Advertisement

ಯುವಜನತೆ ಅನ್ಯಾಯ ಸಹಿಸದಿರಲಿ

08:54 AM Jul 06, 2017 | Team Udayavani |

ದಾವಣಗೆರೆ: ಯುವಜನತೆ ಸಮಾಜದಲ್ಲಿ ನಡೆಯುವ ಅನ್ಯಾಯವನ್ನು ಮೂಕ ಪ್ರೇಕ್ಷಕರಂತೆ ನೋಡಬಾರದು ಎಂದು ಎಐಡಿವೈಒ ಜಿಲ್ಲಾ ಸಂಘಟನಾ ಸಮಿತಿ ಸದಸ್ಯ ಮಂಜುನಾಥ ಕುಕ್ಕವಾಡ ಅಭಿಪ್ರಾಯಪಟ್ಟಿದ್ದಾರೆ.

Advertisement

ಬುಧವಾರ ನಗರದ ಚಾಮುಂಡೇಶ್ವರಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎಐಡಿವೈಒನ 51ನೇ ಸಂಸ್ಥಾಪನಾ ದಿನಚರಣೆಯಲ್ಲಿ ಮಾತನಾಡಿದ ಅವರು, ಯುವ ಜನತೆ ನಮ್ಮ ಸುತ್ತಲಿನಲ್ಲಿ ನಡೆಯುತ್ತಿರುವ ಅನ್ಯಾಯ ನೋಡಿ 
ಸುಮ್ಮನಿರಬಾರದು. ಜನರನ್ನು ಶೋ‚ಷಿಸುತ್ತಾ ದೇಶ ಲೂಟಿ ಹೊಡೆಯುತ್ತಿರುವ ಆಳುವ ಬಂಡವಾಳ ಶಾಹಿ ವರ್ಗದ ವಿರುದ್ಧ ದನಿ ಎತ್ತಬೇಕು ಎಂದರು. ಎಲ್ಲಾ ಸರ್ಕಾರಗಳು ಲಾಭದಾಸೆಗೆ ಉದ್ಯಮ ಆರಂಭಿಸುವ ಬಂಡವಾಳದಾರರ ರಕ್ಷಣಗೆ ಟೊಂಕ ಕಟ್ಟಿ ನಿಂತಿವೆ. ಇದರಿಂದ ಸಾಮಾನ್ಯ ಜನ, ರೈತ, ಕಾರ್ಮಿಕರ ಜೀವನ ಸರ್ವನಾಶವಾಗುತ್ತಿದೆ. ಇದನ್ನು ಕಂಡು ಯುವಜನತೆ ಸುಮ್ಮನಿರದೆ ಭಗತ್‌ಸಿಂಗ್‌, ನೇತಾಜಿ ಸುಭಾ‚ಷ್‌ ಚಂದ್ರಬೋಸ್‌ ಮುಂತಾದ
ಮಹಾನ್‌ ಹೋರಾಟಗಾರಂತೆ ಹೋರಾಡಬೇಕು ಎಂದು ಅವರು ಮನವಿ ಮಾಡಿದರು.

ಸಂಘಟನೆ ಜಿಲ್ಲಾ ಕಾರ್ಯದರ್ಶಿ ತಿಪ್ಪೇಸ್ವಾಮಿ ಮಾತನಾಡಿ, ದೇಶ ಸ್ವತಂತ್ರ ಪಡೆದು 70 ವರ್ಷ ಕಳೆದರೂ ಇಂದಿನ ಸರ್ಕಾರಗಳು ಖಾಸಗಿಕರಣ ಎಂಬ ಹೆಸರಿನಲ್ಲಿ ಜನತೆಗೆ ನೈಜವಾಗಿ ಸಿಗಬೇಕಾದ ಮೂಲಭೂತ ಸೌಕರ್ಯ ತೆಗೆದು
ಹಾಕಿ ದುಡ್ಡಿದವರಿಗಾಗಿ ಮಾತ್ರ ಸೌಲಭ್ಯ ಎಂಬ ನೀತಿ ಅನುಸರಿಸುತ್ತಿದೆ. ಇದರಿಂದ ಇಂದಿನ ಯುವಕರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಉದ್ಯೋಗವಿಲ್ಲದೇ ಪ್ರತಿ ವರ್ಷ ಕೋಟ್ಯಂತರ ಯುವಕರು
ನಿರುದ್ಯೋಗಿಗಳಾಗುತ್ತಿದ್ದಾರೆ ಎಂದು ಆರೋಪಿಸಿದರು.  ಕಾಲೇಜಿನ ಪ್ರಾಂಶುಪಾಲ ಲಕ್ಷಣ ಅಧ್ಯಕ್ಷತೆ ವಹಿಸಿದ್ದರು. ಶಶಿಕುಮಾರ್‌, ಗುರು ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next