Advertisement

ಎನ್‌ಕೌಂಟರ್‌ ಡೀಲ್‌?

09:05 AM Apr 16, 2018 | Team Udayavani |

ಲಕ್ನೋ: ಇತ್ತೀಚೆಗೆ, ಉತ್ತರ ಪ್ರದೇಶದಲ್ಲಿ ಕ್ರಿಮಿನಲ್‌ಗ‌ಳ ಸರಣಿ ಎನ್‌ಕೌಂಟರ್‌ ಗಳು ನಡೆದ ವೇಳೆಯಲ್ಲೇ, ಲೇಖೀರಾಜ್‌ ಸಿಂಗ್‌ ಯಾದವ್‌ ಎಂಬ ರೌಡಿಶೀಟರ್‌ ಗೆ ಎನ್‌ ಕೌಂಟರ್‌ ಮಾಡುವ ಬೆದರಿಕೆ ಹಾಕಿ, ಡೀಲಿಂಗ್‌ ಮಾಡಲು ಪ್ರಯತ್ನಿಸಿದ್ದ ಆರೋಪದ ಮೇರೆಗೆ ಉತ್ತರ ಪ್ರದೇಶದ ಮೌನರಾಣಿಪುರ ಪೊಲೀಸ್‌ ಠಾಣೆಯ ಎಸ್‌.ಎಚ್‌.ಒ. ಆಗಿರುವ ಸುನಿತ್‌ ಕುಮಾರ್‌ ಸಿಂಗ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

Advertisement

ಇವರಿಬ್ಬರ ನಡುವೆ ನಡೆದ ಎನ್‌ ಕೌಂಟರ್‌ ಕುರಿತಾದ ಸಂಭಾಷಣೆ ಅಂತರ್ಜಾಲದಲ್ಲಿ ವೈರಲ್‌ ಆದ ಹಿನ್ನೆಲೆಯಲ್ಲಿ, ಈ ನಿರ್ಧಾರ ಕೈಗೊಂಡುತನಿಖೆಗೆ ಆದೇಶಿಸಲಾಗಿದೆ. ಧ್ವನಿಗಳು ಖಚಿತಗೊಳ್ಳದ ಆ ದೂರವಾಣಿ ಮಾತುಕತೆಯ ಪ್ರಕಾರ, ಲೇಖೀರಾಜ್‌ಗೆ ಫೋನಾಯಿಸಿದ್ದ ಸಿಂಗ್‌, “ನಿನ್ನನ್ನು ಕೊಲ್ಲಲು ಪೊಲೀಸ್‌ ಇಲಾಖೆ ನಿರ್ಧರಿಸಿದ್ದು, ನಿನ್ನ ಮೊಬೈಲ್‌ ಸಿಗ್ನಲ್‌ಗ‌ಳನ್ನು ಟ್ರೇಸ್‌ ಮಾಡಲಾಗುತ್ತಿದೆ. ನೀನು ಬಚಾವಾಗಬೇಕೆಂದರೆ, ಸ್ಥಳೀಯ ಬಿಜೆಪಿ ನಾಯಕರಾದ ಸಂಜಯ್‌ ದುಬೆ ಹಾಗೂ ರಾಜೀವ್‌ ಸಿಂಗ್‌ ಪರಿಚಾ ಅವರನ್ನು ‘ಚೆನ್ನಾಗಿ’ ನೋಡಿಕೊಳ್ಳಬೇಕು” ಎಂದಿದ್ದಾರೆ.  

ಈ ಮಾತುಕತೆ ನಡೆದ ಕೆಲವೇ ಗಂಟೆಗಳಲ್ಲಿ ಸಿಂಗ್‌, ಕೆಲ ಪೊಲೀಸ್‌ ಸಿಬಂದಿ ಜತೆ ಲೇಖೀರಾಜ್‌ ಅಡಗಿದ್ದ ಪ್ರದೇಶದ ಮುಂದೆ ಹಾಜರಾದಾಗ, ಲೇಖೀರಾಜ್‌ ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದು ಲೇಖೀರಾಜ್‌ ಪರಾರಿಯಾಗಿದ್ದಾನೆ. ಹೀಗಾಗಿ, ಲೇಖೀರಾಜ್‌  ಹಾಗೂ ಆತನ ಇಬ್ಬರು ಪುತ್ರರ ವಿರುದ್ಧ ಸಿಂಗ್‌ ಕೇಸು ಜಡಿದಿದ್ದಾರೆ. ಇದರಿಂದ ಕುಪಿತಗೊಂಡ ಲೇಖೀರಾಜ್‌, ಆಡಿಯೋ ಕ್ಲಿಪ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾನೆಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next