Advertisement
ಅಷ್ಟು ದೂರ ಹಣ ಖರ್ಚು ಮಾಡಿ ಹೋಗಿ ನೋಡುವಂತಹ ಯಾವ ಪ್ರವಾಸಿ ತಾಣವೂ ಕತಾರ್‌ನಲ್ಲಿಲ್ಲ. ಪ್ರವಾಸಕ್ಕೆ ಹೇಳಿದ ಒಂದು ದೇಶವೇ ಅದಲ್ಲ. ಒಳ್ಳೆಯ ಕೆಲಸ ಸಿಕ್ಕಿದರೆ ಅಲ್ಲಿ ಹೋಗಿ ಸಾವಿರಾರು ರಿಯಲುಗಳಲ್ಲಿ ಸಂಬಳ ಎಣಿಸುತ್ತಾ ಐಷಾರಾಮಿ ಜೀವನ ನಡೆಸುವುದಕ್ಕೆ ಕತಾರ್ ಲಾಯಕ್ಕೇ ಹೊರತು ಅದರಿಂದಾ ಚೆಗೆ ಕತಾರಿನ ಬಗ್ಗೆ ಹೇಳುವಂತಹ ವಿಶೇಷಗಳೇನೂ ಇಲ್ಲ.
Related Articles
Advertisement
ಅಲ್ಲಿ ಹೆಚ್ಚು ಕಡಿಮೆ 25 ಲಕ್ಷ ಜನರಿದ್ದಾರೆ, ಅವರಲ್ಲಿ 7 ಲಕ್ಷ ಭಾರತೀಯರೇ ಇದ್ದಾರೆ. ಅಷ್ಟು ಜನಕ್ಕೆ ಆಹಾರ ಪೂರೈಕೆ ಮಾಡುವುದು ಎಲ್ಲಿಂದ? ಅಕ್ಕಿ, ಗೋದಿ, ತರಕಾರಿಗಳು, ಸಾಂಬಾರ ಪದಾರ್ಥಗಳು ಎಲ್ಲವೂ ಬೇರೆ ದೇಶಗಳಿಂದಲೇ ಬರಬೇಕು. ಹೋಗಲಿ ಹಾಲಾದರೂ ಇದೆಯಾ? ಅದನ್ನು ಕೂಡ ಬೇರೆ ದೇಶಗಳಿಂದಲೇ ಆಮದು ಮಾಡಿಕೊಳ್ಳಬೇಕು. ದೋಹಾದಲ್ಲಿ ನೆಲೆಸಿರುವ ನನ್ನ ಆತ್ಮೀಯ ಸ್ನೇಹಿತರೊಬ್ಬರು ಹೇಳಿದ್ದರು ಆಹಾರ ಸಾಮಾಗ್ರಿಗಳಿಗಾಗಿ ಈಗಾಗಲೇ ಮಾಲ್‌ಗಳಲ್ಲಿ ಜನ ಮೈಲುದ್ದ ಕ್ಯೂ ನಿಂತಿದ್ದಾರೆ.ನಾನು ಹೇಗೋ ಕಷ್ಟಪಟ್ಟು ಒಂದು ತಿಂಗಳಿ ಗಾಗುವಷ್ಟು ಅಕ್ಕಿ ಮುಂತಾದ ಸಾಮಾಗ್ರಿಗಳನ್ನು ಖರೀದಿಸಿ ತಂದೆ ಅಂತ. ಮನುಷ್ಯನಿಗೆ ಅತಿ ಮುಖ್ಯವಾಗಿ ಬೇಕಾಗುವುದು ಆಹಾರ, ಅದೇ ಸಿಗದಿದ್ದರೆ ಎಂತಹಾ ಪರಿಸ್ಥಿತಿ ನಿರ್ಮಾಣವಾಗಬಹುದು?
ಅಲ್ಲಿನ ರಾಜ ಮಾತ್ರ ಸುಮ್ಮನೆ ಕೂರಲಿಲ್ಲ. ಉಳಿದ ರಾಷ್ಟ್ರಗಳು ನಿಷೇಧ ಹೇರಿದವು ಅಂತ ಅವುಗಳು ಹಾಕಿದ ಶರತ್ತುಗಳನ್ನು ಒಪ್ಪಿಕೊಂಡು ಸಲಾಂ ಹೊಡೆಯಲೂ ಇಲ್ಲ. ಹೇಗೂ ಸೌದಿ, ಬಹರೇನ್, ದುಬೈ, ಈಜಿಪ್ಟ್ ಮುಂತಾದೆಡೆಗೆ ದಿನವೂ ಪ್ರಯಾಣಿ ಸು ತ್ತಿದ್ದ ಕತಾರ್ ಏರ್‌ವೆàಸ್‌ನ ನೂರಾರು ವಿಮಾನಗಳು ಖಾಲಿ ಬಿದ್ದಿದ್ದವಲ್ಲ, ಅವುಗಳೆಲ್ಲವನ್ನೂ ವಿಶ್ವದ ಬೇರೆ ಬೇರೆ ರಾಷ್ಟ್ರಗಳಿಗೆ ಕಳುಹಿಸಿ ಅಲ್ಲಿಂದ ಆಹಾರ ಪದಾರ್ಥಗಳನ್ನು ಆಮದು ಮಾಡಿ ಕೊಳ್ಳುವಲ್ಲಿ ಯಶಸ್ವಿಯಾದ. ಮೊದಲಿದ್ದ ದಾಸ್ತಾನು ಮುಗಿಯುವ ಮೊದಲು ಅಂದರೆ ಎಪ್ಪತ್ತೆರಡೇ ತಾಸಿನೊಳಗೆ ಆಹಾರ ಪದಾರ್ಥ ಗಳು ಕತಾರ್ ಸೇರುವಂತೆ ಮಾಡಿದ. ಊಟಕ್ಕೇನಾದರೂ ಸಿಗುತ್ತೋ ಇಲ್ಲವೋ ಎನ್ನುವ ಭಯದಲ್ಲಿದ್ದ ಜನಕ್ಕೆ ಈ ಕ್ರಮ ಧೈರ್ಯ ತುಂಬಿತಾ ದರೂ ಎಲ್ಲ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದವು. ಕತಾರ್‌ನಲ್ಲಿ ಅದಕ್ಕೂ ಮೊದಲು ಒಂದೇ ಒಂದು ಡೈರಿ ಇರಲಿಲ್ಲವಂತೆ. ಹಾಲು ಅಗತ್ಯವಾಗಿ ಬೇಕಾಗಿದ್ದರಿಂದ ಹಾಲೆಂಡಿ ನಿಂದ ನಾಲ್ಕು ಸಾವಿರ ದನಗಳನ್ನು ಖರೀದಿಸಿ ತರಲಾಯಿತು. ಅವುಗಳಲ್ಲಿ ಎಂಟು ನೂರು ದನಗಳನ್ನು ಏರ್‌ಲಿಫ್ಟ್ ಮಾಡಿದ ರೆಂದರೆ ನೀವೊಮ್ಮೆ ಹುಬ್ಬೇರಿಸದೇ ಇರಲಾರಿರಿ.
ನಮ್ಮಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿತು ಅಂತ ಸುದ್ದಿ ಬಂದಾಗಲೇ ಕಾವೇರುವ ಪ್ರತಿಭಟನೆ ನೆನಪಾಯ್ತಾ? ಅಲ್ಲೂ ಕೂಡ ಪ್ರತಿಭಟನೆಗಳು ನಡೆದಿರಬಹುದಾ ಎನ್ನುವ ಕುತೂಹಲ ಮೂಡಿತಾ? ಇಲ್ಲವೇ ಇಲ್ಲ. ಹೇಗೂ ಶ್ರೀಮಂತ ರಾಷ್ಟ್ರ ಅದು. ಇಂತಹ ಬೆಲೆ ಹೆಚ್ಚಳಗಳೆಲ್ಲಾ ಅಲ್ಲಿನ ಜನರಿಗೆ ಅದೊಂದು ದೊಡª ಹೊರೆ ಅಂತ ಅನಿಸಲಿಲ್ಲವೋ ಏನೋ? ಹೇಗಾದರೂ ಮಾಡಿ ರಾಜ ಜನರಿಗೆ ಆಹಾರ ಸಾಮಾಗ್ರಿಗಳ ಕೊರತೆಯಾಗದಂತೆ ನೋಡಿಕೊಂಡಿದ್ದನಲ್ಲಾ, ಅಷ್ಟು ಮಾತ್ರ ಸಾಕಾಗಿತ್ತು ಅಲ್ಲಿನ ಜನರಿಗೆ. ವ್ಯಾಪಕ ಪ್ರಮಾಣದಲ್ಲಿ ಬೆಲೆ ಹೆಚ್ಚಳವಾದರೂ, ದೇಶ ದಾದ್ಯಂತ ಎಲ್ಲ ಉದ್ಯಮಗಳು ನೆಲಕಚ್ಚಿದರೂ, ಸಾವಿರಾರು ಜನ ಉದ್ಯೋಗ ಕಳೆದುಕೊಂಡರೂ, ದೇಶದ ಆರ್ಥಿಕತೆಗೆ ಅಷ್ಟು ದೊಡ್ಡ ಪೆಟ್ಟು ಬಿದ್ದರೂ ಸಹ ಜನ ರಾಜನ ಬೆನ್ನಿಗೆ ನಿಂತರು. ಎಷ್ಟೆಂದರೆ, ಈ ಬಿಕ್ಕಟ್ಟು ಆರಂಭವಾದ ಬಳಿಕ ಅಲ್ಲಿನ ಸ್ಥಳೀಯ ಜನ ತಮ್ಮ ಕಾರುಗಳಲ್ಲಿ, ಮನೆಗಳ, ಕಚೇರಿಗಳ ಗೋಡೆಗಳಲ್ಲಿ ತಮ್ಮ ರಾಜನ ಫೋಟೋ ಹಾಕಿ ರಾಜನೊಂದಿಗೆ ನಾವಿದ್ದೇವೆ ಎನ್ನುವ ಸಂದೇಶವನ್ನು ಆ ನಾಲ್ಕು ರಾಷ್ಟ್ರಗಳಿಗೆ ಸಾರಿ ಹೇಳುವ ಪ್ರಯತ್ನವನ್ನು ಮಾಡಿದರು. ಡಿ.18 ನಡೆದ ಕತಾರ್ ರಾಷ್ಟ್ರೀಯ ದಿನದಲ್ಲಿ ಹಿಂದೆಂದಿಗಿಂತಲೂ ದೊಡ್ಡದಾದ ಪರೇಡನ್ನು ಪ್ರದರ್ಶಿಸುವ ಮೂಲಕ ನಾವೇನೂ ಎದೆಗುಂದಿಲ್ಲ, ಎಂತಹ ಪರಿಣಾಮವನ್ನು ಎದುರಿಸಲೂ ಸಿದ್ಧ ಅಂತ ಕತಾರ್ ಸಾರಿ ಹೇಳಿತು.
ಕತಾರ್ ಅನಿಲ ರಫ್ತು ಮಾಡುವ ಪ್ರಮುಖ ರಾಷ್ಟ್ರಗಳದು. ಭಾರತವೂ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಇಲ್ಲಿಂದಲೇ ಅನಿಲ ಆಮದು ಮಾಡಿಕೊಳ್ಳುತ್ತಿವೆ. ಅದರಲ್ಲೂ ಕತಾರ್ ಮೇಲೆ ನಿರ್ಬಂಧ ಹೇರಿದ ದುಬೈ ಅನಿಲಕ್ಕಾಗಿ ಕತಾರನ್ನೇ ಅವಲಂಬಿಸಿದೆ. ನಾವು ನೀರು ಖರ್ಚು ಮಾಡಿದಂತೆ ವಿದ್ಯುತ್ ಖರ್ಚು ಮಾಡುವ ಯು.ಎ.ಇ ಆ ವಿದ್ಯುತ್ತನ್ನು(ಶೇಕಡಾ 70) ಉತ್ಪಾದಿಸುವುದು ಕತಾರ್ ನೀಡುವ್ ಗ್ಯಾಸ್‌ನಿಂದ! ಇಲ್ಲಿ ನನಗೆ ಸೋಜಿಗವಾಗಿ ಕಂಡ ಒಂದು ಸಂಗತಿಯೆಂದರೆ, ಇಷ್ಟೆಲ್ಲಾ ರಂಪಾಟಗಳ ನಡುವೆಯೂ ಯು.ಎ.ಇ ಮತ್ತು ಕತಾರ್ ನಡುವಿನ ಅನಿಲ ಸಂಬಂಧ ಹಾಗೆಯೇ ಮುಂದುವರಿದೆ.
ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡ ಬಳಿಕ ಯು.ಎ.ಇಗೆ ಕತಾರ್‌ನ ಗ್ಯಾಸ್ ಏಕೆ ಬೇಕು? ಕತಾರ್ ಮೇಲೆ ನಿರ್ಬಂಧ ಹೇರುವಾಗ ಇದ್ದ ಶರತ್ತುಗಳೆಲ್ಲವೂ ಗ್ಯಾಸ್ ಅಮದು ಮಾಡಿಕೊಳ್ಳುವಾಗ ಲೆಕ್ಕಕ್ಕೆ ಬರುವುದಿಲ್ಲವಾ ಅಂತ ನೀವು ಕೇಳಬ ಹುದು. ವಿಷಯ ಏನಪ್ಪಾ ಅಂದ್ರೆ ಯು.ಎ.ಇಗೆ ವಿದ್ಯುತ್ ಬೇಕಾ ದರೆ ಕತಾರಿನ ಗ್ಯಾಸ್ ಬೇಕು. ಕತಾರ್‌ಗೆ ಪೆಟ್ರೋಲಿಯಮ್ ಬಿಟ್ಟರೆ ತನ್ನ ಆರ್ಥಿಕತೆಯ ಅತಿ ಪ್ರಮುಖ ಮೂಲವಾಗಿರುವ ಅನಿಲವನ್ನು ಇತರ ದೇಶಗಳಿಗೆ ರಫ್ತು ಮಾಡಬೇಕಾದರೆ ಯು.ಎ.ಇ ಮಾರ್ಗವಾಗಿಯೇ ಹೋಗಬೇಕು. ಈ ವಿಷಯದಲ್ಲೂ ಕಿರಿಕ್ ಮಾಡಿಕೊಂಡರೆ ಎರಡೂ ದೇಶಗಳಿಗೆ ಆಪತ್ತು ತಪ್ಪಿದ್ದಲ್ಲ ಎನ್ನುವ ಅರಿವು ಇದ್ದಿದ್ದರಿಂದ ಇಬ್ಬರೂ ತೆಪ್ಪಗೆ ಇದ್ದಾರೆ. ಇಷ್ಟೆಲ್ಲ ಏರುಪೇರುಗಳಾಗಿದ್ದರೂ 2022ರಲ್ಲಿ ಕತಾರಿನಲ್ಲಿ ನಡೆಯಲಿರುವ ಫಿಫಾ ಪಂದ್ಯಾಟಕ್ಕೆ ಸಿದ್ಧತೆಗಳು ನಿರಾತಂಕವಾಗಿ ಮುಂದುವರಿದಿದೆ. ನಿರ್ಮಾಣ ಸಾಮಾಗ್ರಿಗಳ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿರುವುದರಿಂದ ಕೆಲಸಗಳು ಸ್ವಲ್ಪ ನಿಧಾನ ಗೊಂಡಿವೆ. ಅಸಲಿಗೆ ವಿಸ್ತೀರ್ಣದಲ್ಲಿ ಕೇರಳದಷ್ಟೂ ದೊಡ್ಡದಿಲ್ಲದ, ಫಿಫಾ ಆಡುವುದಕ್ಕೆ ಅರ್ಹತೆಯನ್ನೇ ಗಳಿಸದ ರಾಷ್ಟ್ರವಾಗಿರುವ ಕತಾರ್ ಫಿಫಾದಂತಹ ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದೇ ಒಂದು ದೊಡ್ಡ ಸಂಗತಿ. ಇಷ್ಟೆಲ್ಲಾ ಆಧ್ವಾನಗಳ ನಡು ವೆಯೂ ಅದು ತಲೆಕೆಡಿಸಿಕೊಳ್ಳದೆ ಮುನ್ನುಗ್ಗುತ್ತಿದೆಯೆಂದರೆ ಅದರ ಇಚ್ಛಾಶಕ್ತಿಗೆ, ಸಾಮರ್ಥ್ಯಕ್ಕೆ ಶಹಬ್ಟಾಶ್ ಎನ್ನಲೇಬೇಕು. ಈ ಬಿಕ್ಕಟ್ಟು ಆರಂಭವಾಗಿ ಆರು ತಿಂಗಳಿಗೂ ಹೆಚ್ಚು ಕಾಲವಾಗಿದೆ. ಪರಸ್ಪರ ರಾಷ್ಟ್ರಗಳು ಪ್ರತಿಷ್ಠೆಯನ್ನು ಬಿಡಲು ಸಿದ್ಧವಿಲ್ಲದ ಕಾರಣ ಸದ್ಯಕ್ಕಂತೂ ಪರಿಸ್ಥಿತಿ ತಿಳಿಯಾಗುವ ಯಾವುದೇ ಲಕ್ಷಣಗಳಿಲ್ಲ. ಕತಾರ್ ಮನಸ್ಸು ಮಾಡಿದ್ದರೆ ಬಿಕ್ಕಟ್ಟು ಆರಂಭವಾದ ಕೆಲವೇ ದಿನಗಳಲ್ಲಿ ಎಲ್ಲವೂ ಸುಖಾಂತ್ಯಗೊಳ್ಳುತ್ತಿತ್ತು. ಮೊದಲು ಹದಿಮೂ ರಿದ್ದ ಶರತ್ತುಗಳನ್ನು ಆರಕ್ಕಿಳಿಸಿದರೂ ಸಹ ಕತಾರ್ ಅವುಗಳನ್ನು ಒಪ್ಪಲು ಸಿದ್ಧವಿರಲಿಲ್ಲ. ಪ್ರತಿಷ್ಠೆಯನ್ನು ಬಿಟ್ಟು ಮಂಡಿಯೂರಲು ಕತಾರ್ ತಯಾರಿಲ್ಲ. ಆದರೆ ಭಯೋತ್ಪಾದನೆಯೋ ಮತ್ತೂಂದೋ, ಕಾರಣಗಳೇನೇ ಇರಲಿ, ಎಲ್ಲ ಬಿಕ್ಕಟ್ಟು, ಹಾಹಾಕಾರಗಳ ನಡು ವೆಯೂ ಆರು ತಿಂಗಳಾದರೂ ಕತಾರ್ ಇನ್ನೂ ಮಕಾಡೆ ಮಲಗಿಲ್ಲ. ಶ್ರೀಮಂತಿಕೆಯೇ ಅದಕ್ಕೆ ಪ್ರಮುಖ ಕಾರಣವೂ ಇರಬಹುದು. ಆದರೆ ಎಲ್ಲವನ್ನೂ ಸಂಭಾಳಿಸಿಕೊಂಡು ಕತಾರ್ ಇನ್ನೂ ಮುಂದು ವರಿದಿದೆ. ಸುಮ್ಮನೇ ಮುಂದುವರಿದಿಲ್ಲ, ತನಗೆ ನಿರ್ಬಂಧ ಹೇರಿದ ರಾಷ್ಟ್ರಗಳೆದುರು ಎದೆಯೆತ್ತಿ ನಿಂತಿದೆ. ಆ ಕಾರಣಕ್ಕೆ ಕತಾರ್‌ನ್ನು ಮೆಚ್ಚಿಕೊಳ್ಳದೇ ಇರಲಾಗದು. ಶಿವಪ್ರಸಾದ್ ಭಟ್ ಟಿ.