Advertisement
ಭದ್ರಾವತಿ ತಾಲೂಕಿನ ಜೇಡಿಕಟ್ಟೆ ಗ್ರಾಮದ ವಾಸಿ ಹರೀಶ್ (32) ಗುರುವಾರ ಮೂಛೆì ಹೋಗಿದ್ದರಿಂದ ಆತನನ್ನು ಶಿವಮೊಗ್ಗ ಮ್ಯಾಕ್ಸ್ ಹಾಸ್ಟಿಟಲ್‌ಗೆ ಸೇರಿಸಲಾಗಿತ್ತು. ಮಿದುಳು ನಿಷ್ಕಿಯಗೊಂಡಿತ್ತು. ಆದರೆ ಚಿಕಿತ್ಸೆ ಫಲಿಸಲಿಲ್ಲ. ಈ ಕುರಿತು ಕುಟುಂಬದವರಿಗೆ ಕಣ್ಣುಗಳನ್ನು ದಾನ ಮಾಡಬಹುದು ಎಂದು ತಿಳಿಸಿದೆ. ಆದರೆ ಕುಟುಂಬದವರೇ ಬಹು ಅಂಗಾಂಗಗಳ ದಾನಕ್ಕೆ ಸೂಚಿಸಿದರು. ಹಾಗಾಗಿ ಬೆಂಗಳೂರಿಗೆ ದೇಹವನ್ನು ರವಾನಿಸಲಾಗಿದೆ ಎಂದು ಮ್ಯಾಕ್ಸ್ ಆಸ್ಪತ್ರೆ ವೈದ್ಯ ನಾರಾಯಣ ಪಂಜಿ ತಿಳಿಸಿದರು.
ಜೀರೋ ಟ್ರಾಫಿಕ್ ವ್ಯವಸೆ: ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದೇಹವನ್ನು ಸಾಗಿಸಬೇಕಿದ್ದರಿಂದ ಗುರುವಾರ ರಾತ್ರಿ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಅಭಿನವ್ ಖರೆಗೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪಿದ ಅವರು ಜೀರೋ ಟ್ರಾಫಿಕ್‌ಗೆ ವ್ಯವಸ್ಥೆ ಮಾಡಿದ್ದರು. ಬೆಳಗ್ಗೆ 7.30ಕ್ಕೆ ವಿಶೇಷ ಆಂಬ್ಯುಲೆನ್ಸ್‌ನಲ್ಲಿ ದೇಹವನ್ನು ಕೊಂಡೊಯ್ಯಲಾಯಿತು. ಪೊಲೀಸ್ ಇಲಾಖೆ ಪೆಟ್ರೋಲಿಂಗ್ ವಾಹನವು ಆಂಬ್ಯುಲೆನ್ಸ್‌ಗೆ ಬೆಂಗಾವಲಾಗಿತ್ತು. ಟ್ರಾಫಿಕ್ ಸಮಸ್ಯೆಯಿಂದಾಗಿ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಹರೀಶ್ ದೇಹ ತಲುಪುವುದು ತಡವಾಗುವ ಸಾಧ್ಯತೆಯಿತ್ತು. ಹೀಗಾಗಿ ಶಿವಮೊಗ್ಗ ಎಸ್‌ಪಿ ಅಭಿನವ್ ಖರೆ ಅವರನ್ನು ಮಧ್ಯರಾತ್ರಿ ಸಂಪರ್ಕಿಸಿ ವಿಚಾರ ತಿಳಿಸಿದೆವು. ಕೂಡಲೇ ಅವರು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದರು.
– ಶಿವಮೊಗ್ಗ ನಂದನ್, ಹರೀಶ್ ಸಂಬಂಧಿ
Related Articles
ಮೆದುಳು ನಿಷ್ಕ್ರಿಯಗೊಂಡಿರುವುದರಿಂದ ಹರೀಶ್ ಬದುಕುಳಿಯುವುದಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಆತನ ತಂದೆ ಬಾಲಕೃಷ್ಣ (59) ಅವರಿಗೆ ಆಘಾತವಾಗಿದೆ. ಕುಸಿದು ಬಿದ್ದ ಅವರನ್ನು ಕೂಡಲೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮೆದುಳಿನಲ್ಲಿ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಿಸದೇ ಬಾಲಕೃಷ್ಣ ಕೊನೆಯುಸಿರೆಳೆದರು. ಒಂದೇ ಮನೆಯಲ್ಲಿ ಎರಡೆರಡು ಸಾವಿನ ಸುದ್ದಿಯಿಂದ ಸಂಬಂ ಧಿಕರು, ಜೇಡಿಕಟ್ಟೆ ಗ್ರಾಮ ಹಬ್ಬದ ಮಾರನೇ ದಿನವೇ ಸೂತಕದ ಛಾಯೆಯಲ್ಲಿದೆ.
Advertisement