Advertisement

3ಜಿ, 4ಜಿ ಬದಲು ಉತ್ತಮ ಗುರೂಜಿ ಅಗತ್ಯ

11:16 PM Aug 24, 2019 | mahesh |

ಉಪ್ಪಿನಂಗಡಿ: ಶ್ರೀ ಕೃಷ್ಣನ ತತ್ತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳದೇ ಹೋದಲ್ಲಿ ಭಗವದ್ಗೀತೆಯ ಸಾರವನ್ನು ನಮ್ಮ ನಡೆ- ನುಡಿಗಳಲ್ಲಿ ಅನುಸರಿಸದೇ ಹೋದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಅರ್ಥವಿಲ್ಲ ಎಂದು ನಿವೃತ್ತ ಅಧ್ಯಾಪಕ ನಾರಾಯಣ ಭಟ್ ಹೇಳಿದರು.

Advertisement

ಅವರು ಪೆರಿಯಡ್ಕದ ಶ್ರೀ ದುರ್ಗಾಪರಮೇಶ್ವರಿ ಭಜನ ಮಂದಿರದಲ್ಲಿ ನಡೆದ 39ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವದ ಬಹುಮಾನ ವಿತರಣ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.

ಸಂಬಂಧ ಗಟ್ಟಿಗೊಳ್ಳುತ್ತದೆ
ಶ್ರೀ ದುರ್ಗಾಪರಮೇಶ್ವರಿ ಭಜನ ಮಂದಿರದ ಅಧ್ಯಕ್ಷ ಸುರೇಶ್‌ ಗೌಂಡತ್ತಿಗೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗಿಗಳಾಗಬೇಕು. ಆಗ ಉತ್ತಮ ಸಂಸ್ಕಾರ, ಸಂಸ್ಕೃತಿ ನಮ್ಮದಾಗುವುದು. ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಸಂಘಟನ ಮನೋಭಾವದಿಂದ ಎಲ್ಲರೂ ಒಗ್ಗೂಡುವ ಮೂಲಕ ಧಾರ್ಮಿಕ ಸಂಸ್ಕೃತಿಯನ್ನು ಉಳಿಸಬೇಕು ಎಂದರು.

ಬಹುಮಾನ ವಿತರಣೆ
ಬಿಎಂಎಸ್‌ ಆಟೋ ರಿಕ್ಷಾ ಚಾಲಕ-ಮಾಲಕ ಸಂಘದ ಉಪ್ಪಿನಂಗಡಿ ವಲಯಾಧ್ಯಕ್ಷರಾಗಿ ಆಯ್ಕೆಯಾದ ಹರೀಶ್‌ ಕುಮಾರ್‌ ಪಟ್ಲ ಹಾಗೂ ಯೋಧ ಸಂದೀಪ್‌ ನೆಡ್ಚಿಲ್ ಅವರನ್ನು ಅಭಿನಂದಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಹಾಗೂ ಶ್ರೀಕೃಷ್ಣ ವೇಷ ಹಾಕಿದ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು.

ಪ್ರಮುಖರಾದ ಪ್ರತಾಪ್‌ ಪೆರಿಯಡ್ಕ, ಪ್ರಸನ್ನ, ರಾಧಾಕೃಷ್ಣ ಭಟ್ ಬೊಳ್ಳಾವು, ಸುರೇಶ್‌ ಪಲ್ಲಿಗದ್ದೆ, ಪ್ರಶಾಂತ್‌ ಪೆರಿಯಡ್ಕ, ಸದಾನಂದ ಶೆಟ್ಟಿ, ಚಿದಾನಂದ ಪಂಚೇರು, ಜತ್ತಪ್ಪ ನಾಯ್ಕ ಬೊಳ್ಳಾವು, ಮಹಾಲಿಂಗೇಶ್ವರ ಭಟ್ ಮಧುವನ, ಆನಂದ ಪೂಜಾರಿ ನೆಡ್ಚಿಲ್, ಸಚಿನ್‌ ಪೆರಿಯಡ್ಕ, ಸೇಸಪ್ಪ ಗೌಡ, ಶೀನಪ್ಪ ಗೌಡ ಬೊಳ್ಳಾವು, ಬಾಲಕೃಷ್ಣ ಪೆರಿಯಡ್ಕ, ಸುಧಾಕರ ಕಣಿಯ ಉಪಸ್ಥಿತರಿದ್ದರು.

Advertisement

ಅಕ್ಷಯ ಶಂಕರಿ ಪ್ರಾರ್ಥಿಸಿದರು. ಭಜನ ಮಂದಿರದ ಗೌರವ ಸಲಹೆಗಾರ ಶಂಕರನಾರಾಯಣ ಭಟ್ ಬೊಳ್ಳಾವು ಸ್ವಾಗತಿಸಿದರು. ಕಾರ್ಯದರ್ಶಿ ಅವಿನಾಶ್‌ ಭಟ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ಮುಖ್ಯ ಅತಿಥಿಯಾಗಿದ್ದ ತಾ.ಪಂ. ಸದಸ್ಯೆ ಸುಜಾತಾ ಕೃಷ್ಣ ಆಚಾರ್ಯ ಮಾತನಾಡಿ, ಪುಟ್ಟ ಮಕ್ಕಳಲ್ಲಿ ಶ್ರೀಕೃಷ್ಣನ ಬಾಲ್ಯದ ತುಂಟಾಟಗಳು ಕಾಣುತ್ತವೆ. ಪುಟ್ಟ ಮಕ್ಕಳಲ್ಲಿ ದೇವರನ್ನು ಕಾಣುವ ಕೆಲಸವಾಗುತ್ತಿದೆ. ಭಾರತೀಯ ಸಂಸ್ಕೃತಿಯನ್ನು ಮಕ್ಕಳಿಗೆ ಉಣಬಡಿಸುವ ಮೂಲಕ ಅದನ್ನು ಉಳಿಸಿ, ಬೆಳೆಸುವ ಕಾರ್ಯವಾಗಬೇಕಿದೆ. ಇಂತಹ ಸಾರ್ವಜನಿಕ ಕಾರ್ಯಕ್ರಮಗಳಿಂದ ಅದು ಸಾಧ್ಯವಾಗುತ್ತಿದೆ ಎಂದರು.

ಜೀವನದ ಜಂಜಾಟದಲ್ಲಿ ಮಕ್ಕಳಿಗೊಂದಿಷ್ಟು ಸಮಯವನ್ನು ನಾವು ಮೀಸಲಿಡಬೇಕು. ನಮಗಿಂದು 3ಜಿ, 4ಜಿಯ ಬದಲು ಉತ್ತಮ ಗುರೂಜಿಯ ಅಗತ್ಯವಿದೆ. ಮಕ್ಕಳಿಗೆ ಉತ್ತಮ ವಿಚಾರವನ್ನು ಬೋಧನೆ ಮಾಡುವ ಮೊದಲು ನಾವು ಅದನ್ನು ಜೀವನದಲ್ಲಿ ಅನುಷ್ಠಾನಕ್ಕೆ ತರಬೇಕು. ಭಗವದ್ಗೀತೆಯನ್ನು ತಂದು ಮನೆಯಲ್ಲಿಡುವುದು ಮುಖ್ಯ ಅಲ್ಲ. ಅದನ್ನು ಓದಿ ಅದರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಕಾರ್ಯವಾಗಬೇಕು. ಆಗ ಮಾತ್ರ ಮಕ್ಕಳನ್ನು ಸುಂದರ ಆಕೃತಿಯನ್ನಾಗಿ ನಿರ್ಮಿಸಲು ಸಾಧ್ಯ ಎಂದು ನಾರಾಯಣ ಭಟ್ ಹೇಳಿದರು.

ಭಗವದ್ಗೀತೆ ಓದಿಕೊಳ್ಳಿ

ಸಂಸ್ಕೃತಿ ಉಣಬಡಿಸೋಣ
ಮುಖ್ಯ ಅತಿಥಿಯಾಗಿದ್ದ ತಾ.ಪಂ. ಸದಸ್ಯೆ ಸುಜಾತಾ ಕೃಷ್ಣ ಆಚಾರ್ಯ ಮಾತನಾಡಿ, ಪುಟ್ಟ ಮಕ್ಕಳಲ್ಲಿ ಶ್ರೀಕೃಷ್ಣನ ಬಾಲ್ಯದ ತುಂಟಾಟಗಳು ಕಾಣುತ್ತವೆ. ಪುಟ್ಟ ಮಕ್ಕಳಲ್ಲಿ ದೇವರನ್ನು ಕಾಣುವ ಕೆಲಸವಾಗುತ್ತಿದೆ. ಭಾರತೀಯ ಸಂಸ್ಕೃತಿಯನ್ನು ಮಕ್ಕಳಿಗೆ ಉಣಬಡಿಸುವ ಮೂಲಕ ಅದನ್ನು ಉಳಿಸಿ, ಬೆಳೆಸುವ ಕಾರ್ಯವಾಗಬೇಕಿದೆ. ಇಂತಹ ಸಾರ್ವಜನಿಕ ಕಾರ್ಯಕ್ರಮಗಳಿಂದ ಅದು ಸಾಧ್ಯವಾಗುತ್ತಿದೆ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next