Advertisement

ಯುವತಿಯರಿಗೆ ಕಥೆ ಇಷ್ಟ

06:35 AM Mar 18, 2019 | |

ಬೆಂಗಳೂರು: “ನಾನು ಕಾಲೇಜು ದಿನಗಳಲ್ಲಿ ಕವಿತೆ ರಚಿಸುತ್ತಿದ್ದೆ.ಆದರೆ ಹುಡುಗಿಯರು ಕವಿತೆಗಳಿಗಿಂತ ಕತೆಗಳನ್ನು ಹೆಚ್ಚು ಇಷ್ಟಪಡುತ್ತಾರೆ ಎಂಬುವುದನ್ನು ಅರಿತುಕೊಂಡೆ. ಆ ನಂತರದ ದಿನಗಳಲ್ಲಿ ಕತೆ ಬರೆಯುವ ಗೀಳು ಹಚ್ಚಿಕೊಂಡೆ’ ಎಂದು ಹೇಳಿ ಕವಿ ಮತ್ತು ಕತೆಗಾರ ಜಯಂತ ಕಾಯ್ಕಿಣಿ ಹೇಳಿದರು. 

Advertisement

ವಾಡಿಯಾ ಸಭಾಂಗಣದಲ್ಲಿ ಭಾನುವಾರ ಲೋಕಾರ್ಪಣೆಗೊಂಡ ತಮ್ಮ “ನೋ ಪ್ರಸೆಂಟ್ಸ್‌ ಪ್ಲೀಸ್‌’ ಕೃತಿ ಬಿಡುಗಡೆ ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ತಮ್ಮೊಳಗಿನ ಕತೆಗಾರ ಮತ್ತು ಕವಿತೆಗಳ ಹುಟ್ಟು ಸೇರಿದಂತೆ ಹಲವು ಅನುಪಮ ವಿಷಯಗಳ ಬಗ್ಗೆ ಸಭಿಕರೊಂದಿಗೆ ಮನಬಿಚ್ಚಿ ಮಾತನಾಡಿದರು.

ಆಗ ಪತ್ರಿಕೆಗಳಲ್ಲಿ ಕತೆ ಪ್ರಕಟವಾದರೆ ಆ ಲೇಖಕರ ಫೋಟೊ ಕೂಡ ಬರುತ್ತಿತ್ತು. ಹೀಗಾಗಿ ನನ್ನ ಫೋಟೊ ಕೂಡ ಪತ್ರಿಕೆಯಲ್ಲಿ ಬರಲಿ ಎಂಬ ಕಾರಣದಿಂದಾಗಿ ಮತ್ತಷ್ಟು ಕತೆಗಳನ್ನು ಬರೆಯ ತೊಡಗಿದೆ. ಇದು ಹೊಸ ಕತೆಗಳ ಹುಟ್ಟಿಗೆ ಕಾರಣವಾಯಿತು. ನಂತರ ಬರವಣಿಗೆಯಲ್ಲೆ ರುಚಿ ಕಂಡುಕೊಂಡೆ ಎಂದರು.

ಮೂಲತಃ ನಾನು ವಿಜ್ಞಾನದ ವಿದ್ಯಾರ್ಥಿ ಆದರೆ ಸಾಹಿತ್ಯದ ಬಗ್ಗೆ ಅಪಾರ ಒಲವು. ಅಪ್ಪ (ಗೌರೀಶ ಕಾಯ್ಕಿಣಿ)ಸಾಹಿತ್ಯದ ಬರವಣೆಗೆಯಲ್ಲಿ ತೊಡಗಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಪ್ರಭಾವಿಸಿದರು. ಜತೆಗೆ ಶಿವರಾಮ ಕಾರಂತ, ಪಿ.ಲಂಕೇಶ್‌, ಕುವೆಂಪು ಸೇರಿದಂತೆ ಹಲವು ಹಿರಿಯ ಕಾದಂಬರಿಕಾರರ ಕೃತಿಗಳನ್ನು ಓದಿದ್ದೇ.

ಹಿರಿಯ ಸಾಹಿತಿಗಳೊಂದಿಗಿನ ಒಡನಾಟ ಕೂಡ ಪಕ್ವತೆಯನ್ನು ತಂದುಕೊಟ್ಟಿತು ಎಂದು ನುಡಿದರು. ಮುಂಬೈನಲ್ಲಿ ಹಲವು ವರ್ಷಗಳನ್ನು ಕಳೆದಿದ್ದೇನೆ. ಬೇರೆ-ಬೇರೆ ಅನುಭವಗಳನ್ನು ಕಂಡಿದ್ದೇನೆ. ಅಲ್ಲಿ ನಾನು ಕಂಡ ಸನ್ನಿವೇಶಗಳೇ ಈಗ “ನೋ ಪ್ರಸೆಂಟ್ಸ್‌ ಪ್ಲೀಸ್‌’ ಕೃತಿಯಲ್ಲಿ ಕತೆಗಳಾಗಿ ರೂಪಡೆದಿವೆ ಎಂದು ಹೇಳಿದರು.

Advertisement

ಉದಯವಾಣಿ ಕಥಾ ಸ್ಪರ್ಧೆ: ಯಾವುದೇ ಕಥಾ ಸ್ಪರ್ಧೆಯಾಗಿರಲಿ ಅವುಗಳಿಗೆ ನನ್ನ ಕತೆಗಳನ್ನು ಕಳುಹಿಸುತ್ತಿದೆ.ಉದಯವಾಣಿ ಪತ್ರಿಕೆ ಏರ್ಪಡಿಸುತ್ತಿದ್ದ ಕಥಾ ಸ್ಪರ್ಧೆ ಸೇರಿದಂತೆ ಹಲವು ಪತ್ರಿಕೆಗಳಿಗೆ ಕತೆ ಕಳುಹಿಸಿ ಬಹುಮಾನ ಗಿಟ್ಟಿಸಿಕೊಂಡಿದ್ದೇನೆ ಎಂದರು.

ಹಿರಿಯ ಸಂಶೋಧಕ ಷ.ಶೆಟ್ಟರ್‌ ಮಾತನಾಡಿ “ನೋ ಪ್ರಸೆಂಟ್ಸ್‌ ಪ್ಲೀಸ್‌’ಕೃತಿಗೆ ಅತ್ಯುತ್ತಮ ದಕ್ಷಿಣ ಏಷ್ಯಾ ಸಾಹಿತ್ಯಕ್ಕೆ ನೀಡುವ
ಡಿಎಸ್‌ಸಿ ಅಂತಾರಾಷ್ಟ್ರೀಯ ಪ್ರಶಸ್ತಿ (17 ಲಕ್ಷ ರೂ.ನಗದು ಮತ್ತು ಪುರಸ್ಕಾರ) ದೊರೆತಿರುವುದು ಹೆಮ್ಮೆಯ ಸಂಗತಿ.

ಮುಂಬೈನಲ್ಲಿದ್ದ ದಿನಗಳಲ್ಲಿ ಕಂಡುಬಂದ ಸನ್ನಿವೇಶಗಳನ್ನೆ ಕತೆಯಾಗಿ ರೂಪಿಸಿ ಓದುಗರಿಗೆ ನೀಡಿದ್ದಾರೆ. ಎಲ್ಲಾ ಕತೆಗಳು ಸೊಗಸಾಗಿ ಮೂಡಿ ಬಂದಿವೆ. ಈಗಾಗಲೇ ಈ ಕೃತಿ ಇಂಗ್ಲಿಷ್‌ನಲ್ಲಿ ಬಂದಿರುವುದು ಖುಷಿ ಪಡುವ ವಿಚಾರ. ಕವಿ ಸುಬ್ಬು ಹೊಲೆಯಾರ್‌, ಲೇಖಕ ವಿಕ್ರಮ ಹತ್ವಾರ್‌, ಸಿಂಧೂರಾವ್‌ ಸಂವಾದ ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next