ನವದೆಹಲಿ/ಚಂಡೀಗಡ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನವದೆಹಲಿ ಗಡಿ ಪ್ರದೇಶದಲ್ಲಿ ಹತ್ತು ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
“ರೈತ ಸಂಘಟನೆಗಳು ಪ್ರತಿಭಟನೆ ನಡೆಸುವ ಮೂಲಕ ನವದೆಹಲಿಗೆ ಭಾರೀ ಅನಾನುಕೂಲ ಉಂಟು ಮಾಡಿದ್ದೀರಿ’ ಎಂದು ನ್ಯಾ.ಎ.ಎಂ.ಖಾನ್ವಿಲ್ಕರ್ ಮತ್ತು ನ್ಯಾ.ಸಿ.ಟಿ.ರವಿಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ಕಟುವಾಗಿ ಆಕ್ಷೇಪ ಮಾಡಿದೆ.
ನವದೆಹಲಿಯ ಜಂತರ್‌ಮಂತರ್‌ನಲ್ಲಿ ಸತ್ಯಾಗ್ರಹ ನಡೆಸಲು ಅವಕಾಶ ಕೊಡಬೇಕು ಎಂದು ರೈತ ಸಂಘಟನೆಗಳ ಪರ ನ್ಯಾಯವಾದಿ ಮನವಿ ಮಾಡಿಕೊಂಡಾಗ ಅದನ್ನು ಒಪ್ಪಲು ನ್ಯಾಯಪೀಠ ನಿರಾಕರಿಸಿತು.
ಇದನ್ನೂ ಓದಿ:ದಲಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಿಸಿಯೂಟ | ಮುಖ್ಯ ಶಿಕ್ಷಕ ಅಮಾನತು
ದೇಶದ ಎಲ್ಲಾ ನಾಗರಿಕರು ಭೀತಿ ಇಲ್ಲದೆ ದೇಶಾದ್ಯಂತ ಸಂಚರಿಸಲು ಅವಕಾಶ ಇರಬೇಕು ಎಂದು ನ್ಯಾಯಪೀಠ ಹೇಳಿದೆ. ಅ.4ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ.
ಜಲಫಿರಂಗಿ ಪ್ರಯೋಗ:
ಇದೇ ವೇಳೆ, ಕಾಯ್ದೆ ವಿರೋಧಿಸಿ ಹರ್ಯಾಣ ಡಿಸಿಎಂ ದುಷ್ಯಂತ್ ಚೌಟಾಲಾ ಅವರ ಕಾರ್ಯಕ್ರಮಕ್ಕೆ ತಡೆಯೊಡ್ಡಲು ಯತ್ನಿಸಿದ ರೈತರ ಮೇಲೆ ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಾರೆ. ಜತೆಗೆ ಘರ್ಷಣೆಯೂ ನಡೆದಿದೆ.