ಮುಳಬಾಗಿಲು: ಮದುವೆ ಆಗಲು ಹೆಣ್ಣು ಸಿಗದೇ ಎಷ್ಟೋ ಮಂದಿ ಆತ್ಮಹತ್ಯೆ ಮಾಡಿ ಕೊಳ್ಳು ತ್ತಿ ರುವ ಈ ಸಂದರ್ಭದಲ್ಲಿ ತಾಲೂಕಿನ ಯುವಕನೊಬ್ಬ ಒಂದೇ ಮಂಟಪದಲ್ಲಿ ಅಕ್ಕ-ತಂಗಿ ಇಬ್ಬರನ್ನೂ ವಿವಾಹವಾಗಿರುವುದು ಎಲ್ಲರ ಗಮನ ಸೆಳೆದಿದೆ.
ತಾಲೂಕಿನ ತಿಮ್ಮರಾವುತ ನಹಳ್ಳಿ ಗ್ರಾಪಂ ವ್ಯಾಪ್ತಿಯ ವೇಗಮಡಗು ಗ್ರಾಮದಲ್ಲಿ ಮೇ 7 ರಂದು ಕುಟುಂಬಸ್ಥರ ಸಮ್ಮು ಖದಲ್ಲಿ ಈ ವಿವಾಹ ವಾಗಿದೆ. ಆರತಕ್ಷತೆ ಆಮಂತ್ರಣ ಪತ್ರಿಕೆ ಯಲ್ಲಿ ವರನು ಇಬ್ಬರು ಯುವತಿ ಯರ ಜೊತೆ ವಿವಾಹ ವಾಗಿರುವ ಚಿತ್ರವು ಸಾಮಾಜಿಕ ಜಾಲತಾಣ ದಲ್ಲಿ ಹರಿಯ ಬಿಡಲಾಗಿದೆ.
ಇದನ್ನೂ ಓದಿ : 1 ತಿಂಗಳ ಚಂದಾದಾರಿಕೆಯನ್ನು ರದ್ದುಗೊಳಿಸಿದ ಅಮೆಜಾನ್ ಪ್ರೈಮ್; ಫ್ರೀ ಟ್ರಯಲ್ ಸೇವೆ ಕೂಡ ಅಲಭ್ಯ
ಮುದಿಗೆರೆ ಮ.ಗಡ್ಡೂರು ಗ್ರಾಪಂ ವ್ಯಾಪ್ತಿಯ ಚಿನ್ನಬಾಲೇ ಪಲ್ಲಿ ಗ್ರಾಮದ ದೊಡ್ಡಲಕ್ಷ್ಮಮ್ಮ ಮತ್ತು ಚಿಕ್ಕಚನ್ನರಾಯಪ್ಪ ಅವರ ಪುತ್ರ ಉಮಾಪತಿ, ಸುಪ್ರಿಯ ಮತ್ತು ಲಲಿತಾಳನ್ನು ಈಗ ಮದುವೆ ಆಗಿದ್ದಾರೆ.
ಈಗ ಮದುವೆಯಾಗಿರುವ ಯುವತಿಯರ ತಾಯಂದಿರಾದ ರಾಣೆಮ್ಮ ಮತ್ತು ಸುಬ್ಬಮ್ಮ ಉಮಾಪತಿ ಅವರ ಸಹೋದರಿಯರಾಗಿದ್ದು, ಇವರಲ್ಲಿ ಒಬ್ಬರಿಗೆ ಕಿವಿ ಕೇಳುವುದಿಲ್ಲ, ಮಾತು ಬರುವುದಿಲ್ಲ. ಈ ಇಬ್ಬರನ್ನು ಸೋದರ ಸಂಬಂಧಿ ಆದ ವೇಗಮಡಗು ಗ್ರಾಮದ ನಾಗರಾಜಪ್ಪಗೆ ಕೊಟ್ಟು ಮದುವೆ ಮಾಡಲಾಗಿತ್ತು.
ಈಗ ಮದುವೆ ಆಗಿರುವವರ ಯುವತಿಯರಲ್ಲಿ ಸುಪ್ರಿಯಾ ಮೂಕಿ ಎನ್ನಲಾಗಿದೆ. ತನ್ನ ಅಕ್ಕನ ಮದುವೆಯಾದರೆ ಮಾತ್ರ ಮದುವೆ ಆಗುತ್ತೇನೆಂದು ಲಲಿತಾ ಪಟ್ಟು ಹಿಡಿದ ಕಾರಣ ಉಮಾಪತಿ, ತಮ್ಮ ಸ್ವಗ್ರಾಮದ ಅಂಚಿನಲ್ಲಿರುವ ಕುರುಬರಹಳ್ಳಿ ಗ್ರಾಮದ ಚನ್ನರಾಯಸ್ವಾಮಿ ದೇಗುಲದಲ್ಲಿ ಎರಡು ಕುಟುಂಬಗಳ ಸಮ್ಮುಖದಲ್ಲಿ ಅಕ್ಕತಂಗಿ ಇಬ್ಬರನ್ನೂ ಸರಳವಾಗಿ ವಿವಾಹವಾಗಿದ್ದಾರೆ