ನವದೆಹಲಿ: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿದ್ದ ನಟ ಸಿದ್ದಾರ್ಥ್ ಈಗ ಸೈನಾಗೆ ಕ್ಷಮಾಪಣಾ ಪತ್ರ ಬರೆದಿದ್ದಾರೆ. ನೀವು ಎಂದೆಂದಿಗೂ ನಮ್ಮ ಚಾಂಪಿಯನ್ ಎಂದು ಕರೆದಿದ್ದಾರೆ.
“ಪ್ರೀತಿಯ ಸೈನಾ, ನನ್ನ ಒರ ಟು ಹಾಸ್ಯದ ಬಗ್ಗೆ ಕ್ಷಮೆಯಾಚಿಸುತ್ತೇನೆ. ಒಂದು ಹಾಸ್ಯವನ್ನು ವಿವರಿಸಬೇಕಾಗುತ್ತದೆ ಎನ್ನುವುದಾದರೆ ಅದು ಒಳ್ಳೆಯ ಹಾಸ್ಯವಲ್ಲ. ನನ್ನ ಹಾಸ್ಯ ಸರಿಯಾಗದೇ ಇದ್ದಿದ್ದಕ್ಕೆ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ನನ್ನ ಟ್ವೀಟ್‌ನಲ್ಲಿ ನಾನು ಯಾವುದೋ ಲಿಂಗ ಅಥವಾ ಮಹಿಳೆಯರನ್ನು ಹೀಯಾಳಿಸುವ ಉದ್ದೇಶ ಹೊಂದಿರಲಿಲ್ಲ’ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ:ಯೋಗಿ ಆದಿತ್ಯನಾಥ್ ರನ್ನು ಅಯೋಧ್ಯೆಯಿಂದ ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ?
ಇದಕ್ಕೆ ಸೈನಾ ಪ್ರತಿಕ್ರಿಯಿಸಿದ್ದು, “ಅವರು ನನ್ನ ಬಗ್ಗೆ ಏನೋ ಹೇಳಿದರು ಆಮೇಲೆ ಕ್ಷಮೆ ಕೇಳಿದರು. ಆದರೆ ಆ ಸುದ್ದಿ ಏಕಷ್ಟು ವೈರಲ್ ಆಯಿತು ಎನ್ನುವುದು ನನಗೆ ತಿಳಿದಿಲ್ಲ.
ಟ್ವಿಟರ್‌ನಲ್ಲಿ ನಾನು ಟ್ರೆಂಡಿಂಗ್‌ನಲ್ಲಿದ್ದೇನೆ ಎನ್ನುವುದು ನನಗೇ ಆಶ್ಚರ್ಯ ತಂದಿತ್ತು’ ಎಂದು ಹೇಳಿದ್ದಾರೆ.