Advertisement

ಡ್ರೈವಿಂಗ್‌ ಲೈಸನ್ಸ್‌: ಆಧಾರ್‌ ಜೋಡಣೆ ಕಡ್ಡಾಯ

08:14 AM Sep 16, 2017 | Team Udayavani |

ಗುರುಗ್ರಾಮ: ಪಾನ್‌ ಕಾರ್ಡ್‌ ಜತೆಗೆ ಆಧಾರ್‌ ಜೋಡಣೆ ಮಾಡಿದ ಬಳಿಕ ಇನ್ನು ಡ್ರೈವಿಂಗ್‌ ಲೈಸನ್ಸ್‌ಗೂ ಆಧಾರ್‌ ಜೋಡಣೆ ಮಾಡಬೇಕು.  ಇಂಥ ಒಂದು ಕ್ರಮದ ಬಗ್ಗೆ ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಬಹು ಪರವಾನಿಗೆ ವ್ಯವಸ್ಥೆ ನಿಯಂತ್ರಿಸಲು ಇಂಥ ಕ್ರಮ ಅನಿವಾರ್ಯ ಎನ್ನುವುದು ಕೇಂದ್ರ ಸರಕಾರದ ವಾದ.

Advertisement

ಹರಿಯಾಣದ ಗುರುಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್‌ ಈ ಮಾಹಿತಿ ನೀಡಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಜತೆಗೆ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲಿಯೇ ಈ ವ್ಯವಸ್ಥೆ ಜಾರಿಯಾಗಲಿದೆ ಎಂದಿದ್ದಾರೆ. ಡಿಜಿಟಲ್‌ ಗುರುತಿನ ಮೂಲಕ ವಾಹನ ಇರುವಿಕೆಯನ್ನು ಮತ್ತಷ್ಟು ದೃಢಪಡಿಸಬಹುದು. ಅದಕ್ಕೆ ತಂತ್ರಜ್ಞಾನ ನೆರವು ನೀಡಲಿದೆ ಎಂದಿದ್ದಾರೆ ಕೇಂದ್ರ ಸಚಿವ. ಹೀಗಾಗಿ ಕೇಂದ್ರ ಸರಕಾರ ಅದನ್ನು ಆದ್ಯತೆಯ ಮೇಲೆ ಜಾರಿಗೊಳಿಸಲಿದೆ ಎಂದು ಹೇಳಲಾಗುತ್ತಿದೆ.

ಆಧಾರ್‌ ಮಾಹಿತಿ ಸಂಪೂರ್ಣ ಸುರಕ್ಷಿತವಾಗಿದೆ. ಅದನ್ನು ಕದಿಯಲು ಅಥವಾ ಸೋರಿಕೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ ಅವರು.

Advertisement

Udayavani is now on Telegram. Click here to join our channel and stay updated with the latest news.

Next