Advertisement
ಹೌದು ಅಮೆಜಾನ್ ಸಂಸ್ಥೆ ದಿನಸಿ ಮತ್ತು ಇತರ ವಸ್ತುಗಳಿಗೆ ಶೇಕಡಾ 45 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ. ನೀವು ಕೂಡ ಈ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ದೇಶದ ಅತ್ಯಂತ ದೊಡ್ಡ ನಾಗರಿಕ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಎಸ್ ಬಿ ಐ ಕಾರ್ಡ್ ನೊಂದಿಗೆ ಶಾಪಿಂಗ್ ಮಾಡಿದರೆ ನಿಮಗೆ 10 ಪ್ರತಿಶತ ರಿಯಾಯಿತಿ ಕೂಡ ಸಿಗಲಿದೆ.
Related Articles
Advertisement
ಇನ್ನು, ಸೂಪರ್ ಸೇವರ್ ಡೇಸ್ ಪ್ಲ್ಯಾಟ್ ಫಾರ್ಮ್ ಅಡಿಯಲ್ಲಿ ಜಗತ್ತಿನ ಮತ್ತೊಂದು ಇ ಕಾಮರ್ಸ್ ಮಾರುಕಟ್ಟೆ ಫ್ಲಿಪ್ ಕಾರ್ಟ್, ದೈನಂದಿನ ವಸ್ತುಗಳನ್ನು ಭರ್ಜರಿ ಆಫರ್ ರೇಟ್ ನಲ್ಲಿ ಖರೀದಿಸಬಹುದಾಗಿದೆ. ನಿಮ್ಮ ಕಚೇರಿಗೆ ಬೇಕಾಗುವ ಕುರ್ಚಿಗಳಿಂದ ಹಿಡಿದು ಎಲೆಕ್ಟ್ರಾನಿಕ್ಸ್ ವಸ್ತುಗಳವರೆಗೆ ಎಲ್ಲದಕ್ಕೂ ಫ್ಲಿಪ್ ಕಾರ್ಟ್ ಉತ್ತಮ ಆಫರ್ ನೊಂದಿಗೆ ಮಾರಾಟ ಮಾಡುತ್ತಿದೆ.
ಮಾತ್ರವಲ್ಲದೇ, ಫ್ಲಿಪ್ ಕಾರ್ಟ್‌ನಲ್ಲಿ ಮೂರು ದಿನಗಳವರೆಗೆ ಪ್ರತಿ ಬ್ರಾಂಡ್ ನ ಎಲ್ ಇ ಡಿ ಟಿವಿಗಳನ್ನು ಕಡಿಮೆ ದರದಲ್ಲಿ ಖರೀದಿಸಬಹುದು. ಈ ಸೇಲ್ ನಲ್ಲಿ ಟಿವಿಯ ಆರಂಭಿಕ ಬೆಲೆ 9,499 ರೂ. ಆಗಿದೆ ಎನ್ನುವುದು ವಿಶೇಷ.
ನಿನ್ನೆಯಿಂದ ಫ್ಲಿಪ್ ಕಾರ್ಟ್ ಗಳಲ್ಲಿ ಈ ಆಫರ್ ಗಳು ಆರಂಭವಾಗಿದ್ದು ಜುಲೈ 3ರವರೆಗೆ ಫ್ಲಿಪ್ ಕಾರ್ಟ್‌ನಲ್ಲಿ ನಡೆಯುವ ಸೂಪರ್ ಸೇವರ್ ಡೇಸ್ ಮಾರಾಟದಲ್ಲಿ ಎಸಿಗಳು, ಫ್ಯಾನ್ ಮತ್ತು ಕೂಲರ್‌ಗಳಲ್ಲಿ ನೀವು ಉತ್ತಮ ಡೀಲ್ ಗಳನ್ನು ಪಡೆಯಬಹುದಾಗಿದ್ದು, ಈ ಮಾರಾಟದಲ್ಲಿ ನೀವು ಶೇಕಡಾ 55 ರಷ್ಟು ರಿಯಾಯಿತಿ ದರದಲ್ಲಿ ಶಾಪಿಂಗ್ ಮಾಡಬಹುದಾಗಿದೆ.
ಅಮೆಜಾನ್ ನಲ್ಲಿ ನಿನ್ನೆಯಿಂದ ಆರಂಭವಾದ ಆಫರ್ ಸೇಲ್ ಜುಲೈ 7ರ ತನಕ ಲಭ್ಯವರಿಲಿದೆ.
ಇದನ್ನೂ ಓದಿ : ‘RRR’ ಲುಕ್ ನಲ್ಲಿ ಲೋಪ:ಸರಿಪಡಿಸಿದ ಸೈಬರಾಬಾದ್ ಟ್ರಾಫಿಕ್ ಪೊಲೀಸ್