Advertisement

ಯಾವುದೇ ದೇಗುಲಕ್ಕೆ ಸ್ತ್ರೀಯರ ನಿರ್ಬಂಧ ಸಲ್ಲದು

08:36 AM Oct 06, 2018 | Team Udayavani |

ಹೊಸದಿಲ್ಲಿ: “”ಸಂವಿಧಾನದ ದೃಷ್ಟಿಯಲ್ಲಿ ಗಂಡು, ಹೆಣ್ಣು ಸಮಾನರು. ಹಾಗಾಗಿ, ಯಾವುದೇ ದೇಗುಲಕ್ಕೆ ಮಹಿಳೆಯರ ಪ್ರವೇಶವನ್ನು ನಿರಾಕರಿಸು ವಂತಿಲ್ಲ” ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ತಿಳಿಸಿದ್ದಾರೆ. 

Advertisement

ಶುಕ್ರವಾರ ಖಾಸಗಿ ಸಮಾರಂಭವೊಂದರಲ್ಲಿ ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಪ್ರವೇಶ ಕಲ್ಪಿಸಿ ತಾವು ಸೆ. 28ರಂದು ನೀಡಿದ್ದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, “”ಸಂವಿಧಾನದ ನೈತಿಕತೆಯಿಂದ ಯಾರೊಬ್ಬರೂ ವಂಚಿತರಾಗಬಾರದು. ಭಾರತದಲ್ಲಿ ಸಂವಿಧಾನದ ಸೌರ್ವ ಭೌಮತ್ವವೇ ಸರ್ವೋಚ್ಚವಾದದ್ದು. ನ್ಯಾಯಾಂಗವು ಸಂವಿಧಾನಾಧಾರಿತ ಕಾನೂನುಗಳನ್ನು ಪಾಲಿಸುತ್ತಿರುವ ಸ್ವತಂತ್ರ ಸಂಸ್ಥೆಯಾಗಿದ್ದು, ಶಬರಿಮಲೆ ವಿಚಾರದಲ್ಲಿ ಸಂವಿಧಾನದ ನೈತಿಕತೆ ಯನ್ನು ಪಾಲಿಸಲಾಗಿದೆ” ಎಂದರು.   

ಕಾಂಗ್ರೆಸ್‌ ಪ್ರತಿಭಟನೆ: ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರಾಕರಿಸಿರುವ ಕೇರಳ ಸರಕಾರದ ಕ್ರಮವನ್ನು ಖಂಡಿಸಿ ಕಾಂಗ್ರೆಸ್‌, ಶುಕ್ರವಾರ ಪತ್ತನಂತಿಟ್ಟದಲ್ಲಿ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಅನೇಕ ಮಹಿಳೆಯರೂ ಭಾಗವಹಿ ಸಿದ್ದರು. ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದ ಕೇರಳದ ವಿಪಕ್ಷ ನಾಯಕ ರಮೇಶ್‌ ಚೆನ್ನಿತ್ತಲ, ಆರ್‌ಎಸ್‌ಎಸ್‌-ಬಿಜೆಪಿ ಹಾಗೂ ಆಡಳಿತಾರೂಢ ಎಲ್‌ಡಿಎಫ್ ಪಕ್ಷಗಳು ರಾಜ್ಯದ ಜನತೆಗೆ ಮೋಸ ಮಾಡುತ್ತಿವೆ ಎಂದು ಆಪಾದಿಸಿದರು. 

ಮಹಿಳಾ ಪೊಲೀಸ್‌ ನೇಮಕ: ಸುಪ್ರೀಂ ತೀರ್ಪು ಹಿನ್ನೆಲೆಯಲ್ಲಿ ದೇಗುಲಕ್ಕೆ ಬರುವ ಮಹಿಳಾ ಭಕ್ತಾದಿಗಳ ಸುರಕ್ಷೆಗಾಗಿ ಶಬರಿಮಲೆಯಲ್ಲಿ ಮಹಿಳಾ ಪೊಲೀಸರನ್ನು ಕರ್ತವ್ಯಕ್ಕೆ ನೇಮಿಸ ಲಾಗುತ್ತದೆ ಎಂದು ಕೇರಳದ ಪೊಲೀಸ್‌ ಮಹಾ ನಿರ್ದೇಶಕ ಲೋಕನಾಥ್‌ ಬೆಹೆರಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next