ಹೊಸದಿಲ್ಲಿ: “ನೀವು ಆರೋಪ ಮಾಡುತ್ತಿದ್ದೀರಿ ಎಂದ ಮಾತ್ರಕ್ಕೆ ನಾವು ಪಾಕಿಸ್ಥಾನದಲ್ಲಿರುವ ಕಾರ್ಖಾನೆಗಳನ್ನು ಮುಚ್ಚಿಸ ಬೇಕೇ?’ ಇದು ಉತ್ತರ ಪ್ರದೇಶ ಸರಕಾರಕ್ಕೆ ಸುಪ್ರೀಂ ಕೋರ್ಟ್ ಕೇಳಿರುವ ಖಡಕ್ ಪ್ರಶ್ನೆ.
ದಿಲ್ಲಿಯ ವಾಯು ಮಾಲಿನ್ಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜ ಧಾನಿ ಪ್ರಾಂತ್ಯದ (ಎನ್‌ಸಿಆರ್) ವ್ಯಾಪ್ತಿಗೆ ಬರುವ ಉತ್ತರ ಪ್ರದೇಶದ ಕಾರ್ಖಾನೆಗಳನ್ನು ಮುಚ್ಚುವಂತೆ ಈ ಹಿಂದೆ ಆದೇಶಿಸಲಾಗಿತ್ತು. ಇದಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದ ಉತ್ತರ ಪ್ರದೇಶ ಸರಕಾರ, ದಿಲ್ಲಿಯ ವಾಯು ಮಾಲಿನ್ಯಕ್ಕೆ ಪಾಕಿಸ್ಥಾನದಲ್ಲಿರುವ ಕಾರ್ಖಾನೆಗಳೇ ಕಾರಣ ಎಂದು ವಾದಿಸಿತ್ತು.
ಇದನ್ನೂ ಓದಿ:ಬೆಂಬಲ ಬೆಲೆ ಕಾನೂನು ತನ್ನಿ, ಜನ ಆಶೀರ್ವದಿಸುತ್ತಾರೆ
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, “ಯು.ಪಿ. ಸರಕಾರ ಬಯಸಿದ ಮಾತ್ರಕ್ಕೆ ನಾವು ಪಾಕಿಸ್ಥಾನದ ಕಾರ್ಖಾನೆ ಗಳನ್ನು ಮುಚ್ಚಿಸಬೇಕೇ ಎಂದು ಪ್ರಶ್ನಿಸಿತಲ್ಲದೆ, ಎನ್‌ಸಿಆರ್‌ನ ವಾಯು ಗುಣಮಟ್ಟ ಆಯೋಗ (ಸಿಎಕ್ಯುಎಂ) ನೀಡಿರುವ ಸೂಚನೆ ಗಳನ್ನು ಪಾಲಿಸಲೇಬೇಕು’ ಎಂದು ಹೇಳಿತು.