ಒಡಿಶಾ: ಕೆಲವೊಂದು ಬಾರಿ ನಮ್ಮ ಕ್ರಿಯೇಟಿವ್ ಯೋಚನೆಗಳು ಎಲ್ಲರನ್ನು ಗಮನ ಸೆಳೆಯುತ್ತದೆ. ಇತ್ತೀಚೆಗೆ ವ್ಯಕ್ತಿಯೊಬ್ಬ ತನ್ನ ನ್ಯಾನೋ ಕಾರನ್ನೇ ರಸ್ತೆಯಲ್ಲಿ ಚಲಿಸುವ ಹೆಲಿಕಾಪ್ಟರ್ ಆಗಿ ಮಾಡಿದ ವಿಡಿಯೋ ವೈರಲ್ ಆಗಿತ್ತು.
ಈಗ ಇಂಥದ್ದೇ ಮತ್ತೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಹತ್ತಾರು ವಿಶೇಷ ಸೌಲಭ್ಯಗಳನ್ನು ಹೊಂದಿರುವ ಈ ಸ್ಕೂಟರನ್ನು ವ್ಯಕ್ತಿಯೊಬ್ಬ ಮನರಂಜನೆಗಾಗಿ ಬಳಸಿದ್ದಾನೆ.
ಇದನ್ನೂ ಓದಿ: ಆರ್ ಸಿಬಿ ಸೇರಿದ ಕೂಡಲೇ ತಂಡವನ್ನೇ ಟ್ರೋಲ್ ಮಾಡಿದ ವಿಲ್ ಜ್ಯಾಕ್ಸ್
ಈ ವಿಡಿಯೋ ಒಡಿಶಾದ ಕಟಕ್ ನದ್ದು ಎನ್ನಲಾಗಿದ್ದು, ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಪಾರ್ಕ್ ಮಾಡಿರುವ ಓಲಾ ಸ್ಕೂಟರ್ ನ ಬ್ಲೂಟೂಥ್ ಆನ್ ಮಾಡಿ ಅದನ್ನು ಮೊಬೈಲ್ ಗೆ ಕನೆಕ್ಟ್ ಮಾಡಿದ್ದಾನೆ. ಹೀಗೆ ಮಾಡಿ ಮೊಬೈಲ್ ನಿಂದ ಮಾತನಾಡಿ, ಕ್ರಿಕೆಟ್ ಆಡುತ್ತಿರುವ ಸ್ನೇಹಿತರ ಆಟವನ್ನು ನೋಡಿ ಕಾಮೆಂಟ್ರಿ ಮಾಡಿದ್ದಾನೆ. ಸ್ಕೂಟರ್ ನ ಬ್ಲೂಟೂಥ್ ನ ಪಕ್ಕದಲ್ಲಿರುವ ಲೌಡ್ ಸ್ಪೀಕರ್ ಆಯ್ಕೆಯನ್ನು ಒತ್ತಿದ್ದಾನೆ. ಲೌಡ್ ಸ್ಪೀಕರ್ ನಲ್ಲಿ ಹತ್ತಾರು ಜನರಿಗೆ ಕ್ರಿಕೆಟ್ ಕಾಮೆಂಟ್ರಿ ಕೇಳಿದೆ.
ಟ್ವೀಟರ್ ನಲ್ಲಿ ಈ ವಿಡಿಯೋವನ್ನು ಬಿಕಾಶ್ ಬೆಹೆರಾ ಎಂಬ ವ್ಯಕ್ತಿ ಹಂಚಿಕೊಂಡಿದ್ದು, 90 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, ವೈರಲ್ ಆಗಿದೆ. ಎಷ್ಟರ ಮಟ್ಟಿಗೆ ಎಂದರೆ ಓಲಾ ಸಂಸ್ಥಾಪಕ ಭವಿಶ್ ಅಗರ್ವಾಲ್ ಅವರು ಇದನ್ನು ರಿ ಟ್ವೀಟ್ ಮಾಡಿ, ನಮ್ಮ ವಾಹನದ ಅತ್ಯಂತ ಉತ್ತಮ ಬಳಕೆ ಇದು ಎಂದು ಟ್ವೀಟ್ ಮಾಡಿದ್ದಾರೆ.