ಬೆಂಗಳೂರು : ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಹರಿದಾಡುತ್ತಿದ್ದು, ವೈದ್ಯಕೀಯ ಸಿಬ್ಬಂದಿ ದುಡ್ಡಿಗಾಗಿ ಕೋವಿಡ್ ಸೋಂಕಿತರನ್ನು ಕತ್ತು ಹಿಸುಕಿ ಕೊಲ್ಲುತ್ತಿದ್ದಾನೆ ಎಂದು ವೈರಲ್ ಮಾಡಲಾಗಿತ್ತು. ಅಲ್ಲದೆ ರೋಗಿಗಳ ಮೇಲೆ ವೈದ್ಯಕೀಯ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋ ಮತ್ತು ತನ್ನ ತಂದೆಯನ್ನು ಕಳೆದುಕೊಂಡ ಯುವತಿಯೊಬ್ಬಳು ಅಳುತ್ತಿದ್ದ ವಿಡಿಯೋಗಳು ಭಾರೀ ವೈರಲ್ ಆಗುತ್ತಿವೆ. ಆದ್ರೆ ಈ ವಿಡಿಯೋಗಳ ಅಸಲಿಯತ್ತು ಏನು ಎಂಬುದರ ಸುದ್ದಿ ಇಲ್ಲಿದೆ.
ಮೊದಲನೆಯದಾಗಿ ಕೋವಿಡ್ ರೋಗಿಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗುತ್ತಿದೆ ಎಂಬ ವಿಡಿಯೋ ಸುಳ್ಳು. ಇದು ಬಾಂಗ್ಲಾದೇಶದ ವಿಡಿಯೋ. ಈ ವಿಡಿಯೋವನ್ನು 2020ರಲ್ಲಿ ಅಪ್ ಲೋಡ್ ಮಾಡಲಾಗಿದೆ. ಆದ್ರೆ ಆ ವಿಡಿಯೋವನ್ನು ಇಟ್ಟುಕೊಂಡ ಜನರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ.
ಇನ್ನು ರೋಗಿಯ ಮೇಲೆ ಹಲ್ಲೆ ಎಂಬ ವಿಡಿಯೋಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಈ ವಿಡಿಯೋ ಪಾಟಿಯಾಲಾದ್ದು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ವೈದ್ಯರು ನಿಯಂತ್ರಣ ಮಾಡುತ್ತಿದ್ದಾರೆ. ಮತ್ತು ಮೂರನೇ ವಿಡಿಯೋದಲ್ಲಿ ಯುವತಿಯು ತನ್ನ ತಂದೆಯನ್ನು ಕಳೆದುಕೊಂಡು ಅಳುತ್ತಿರುವ ವಿಡಿಯೋ ಬೆಂಗಳೂರಿನ ಆಕ್ಸ್ ಫರ್ಡ್ ಆಸ್ಪತ್ರೆಯದ್ದಾಗಿದೆ. ಈ ಮೂರು ವಿಡಿಯೋಗಳನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶವನ್ನು ರವಾನೆ ಮಾಡಲಾಗುತ್ತಿದ್ದು, ಇದನ್ನು ನಂಬಬೇಡಿ ಎಂದು ಪೊಲೀಸರು ಕೂಡ ತಿಳಿಸಿದ್ದಾರೆ.
ಮತ್ತೊಂದು ವಿಚಾರ ಏನಂದ್ರೆ ಇನ್ ಸ್ಟಾಗ್ರಾಮ್ ನ ಮಹಾನಾಯಕ್(mahanayak-kannada) ಎಂಬ ಖಾತೆಯಿಂದ ವೈರಲ್ ಸುದ್ದಿಯನ್ನು ಹರಿಬಿಡಲಾಗಿದೆ. ಇದೀಗ ಸತ್ಯ ಗೊತ್ತಾಗುತ್ತಿದ್ದಂತೆ ಸುಳ್ಳು ಸುದ್ದಿ ಹಬ್ಬಿಸಿದ ಯುವ ಕ್ಷಮೆ ಕೇಳಿದ್ದಾನೆ. ಈ ಬಗ್ಗೆ ಸತ್ಯ ಗೊತ್ತಾಗುತ್ತಿದ್ದಂತೆ ನಾನು ಕೂಡ ಈ ವಿಡಿಯೋವನ್ನು ಡಿಲೀಡ್ ಮಾಡಿದ್ದೇನೆ. ಮತ್ತೆ ಯಾರೂ ಕೂಡ ಈ ವಿಡಿಯೋವನ್ನು ಶೇರ್ ಮಾಡಬೇಡಿ ಎಂದು ಕ್ಷಮೆ ಕೇಳಿದ್ದಾನೆ.