Advertisement

ಸರಸ್ವತಿ ಕಲ್ಯಾಣಿ ಸ್ವತ್ಛತೆಗೆ ಮುಂದಾದ ಯುವಕರು

10:15 AM Feb 12, 2018 | Team Udayavani |

ಕಾಳಗಿ: ಇಲ್ಲಿನ ಸರಸ್ವತಿ ದೇವಸ್ಥಾನದ ಆವರಣದಲ್ಲಿರುವ ಪುರಾತನ ಕಲ್ಯಾಣಿ ಸ್ವತ್ಛತಾ ಕಾರ್ಯಕ್ಕೆ ಸಮಾನ ಮನಸ್ಕ ಯುವಕರ ತಂಡ ರವಿವಾರ ಚಾಲನೆ ನೀಡಿತು. ಕರ್ನಾಟಕ ರಾಜ್ಯದಲ್ಲೆ ಎರಡನೇಯದ್ದು ಎಂಬ ಖ್ಯಾತಿ ಪಡೆದ ಪುರಾತನ ಸರಸ್ವತಿ ದೇವಸ್ಥಾನದ ಆವರಣದಲ್ಲಿ ಶತಮಾನಗಳ ಇತಿಹಾಸ ಹೊಂದಿರುವ ಬೃಹದಾಕಾರದ ಕಲ್ಯಾಣಿಯಿದೆ. ಆದರೆ ಸ್ಥಳೀಯರ ನಿರ್ಲಕ್ಷ್ಯದಿಂದಾಗಿ ಕಲ್ಯಾಣಿಯಲ್ಲಿ ಕಲ್ಲು, ಕಸ ತುಂಬಿಕೊಂಡು ಸಂಪೂರ್ಣ ಹಾಳು ಬಿದ್ದು ನೀರು ಬತ್ತಿ ಹೋಗಿದೆ. ಆದರೆ ಈಗ ದೇವಸ್ಥಾನ ಹಾಗೂ ಕಲ್ಯಾಣಿ ದೆಸೆ ಬದಲಾಯಿಸಲು ಯುವಕರ ತಂಡ ಮುಂದಾಗಿದೆ.

Advertisement

ಕಲಬುರಗಿ, ಯಾದಗಿರಿ, ಬೀದರ ಮೊದಲಾದ ಕಡೆಗಳಿಂದ ಕಾಳಗಿಗೆ ಬಂದಿಳಿದಿರುವ ಹತ್ತಾರು ಜನ ಉತ್ಸಾಹಿ ಯುವಕರ ತಂಡ ಸ್ಥಳೀಯರೊಂದಿಗೆ ಸೇರಿಕೊಂಡು ಪ್ರತಿ ರವಿವಾರ ಬೆಳಗ್ಗೆಯಿಂದ ಸಂಜೆ ವರೆಗೆ ಶ್ರಮದಾನ ಮಾಡುವ ಮೂಲಕ ಕಲ್ಯಾಣಿ ಹಾಗೂ ಸರಸ್ವತಿ ಗುಡಿ ಸ್ವತ್ಛಗೊಳಿಸುವ ಗುರಿ ಇಟ್ಟುಕೊಂಡಿದೆ. 

ಈಗಾಗಲೇ ಕಾರ್ಯಾರಂಭ ಮಾಡಿರುವ ಯುವಕರು ಬಾವಿ ಸಂಪೂರ್ಣ ಸ್ವತ್ಛಗೊಳಿಸಿ ನೀರು ಬರುವವರೆಗೆ ಬಿಡುವುದಿಲ್ಲ. ಇದಕ್ಕೆ ಎಷ್ಟೇ ರವಿವಾರಗಳು ಬೇಕಾದರೂ ಸರಿ ನಾವು ಶ್ರಮದಾನ ಮಾಡಲು ಸಿದ್ಧರಿದ್ದೇವೆ ಎನ್ನುವ ಯುವಕರು, ಬಾವಿ ನಂತರ ದೇವಸ್ಥಾನವನ್ನೂ ಸ್ವತ್ಛ ಮಾಡಲಾಗುವುದು ಎಂದು ತಿಳಿಸಿದ್ದಾರೆ. 

ಸ್ಥಳೀಯರಾದ ಹನುಮಂತಪ್ಪ ಕಾಂತಿ, ರವಿದಾಸ ಪತಂಗೆ, ಮುನೀರ್‌ಬೇಗ್‌ ಬಿಜಾಪುರ, ಬಾಬು ನಾಟೀಕಾರ, ನಾಮದೇವ ಸೇಗಾಂವಕರ್‌, ಶ್ರೀಮಂತ ನಾಶಿ, ರಾಜಕುಮಾರ ಪಂಚಾಳ, ಬಸವರಾಜ ಸಿಂಗಶೆಟ್ಟಿ, ಬಸವರಾಜ ಡೋಣಗಾಂವ, ಪ್ರದೀಪ ಮಾಳಾ, ವಿನಾಯಕ ಗುರುಮಠಕಲ್‌ ಮೊದಲಾದವರು ಸ್ವತ್ಛತಾ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next