Advertisement
ನಮ್ಮ ದೇಶದಲ್ಲಿ ಪ್ರವಾಸೋದ್ಯಮ ಸ್ಥಿತಿ ಭಾರತಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಭಾರತದ ಸಂಸ್ಕೃತಿಗೆ ಮಾರುಹೋಗಿರುವ ವಿದೇಶಿಗರು ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವುದು ಖುಷಿಯ ವಿಚಾರ. ಆದರೆ ಸದ್ಯ ಕೋವಿಡ್ 19ರಿಂದಾಗಿ ಇದು ಸ್ಥಗಿತಗೊಂಡಿದೆ. ಪ್ರವಾಸೋದ್ಯಮವು ಭಾರತದಲ್ಲಿ ಅತಿ ದೊಡ್ಡ ಸೇವಾ ವಲಯವಾಗಿದೆ.
ಕಲೆ, ಸಾಹಿತ್ಯ- ಸಂಸ್ಕೃತಿಯ ತವರಾದ ಕರ್ನಾಟಕ ಸಮೃದ್ಧವಾದ ನಾಡು. ಸಂಪದ್ಭರಿತ ಕಾಡು, ಧುಮ್ಮಿಕ್ಕಿ ಹರಿವ ಜಲಪಾತ, ಮನಸೆಳೆವ ಕರಾವಳಿ ತೀರ, ಮನಸ್ಸಿಗೆ ಮುದ ನೀಡುವ ಪಕ್ಷಿಧಾಮ, ಕಲಾಶ್ರೀಮಂತಿಕೆಯ ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ಹಂಪೆ, ಐಹೊಳೆ, ಬಾದಾಮಿ, ಪಟ್ಟದಕಲ್ಲುಗಳ ನಡುವೆ ಸಾವಿರಾರು ದುರ್ಗಗಳು- ಗುಡಿ ಗೋಪುರಗಳು ಹತ್ತು ಹಲವು. ಹೀಗೆ ಹವಾಮಾನ ಅಥವ ಋತುಗಳ ಆಧಾರದಲ್ಲಿ ಪ್ರವಾಸಕ್ಕೆ ಯೋಜನೆ ಹಾಕಿಕೊಳ್ಳುವುದು ಸಾಮಾನ್ಯರು ಅನುಸರಿಸುವ ಕ್ರಮ. ಈ ಬಾರಿಯ ಪ್ರವಾಸೋದ್ಯದಲ್ಲಿ ಜಗತ್ತಿನಾದ್ಯಂತ ಸ್ಥಳೀಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ದೊರೆಯುವ ಸಾಧ್ಯತೆ ಇದೆ. ಕಾರಣ ಏನೆಂದರೆ ಕೋವಿಡ್ ಹಿನ್ನೆಲೆಯಲ್ಲಿ ಹೊರ ರಾಜ್ಯ ಅಥವ ಹೊರ ದೇಶಗಳಿಗೆ ಪ್ರವಾಸ ಹೋಗುವ ಸಾಧ್ಯತೆಗಳು ತೀರಾ ಕಡಿಮೆ ಇರಲಿದೆ. ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯದ ನೂರಾರು ಸುಪ್ರಸಿದ್ಧ ತಾಣಗಳ ಪೈಕಿ ಕೆಲವು ರಮ್ಯತೆಯ ತಾಣದ ಪರಿಚಯವನ್ನು ಇಲ್ಲಿ ಮಾಡಲಾಗಿದೆ. ಇಲ್ಲಿ ಚಳಿಗಾಲದ ಅವಧಿಯಲ್ಲಿ ನಾವು ಭೇಟಿ ನೀಡಲೇಬೇಕಾದ 10 ಖ್ಯಾತ ಪ್ರವಾಸಿ ಕೇಂದ್ರಗಳನ್ನು ಇಲ್ಲಿ ನೀಡಲಾಗಿದೆ. ನೀವು ಇವುಗಳನ್ನು ಮಿಸ್ ಮಾಡಿಕೊಳ್ಳುವಂತಿಲ್ಲ.
Related Articles
Advertisement
ದಕ್ಷಿಣ ಭಾರತದ ಚಿರಾಂಪುಜಿ ಆಗುಂಬೆ
ಆಗುಂಬೆ, ಮಲೆನಾಡಿನ ಮಡಿಲಿನಲ್ಲಿರುವ ಒಂದು ಪುಟ್ಟಊರು. ಮಳೆಗಾಲದಲ್ಲಿ ಸೂರ್ಯನ ಅಸ್ತಿತ್ವವನ್ನೂ ಮರೆಯಿಸುವಂತೆ ಗಾಢವಾದ ಮೋಡಗಳಿಂದ ಆವೃತವಾಗಿ ಭೋರ್ಗರೆವ ಮಳೆಯಲ್ಲಿ ತೊಯ್ಯುವ ಊರು ಮಳೆಗಾಲ ಮುಗಿಯುತ್ತಿದ್ದಂತೆಯೇ ಸೂರ್ಯಾಸ್ತಮಾನದ ಭವ್ಯ ನೋಟಕ್ಕೆ ಅವಕಾಶ ಕಲ್ಪಿಸಿಕೊಡುತ್ತದೆ.
ಹೊರಜಗತ್ತಿಗೆ ದಕ್ಷಿಣ ಭಾರತದ ಚಿರಾಪುಂಜಿ ಎಂದು ಪರಿಚಿತವಾಗಿರುವುದರಿಂದ ಆಗುಂಬೆಯ ಹೆಸರನ್ನು ಕೇಳದೇ ಇರುವವರ ಸಂಖ್ಯೆ ವಿರಳಾತಿವಿರಳ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ತಕ್ಕಂತೆ ಭೂ ವಿಸ್ತೀರ್ಣದಲ್ಲಿ ಚಿಕ್ಕ ಊರಾದರೂ ತನ್ನ ವಿಶಿಷ್ಟತೆಗಳ ಕಾರಣದಿಂದ ಪ್ರಸಿದ್ಧಿಯಾಗಿದೆ. ಆಗುಂಬೆಯ ಹಿನ್ನೆಲೆಯನ್ನು ಕೆದಕುತ್ತಾ ಹೋದರೆ ಘಾಟಿಯ ತಿರುವುಗಳಂತೆಯೇ ಹಲವು ಕತೆಗಳು ಒಂದರ ಹಿಂದೆ ಮತ್ತೂಂದರಂತೆ ತೆರೆದುಕೊಳ್ಳುತ್ತವೆ.
ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯನ್ನು ಸಂಪರ್ಕಿಸುವ ಮುಖ್ಯಕೊಂಡಿಯಾಗಿರುವ ಹದಿನಾಲ್ಕು ಸುತ್ತಿನ ಆಗುಂಬೆ ಘಾಟಿಯ ಕಡಿದಾದ ತಿರುವುಗಳು, ಘಾಟಿಯುದ್ದಕ್ಕೂ ಕಾಣಸಿಗುವ ಹಸುರುಹೊದ್ದ ಪರಿಸರ, ಮೇಲಿನ ಸುತ್ತುಗಳಲ್ಲಿ ಕಿವಿ ಹೊಕ್ಕುವ ತಂಪು ಗಾಳಿ, ಕೆಳಗಿನ ಸುತ್ತುಗಳಲ್ಲಿ ಆಗುವ ಬೆಚ್ಚನೆಯ ಅನುಭವ, ಎರಡು ಜಿಲ್ಲೆಗಳ ಮಧ್ಯೆ ಹಂಚಿಕೆಯಾಗಿರುವ ಘಾಟಿ, ಮೇಲ್ಭಾಗದಲ್ಲಿನ ಘಾಟಿ ಚೌಡಮ್ಮನ ಕೆರೆ, ಮಳೆಕಾಡು, ಸಿಂಹಬಾಲದ ಕೋತಿ, ಮುಸಿಯಗಳ ಕೂಗು, ಕಾಳಿಂಗ ಸರ್ಪಗಳ ಅಧ್ಯಯನ ಕೇಂದ್ರ, ಸಸ್ಯ ವೈವಿಧ್ಯತೆ, ಇವೆಲ್ಲದರ ಮಧ್ಯೆ ಸದ್ದುಗದ್ದಲವಿಲ್ಲದೇ ತಣ್ಣಗೆ ನಿಂತಿರುವ ಆಗುಂಬೆಯ ಸಣ್ಣಪೇಟೆ ನೋಡುಗರನ್ನು ವಿಸ್ಮಯಗೊಳಿಸುತ್ತದೆ.
- ಬಿಳಿಗಿರಿ ರಂಗನ ಬೆಟ್ಟಕ್ಕೆ ಮೈಸೂರಿನಿಂದ 90 ಕಿ.ಮೀ. ದೂರ. ಮೈಸೂರಿನಿಂದ ತಿರುಮಕೂಡಲು ನರಸೀಪುರ, ಅಲ್ಲಿಂದ ಸಂತೆಮಾರನಹಳ್ಳಿ ಬಳಿಕ ಯಳಂದೂರಿಗೆ ಹೋಗಬೇಕು. ಅಲ್ಲಿಂದ ಬಿ.ಆರ್. ಹಿಲ್ಸ್‌ಗೆ 24 ಕಿ.ಮೀ.
- ಮೈಸೂರಿನಿಂದ ನಂಜನಗೂಡಿಗೆ ಹೋಗಿ ಅಲ್ಲಿಂದ ಸಂತೆಮಾರನಹಳ್ಳಿಗೆ ಹೋಗಿಯೂ ಯಳಂದೂರು ತಲುಪಬಹುದು.
- ಬೆಂಗಳೂರಿನಿಂದ ಬಿ.ಆರ್. ಹಿಲ್ಸ್‌ಗೆ ಸುಮಾರು 220 ಕಿ.ಮೀ. ದೂರ. ಬೆಂಗಳೂರಿನಿಂದ ರಾಮನಗರ, ಚನ್ನಪಟ್ಟಣ, ಮದ್ದೂರು, ಅಲ್ಲಿಂದ ಎಡಕ್ಕೆ ಸಾಗಿ ಮಳವಳ್ಳಿ ಮೂಲಕ ಕೊಳ್ಳೇಗಾಲಕ್ಕೆ ಹೋಗಿ ಯಳಂದೂರಿಗೆ ಹೋಗಬಹುದು.
- ಮೈಸೂರಿನಿಂದ ಯಳಂದೂರಿಗೆ ಬೇಕಾದಷ್ಟು ಬಸ್‌ಗಳಿವೆ. ಬಿ.ಆರ್. ಹಿಲ್ಸ್‌ಗೆ ಹೆಚ್ಚು ಬಸ್‌ಗಳಿಲ್ಲ. ಮಧ್ಯಾಹ್ನ 12 ಗಂಟೆಗೆ ತಲುಪಿ 2 ಗಂಟೆಗೆ ಮರಳುವ ಬಸ್ ಇದೆ.
- ಇಲ್ಲಿಗೆ ಭೇಟಿ ನೀಡಲು ನವೆಂಬರ್‌ನಿಂದ ಮಾರ್ಚ್ ನಡುವೆ ಸೂಕ್ತ ಸಮಯ.
- ಬೈಕ್‌ನಲ್ಲಿ ಹೋಗುವಾಗ ಎಲ್ಲೂ ನಿಲ್ಲಿಸದೆ ಇರುವುದು ಸುರಕ್ಷಿತ. ಯಾಕೆಂದರೆ, ಕಾಡು ಪ್ರಾಣಿಗಳು ನಿರಂತರವಾಗಿ ಓಡಾಡಿಕೊಂಡಿರುತ್ತವೆ.
ಉತ್ತರಕನ್ನಡ ಜಿಲ್ಲೆಯಲ್ಲಿರುವ ದಾಂಡೇಲಿ ಅಭಯಾರಣ್ಯ 475.02 ಚದರ ಕಿ.ಮೀ. ಹರಡಿದೆ. ಸಾಹಸೀ ಕ್ರೀಡೆಗಳನ್ನು ಕೈಗೊಳ್ಳಲು ಸೂಕ್ತ ಸ್ಥಳ. ಪಕ್ಷಿಗಳನ್ನು ನೋಡಲು ಮತ್ತು ವನ್ಯಜೀವಿ ಫೋಟೋಗ್ರಫಿಗೆ ಇದು ಹೇಳಿ ಮಾಡಿಸಿದ ತಾಣ. ಹುಲಿ, ಚಿರತೆ, ಆನೆ, ಜಿಂಕೆ, ಕಾಡೆಮ್ಮೆ, ಕಾಡುಕೋಣ, ನರಿಗಳು, ಲಂಗೂರ್, ಬ್ಲ್ಯಾಕ್ ಪ್ಯಾಂಥರ್ಸ್, ಚುಕ್ಕಿ ಜಿಂಕೆ ಮೊದಲಾದ ಪ್ರಾಣಿಗಳು ಇವೆ. ಜತೆಗೆ 196ಕ್ಕೂ ಹೆಚ್ಚು ಜಾತಿಗೆ ಸೇರಿದ ಪಕ್ಷಿಗಳು, ಉಭಯಚರ ಹಾಗೂ ಸರೀಸೃಪಗಳಿಗೆ ಇದು ಆವಾಸಸ್ಥಾನ. ಕರ್ನಾಟಕದ ಎರಡನೇ ದೊಡ್ಡ ವನ್ಯಧಾಮ ಎನಿಸಿಕೊಂಡಿರೋ ದಾಂಡೇಲಿಯನ್ನು 2007ರಲ್ಲಿ ಹುಲಿ ಸಂರಕ್ಷಿತ ಅರಣ್ಯ ಎಂದು ಘೋಷಿಸಲಾಗಿದೆ.
ಧಾರವಾಡದಿಂದ 57 ಕಿ.ಮೀ. ಹುಬ್ಬಳ್ಳಿಯಿಂದ 75ಕಿ.ಮೀ., ಬೆಳಗಾವಿಯಿಂದ 110 ಕಿ.ಮೀ., ಬೆಂಗಳೂರಿನಿಂದ 48 ಕಿ.ಮೀ., ಗೋವಾದಿಂದ 150 ಕಿ.ಮೀ. ಹತ್ತಿರದ ವಿಮಾನ ನಿಲ್ದಾಣ 110ಕಿ.ಮೀ., ಹುಬ್ಬಳ್ಳಿ 75 ಕಿ.ಮೀ., ಗೋವಾ 150 ಕಿ.ಮೀ. ರೈಲು ಸಾರಿಗೆ ವ್ಯವಸ್ಥೆ ಇದೆ. ಅಲ್ಲದೆ ದಾಂಡೇಲಿಗೆ ಬೆಂಗಳೂರಿನಿಂದ ಸಾಕಷ್ಟು ಸರಕಾರಿ ಹಾಗೂ ಖಾಸಗಿ ಬಸ್ ಸೌಲಭ್ಯಗಳಿವೆ. ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಿಂದ ದಾಂಡೇಲಿಗೆ ಉತ್ತಮ ಸಂಪರ್ಕವಿದೆ. ಪ್ರಕೃತಿ ಆರಾಧಕರ ನೆಚ್ಚಿನ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಕಣ್ಣು ಹಾಯಿಸಿದುದ್ದಕ್ಕೂ ಹಚ್ಚ ಹಸಿರಿನಿಂದ ಕಂಗೊಳಿಸುವ ಗಿರಿಕಂದರಗಳು. ಸುಡುಬಿಸಿಲಲ್ಲೂ ಬೀಸಿ ಬರುವ ತಂಗಾಳಿಗೆ ಮೈಯೊಡ್ಡಲು ಅದೇನೋ ಪುಳಕ. ದೇಗುಲದಿಂದ ಕೇಳಿ ಬರುವ ಗಂಟೆಯ ನಿನಾದಕ್ಕೆ ಕಿವಿಯಾಗುವ ತವಕ. ಮಂಜುಮುಸುಕಿನ ಆಹ್ಲಾದಕರ ವಾತಾವರಣ. ಹೀಗೆ ಸದಾ ಪ್ರವಾಸಿಗರಿಗೆ ಉಲ್ಲಾಸ ತುಂಬುತ್ತಾ ತನ್ನತ್ತ ಕೈಬೀಸಿ ಕರೆಯುವ ತಾಣವೇ ಹಿಮವದ್ ಗೋಪಾಲಸ್ವಾಮಿ ಬೆಟ್ಟ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿಗೆ ಸಮೀಪವಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ರಾಜಧಾನಿ ಬೆಂಗಳೂರಿನಿಂದ 220 ಕಿ.ಮೀ. ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನಿಂದ 74 ಕಿ.ಮೀ. ದೂರದಲ್ಲಿದೆ. ಗುಂಡ್ಲುಪೇಟೆಯಿಂದ 20 ಕಿ.ಮೀ. ಊಟಿ ರಸ್ತೆಯಲ್ಲಿ ಸಾಗಿದರೆ ಅಲ್ಲಿ ಹಂಗಳ ಎಂಬ ಗ್ರಾಮ ಸಿಗುತ್ತದೆ. ಅಲ್ಲಿಂದ ಬಲಗಡೆ ಸಾಗಿದರೆ ಬೃಹದಾಕಾರದಲ್ಲಿ ಹರಡಿ ನಿಂತಿರುವ ಶ್ರೀಗೋಪಾಲಸ್ವಾಮಿ ಬೆಟ್ಟ ಎದುರಾಗುತ್ತದೆ.