಗಳು ರೂಪುಗೊಳ್ಳುತ್ತಾ ಹೋದಂತೆ ಯುವಜನತೆ ಅದಕ್ಕೆ ಬೇಗನೇ ಸ್ಪಂದಿಸುತ್ತಾರೆ. ಈ ಬದಲಾವಣೆ ಪರ್ವ ಇದೀಗ ವಾಹನಗಳ ಮೇಲೂ ನೆಟ್ಟಿದೆ. ವಿಶೇಷ ಎಂದರೆ ಉದ್ಯಮಗಳು ಯುವಜನರನ್ನು ಆಕರ್ಷಿಸಲೆಂದೇ ಇಂತಹ ಯೋಜನೆಗಳನ್ನು ರಚಿಸುತ್ತಿವೆ ಎಂಬುದು ಇನ್ನೊಂದು ಭಾಗ.

Advertisement

ಮಾರುಕಟ್ಟೆಯಲ್ಲಿ ಏನೇನಾಯಿತು?
2014 ಮತ್ತು 2019ರ ಮಧ್ಯೆ 75ರಿಂದ 125 ಸಿಸಿ ಬೈಕ್‌ಗಳ ವ್ಯಾಪಾರದಲ್ಲಿ 8 ಶೇ. ಕುಸಿತ ಕಂಡಿದೆ. ಆರಂಭದಲ್ಲಿ 84 ಶೇ. ದಷ್ಟು ಇದ್ದ ಅಂಶ 78ಕ್ಕೆ ಕುಸಿದಿದೆ. 2012-13ರಲ್ಲಿ ಈ ಮಾದರಿಗಳ 10 ಮಿಲಿಯನ್‌ ದ್ವಿ ಚಕ್ರ ವಾಹನಗಳಲ್ಲಿ 84 ಶೇ. ಮಾರಾಟವಾಗಿದ್ದವು. 2013-14ರಲ್ಲಿ ಇದು 10.5 ಮಿಲಿಯನ್‌ ವಾಹನಗಳಲ್ಲಿ 83.7 ಶೇ. ವಾಹನಗಳು ಮಾತ್ರ ಮಾರಾಟಗೊಂಡಿದ್ದವು.

ಆಗಿದ್ದೇನು?
ಯುವ ಜನತೆ ಸಂಖ್ಯೆ ಹೆಚ್ಚಾಗಿದ್ದು ಮತ್ತು ಟ್ರೆಂಡ್‌ಗಳು ನಿರ್ಮಾಣವಾಗಿದ್ದು ಕಾರಣ. ಹೊಸ ಫ್ಯಾಷನ್‌ಗಳ ಅರಿವು ಬೇಗನೆ ಆಗುತ್ತದೆ. ಪಾಶ್ಚಾತ್ಯ ರಾಷ್ಟ್ರ ಗಳಲ್ಲಿ ಕಂಡುಬರುವ ದ್ವಿಚಕ್ರ ವಾಹನಗಳ ಕ್ರೇಜ್‌ ದ್ವಿಚಕ್ರ ವಾಹನ ತಯಾಕರನ್ನು ಪ್ರರೇಪಿಸಿದೆ. ಕಂಪೆನಿಗಳು ಅಧಿಕ ಸಾಮರ್ಥ್ಯದ ಬೈಕುಗಳನ್ನು ಮಾರುಕಟ್ಟೆಗೆ ಇಳಿಸಿವೆ.

ಎಷ್ಟು ಏರಿಕೆ ?
2012-13ರ ಆರ್ಥಿಕ ವರ್ಷದಲ್ಲಿ ಮಾರಾಟಗೊಂಡ ವಾಹನಗಳಲ್ಲಿ 125ಸಿಸಿ ಯಿಂದ 250ಸಿಸಿ ಮಾದರಿ ವಾಹನಗಳು ಶೇ. 15ರಷ್ಟು ಇದ್ದವು. 2013-14ರಲ್ಲಿ ಶೇ. 14.3ರಷ್ಟಿತ್ತು. ಆದರೆ 2018-19ರಲ್ಲಿ ಶೇ. 17.6ಕ್ಕೆ ಕ್ಷೀಪ್ರ ಏರಿಕೆ ಕಂಡಿದೆ.

ಇನ್ನು ಎಲೆಕ್ಟ್ರಿಕ್‌ ಯುಗ/ ಪರ್ಯಾಯ ಇಂಧನ!
ಕೇಂದ್ರ ಸರಕಾರ ಎಲೆಕ್ಟ್ರಿಕ್‌ ವಾಹನಗಳತ್ತ ಹೆಚ್ಚು ಮನಸ್ಸು ಮಾಡುತ್ತಿದೆ. ಇನ್ನು ಎಲೆಕ್ಟ್ರಿಕ್‌ ವಾಹನಗಳು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದ್ದು, ಕೆಲವು ಕಂಪೆನಿಗಳು ಈಗಾಗಲೇ ಈ ಕಾರ್ಯ ಆರಂಭಿಸಿವೆ. ಇನ್ನು ಟಿವಿಎಸ್‌ ಸಂಸ್ಥೆ ಇಥೆನಾಲ್‌ ಇಂಧನದಿಂದ ಕೆಲಸ ಮಾಡುವ ಬೈಕ್‌ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು.

Advertisement

ಮೂಲ ಸೌಕರ್ಯ ವೃದ್ಧಿ
ಭಾರತದ ರಸ್ತೆಗಳು ಸುಧಾರಿಸಿವೆ. ಆಧುನಿಕ ವಾಹನಗಳ ಮೇಲೆ ಸವಾರಿ ಆರಾಮದಾಯಕ. ವಾಹನಗಳ ಸಾಮರ್ಥ್ಯ ಹೆಚ್ಚುತ್ತಾ ಹೋದಂತೆ ದರ ಲಕ್ಷವನ್ನು ದಾಟುತ್ತದೆ.

ಇತರ ಕಾರಣ ಏನು?
ಅಧಿಕ ಸಿಸಿ ವಾಹನಗಳು ಶಕ್ತಿ ಉತ್ಪಾದನೆಗೆ ಹೆಚ್ಚು ಇಂಧನವನ್ನು ದಹಿಸುತ್ತವೆ. 150ಸಿಸಿ ಅಧಿಕ ಸಾಮರ್ಥ್ಯದ ಬೈಕ್‌ಗಳ ಮೈಲೇಜ್‌ 13ರಿಂದ 55ರ ಒಳಗೆ ಇರುತ್ತದೆ. 500 ಸಿಸಿ ಮೇಲಿನ ವಾಹನಗಳು 25-30 ಮೈಲೇಜ್‌ ನೀಡುತ್ತವೆ. 75-125 ಸಿಸಿ ವಾಹನಗಳು 60-80 ಕಿ.ಮೀ. ಮೈಲೇಜ್‌ ನೀಡುತ್ತಿದ್ದವು. ಆದರೂ ಗ್ರಾಹಕರು ಅಧುನಿಕ ಬೈಕ್‌ಗಳ ಮೇಲೆ ಸವಾರಿಗೆ ಮುಂದಾಗುತ್ತಾರೆ. ಪ್ರಯಾಣ ಥ್ರಿಲ್‌ ಆಗಿರುತ್ತದೆ ಎಂಬುದು ಕಾರಣ.

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಬೇಡಿಕೆ
75-125 ಸಿಸಿ ಬೈಕ್‌ಗಳ ಬೇಡಿಕೆ ಇಳಿಮುಖ

ಉದಯವಾಣಿ ಸ್ಪೆಷಲ್‌ ಡೆಸ್ಕ್

Advertisement

Udayavani is now on Telegram. Click here to join our channel and stay updated with the latest news.

Next