ಫ್ರೆಶರ್ ಡೇ ದಿನ ಪ್ರೇಮಿಗಳ ಆಟದ ಮೂಲಕ ಪರಿಚಯವಾದವರು ನಾವು. ಆನಂತರದಲ್ಲಿ ಇಬ್ಬರೂ ಮಾತಾಡಿದೆವು, ಜಗಳ ಮಾಡಿದೆವು, ಮುನಿಸಿಕೊಂಡೆವು, ಒಳಗೊಳಗೇ ಪ್ರೀತಿಸಿದೆವು… “ಐ ಲವ್ ಯು’ ಅನ್ನಲು ನನಗಂತೂ ಹೆದರಿಕೆಯಿತ್ತು. ಆದರೆ, ನೀನಾದರೂ ಹೇಳಬಹುದಿತ್ತಲ್ವ?
ಡಿಗ್ರಿ ಮೊದಲ ಸೆಮಿಸ್ಟರ್‌ನಲ್ಲಿ ಓದುತ್ತಿರುವಾಗ ಮನಸ್ಸಿನಲ್ಲಿ ಆದ ಪುಳಕದ ಬಗ್ಗೆ ಹೇಳಲೇಕೆನಿಸಿದೆ. ಆವತ್ತು ನಮ್ ಕಾಲೇಜಿನಲ್ಲಿ ಫ್ರೆಶರ್ಸ್ ಡೇ ಇತ್ತು. ಕಾಲೇಜು ಪ್ರಾರಂಭವಾಗಿ ಒಂದು ತಿಂಗಳಾದರೂ ಯಾರೂ ಅಷ್ಟಾಗಿ ಪರಿಚಯ ಇರಲಿಲ್ಲ. ಅದೇ ಕಾರಣದಿಂದ ನಾನು ಕೊನೆಯ ಬೆಂಚಿಗೆ ಹೋಗಿ ಕುಳಿತಿದ್ದೆ. ಕಾರ್ಯಕ್ರಮದ ನಂತರ ಸಾಂ ಸ್ಕೃತಿಕ ಕಾರ್ಯಕ್ರಮ ನಡೆಯುತ್ತವೆ ಎಂದು ಸೀನಿಯರ್ಸ್ ಹೇಳಿದಾಗ ಹಾಲ್‌ಗೆ ಹೋದೆ. ಅಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಮೊದಲನೆಯದಾಗಿ “ಕಾಗದದ ಉದರದಲ್ಲಿ ಅಕ್ಷರದ ಆಟ’ ಎಂಬ ಹೆಸರಿನ, ಚೀಟಿ ಆಟವನ್ನು ಆರಂಭಿಸಲಾಯಿತು. ಈ ಆಟದ ನಿಯಮದಂತೆ ಚೀಟಿಯಲ್ಲಿ ಏನು ಬರೆದಿರುತ್ತಾರೋ ಅ ದ ನ್ನು ಒಬ್ಬ ಹುಡು ಗ ಮತ್ತು ಹುಡುಗಿ ವೇದಿಕೆಯ ಮೇಲೆ ಬಂದು ಮಾಡಬೇಕಿತ್ತು. ಮೊದಲನೆಯದಾಗಿ ಒಬ್ಬ ಹುಡುಗ ಮತ್ತು ಹುಡುಗಿ ವೇದಿಕೆ ಮೇಲೆ ಬಂದು ನೃತ್ಯ ಮಾಡಿದರು. ನಂತರ ಸಂಗೀತ, ಡೈಲಾಗ್ಸ್, ಮಿಮಿಕ್ರಿ… ಹೀಗೆ ಎಲ್ಲರೂ ಬಹಳ ಎಂ ಜಾಯ್ ಮಾಡುತ್ತಿದ್ದರು. ನನ್ನ ಸರದಿ ಬಂತು. ವೇದಿಯ ಮೇಲೆ ಹೋಗಿ ಚೀಟಿ ತೆಗೆದೆ, ಅದರಲ್ಲಿ ಹೀಗೆ ಬರೆದಿತ್ತು, “ಒಬ್ಬಳು ಹುಡುಗಿಗೆ ಪ್ರಪೋಸ್ ಮಾಡಬೇಕು’ ಅಂತ. ನನ್ನ ಎದುರಿನ ಬೆಂಚಿನ ಹುಡುಗಿ ಗೆಜ್ಜೆಯ ಸದ್ದು ಮಾಡುತ್ತಾ ಬರುತ್ತಿದ್ದಳು. ಅವಳು ವೇದಿಕೆ ಏರುತ್ತಿದ್ದಂತೆ ಹೃದಯ ಲಬ್ ಡಬ್ ಲಬ್ ಡಬ್ ಎಂದು ಜೋರಾಗಿ ಬಡಿದುಕೊಳ್ಳುತ್ತಿತ್ತು. ಅವಳನ್ನು ನೋಡಿದ ತಕ್ಷಣ ಲವ್ ಅಟ್ ಫಸ್ಟ್ ಸೈಟ್ ಆಗೇ ಬಿಡು. ಅವಳು ತಿಳಿ ನೀಲಿ ಲಂಗ ದಾವಣಿಯಲ್ಲಿ ಕಂಗೊಳಿಸುತ್ತಾ ಹಂಸದ ನಡಿಗೆಯಲ್ಲಿ ಬರುತ್ತಿದ್ದರೆ ದೇವಲೋಕದಿಂದ ಅಪ್ಸರೆಯೇ ಇಳೆಗೆ ಬರುತ್ತಿದ್ದಾಳೆ ಎಂದು ಅನ್ನಿಸಿಬಿಡು¤. ನನ್ನ ಮೇಲೆ ನನಗೇ ಕಂಟ್ರೋಲ್ ಇಲ್ಲ ಅನ್ನುವಷ್ಟರ ಮಟ್ಟಿಗೆ ನಾನು ಕಳೆದುಹೋದೆ ಅವತ್ತು.
ಅವಳು ಎದುರಿಗೆ ಬಂದು ನಿಂತಳು. ನಾನು ಮಂಡಿ ಊರಿ ತಲೆತಗ್ಗಿಸಿ ಅವಳಿಗೆ ರೆಡ್‌ರೋಸ್ ಕೊಟ್ಟು “ನಾನು ನಿನ್ನನ್ನು ಪ್ರೀತಿಸುತ್ತಿರುವೆ’ ಎಂದೆ. ಅದಕ್ಕೆ ಅವಳು ನಾಚಿ ನೀರಾಗಿ, ಮುಂಗುರುಳು ಸರಿ ಮಾಡುತ್ತಾ “ಐ ಟೂ ಲವ್ ಯು’ ಎಂದು ಮುಗುಳ್ನಗೆ ಬೀರುತ್ತಾ ಕೆಳಗೆ ಇಳಿದು ಹೋದಳು.
ಇದು ಆಟ. ಎಲ್ಲರೂ ಅದನ್ನು ಮೆಚ್ಚಿ ಚಪ್ಪಾಳೆ ಹೊಡೆದರು. ಇದು ಆಟ ಆಗಬಾರದಿತ್ತು. ಇದು ನಿಜವಾಗಿ ನಡೆಯಬೇಕಿತ್ತು ಎಂದು ಒಂದಲ್ಲ, ನೂರು ಬಾರಿ ಅನ್ನಿಸಿದ್ದಂತೂ ಸುಳ್ಳಲ್ಲ. ಅಲ್ಲಿಂದಲೇ ಶುರುವಾಯ್ತು ನಮ್ಮ ಸ್ನೇಹ ಪಯಣ. ಕಾರಿಡಾರಿನಲ್ಲಿ ಗಂಟೆಗಟ್ಟಲೆ ಕುಳಿತು ಹರಟೆ ಹೊಡೆದಿದ್ದು, ಇಯರ್ ಫೋನ್ ಸಲುವಾಗಿ ಜಗಳವಾಡಿದ್ದು, ಬೈಟು ಕಾಫಿ ಹೀರಿದ್ದು… ಈಗ ಎಲ್ಲವೂ ನೆನಪುಗಳಾಗಿ ಕಣ್ಣ ಕಟ್ಟುತ್ತಿವೆ. ನೀನು ನನ್ನ ಪ್ರೀತಿಸುತ್ತಿದ್ದೀಯ ಎಂದು ನಿನ್ನ ಕಣ್ಣುಗಳೇ ನೇರ ಪ್ರಸಾರದಲ್ಲಿ ಹೇಳುತ್ತಿತ್ತು. ಆದರೂ, ಬೆಟ್ಟದಷ್ಟು ಪ್ರೀತಿ ಇಟ್ಟು ಕೊಂಡ ನಂತರವೂ, ಹಾಗಂತ ನೀನು ಹೇಳಲಿಲ್ಲವೇಕೆ?
ಆರೀಫ ವಾಲೀಕಾರ