Advertisement
ತೀರಾ ಗ್ರಾಮೀಣ ಭಾಗದ ಎಳೆಯರಿಗೂ ಇಂತಹ ಅವಕಾಶ ಸಿಗಬೇಕೆನ್ನುವ ದೃಷ್ಟಿಯಿಂದ ಬ್ರಹ್ಮಾವರ ಸಮೀಪದ ಪೇತ್ರಿಯ ವಿದ್ಯಾ ಟ್ಯುಟೋರಿಯಲ್ ಕಾಲೇಜಿನಲ್ಲಿ ಮೂರು ವರುಷದಿಂದ ಹದಿನಾರು ವರುಷ ವಯೋಮಾನದ ಮಕ್ಕಳಿಗೆ ಹತ್ತು ದಿನಗಳ ಪ್ರತಿಭಾ ವಿಕಸನ ಶಿಬಿರವನ್ನು ಆಯೋಜಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಂಪನ್ಮೂಲ ವ್ಯಕ್ತಿಗಳಿಂದ ಭರತನಾಟ್ಯ, ಸಂಗೀತ, ಚಿತ್ರಕಲೆ, ಪೇಪರ್ ಕ್ರಾಪ್ಟ್, ಕ್ಲೇ ಮಾಡೆಲ್, ಪಾಟ್ ಪೈಂಟಿಂಗ್, ಯೋಗ, ಶ್ಲೋಕ, ಕರಾಟೆ, ಒರಿಗಾಮಿ, ಭಾಷಣ ಕಲೆ ಮುಂತಾದವುಗಳ ಬಗ್ಗೆ ಎಳೆಯರ ಮನಸ್ಸಿಗೆ ಮುದ ನೀಡುವಂತೆ ತರಬೇತಿ ನೀಡಲಾಯಿತು. ಜತೆಗೆ ಪ್ರತಿದಿನ ಸಾಮಾನ್ಯ ಜ್ಞಾನ ವೃದ್ಧಿಗಾಗಿ ಪರಿಸರದ ನರ್ಸರಿ, ಕಾರ್ಖಾನೆ, ಐತಿಹಾಸಿಕ ಸ್ಥಳಗಳ ಸಂದರ್ಶನ ಮತ್ತು ಉರಗ ತಜ್ಞ ಗುರುರಾಜ ಸನಿಲ್ ಅವರಿಂದ ಹಾವು-ನಾವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
Advertisement
ಪ್ರತಿಭಾ ವಿಕಸನದಲ್ಲಿ ಸಂಭ್ರಮಿಸಿದ ಎಳೆಯರು
03:45 AM May 12, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.