ನೀನೆಂದರೆ, ನಾನು ಶಾಲೆಯಲ್ಲಿ ಇಷ್ಟ ಪಟ್ಟು ಕಂಠಪಾಠ ಮಾಡಿಕೊಂಡ ಏಕೈಕ ಜೀವಂತ ಪದ್ಯ, ನನ್ನ ಆತ್ಮಕಥನದ ಶೀರ್ಷಿಕೆ, ನಮ್ಮ ಹೊಲದ ಹುಚ್ಚೆಳ್ಳಿನ ಹೂ, ಅಚ್ಚ ಬಿಳುಪಿನ ಪುಟಾಣಿ ಕುರಿ ಮರಿ, ಹಾಲುªಂಬಿದ ರಾಗಿ ತೆನೆ, ನನ್ನೆದೆಯ ಪಾಟಿಯ ಮೇಲೆ ಬರೆದ ಮೊಟ್ಟ ಮೊದಲ ಅಕ್ಷರ, ಬ್ಯೂಟಿ ಪಾರ್ಲರುಗಳ ಕಡೆ ತಲೆ ಹಾಕಿಯೂ ಮಲಗದಂಥ ನೈಸರ್ಗಿಕ ಪುಟ್ಟ ಗ್ರಾಮದೇವತೆ!
ತಪ್ತ ಕಾಂಚನ ವರ್ಣೆಗೆ,
ನನ್ನಾತ್ಮದ ಕಾವ್ಯವೇ, ಇಂದಿಗೆ ನನಗೆ ನೀನು ಪರಿಚಯಗೊಂಡು ಹನ್ನೆರಡು ವಸಂತಗಳು ಮತ್ತು ಅಷ್ಟೇ ಬೇಸಿಗೆಕಾಲಗಳು! ಈ ಡಜನ್ನು ವರ್ಷಗಳ ದೀರ್ಘಾವಧಿಯಲ್ಲಿ ನಿನಗೆ ಬಟವಾಡೆ ಮಾಡಲಾಗದ ಪ್ರೇಮ ಪತ್ರಗಳನ್ನು ಎದೆಯ ಜೋಳಿಗೆಯಲ್ಲಿ ಇರಿಸಿಕೊಂಡು, ಊರು-ಕೇರಿ ಅಲೆಯುತ್ತಾ, ನಿನ್ನ ತಲುಪುವ ಹಾದಿಯಲ್ಲಿ ಸಿಕ್ಕ ವಿರಹದ ಮೈಲುಗಲ್ಲುಗಳನ್ನು ಕೂಡ ಲೆಕ್ಕ ಹಾಕದೇ, ನನ್ನೊಡಲೊಳಗಿನ ಭಾವನೆಗಳ ಕೂಸುಗಳನ್ನು ಈ ಬಿಳಿ ಹಾಳೆಯ ತೊಟ್ಟಿಲೊಳಗಿಟ್ಟು ನಿನಗೆ ತಲುಪಿಸುತ್ತಿದ್ದೇನೆ.
ಪ್ರಿಯೆ, ನನಗಿನ್ನೂ ನಿಖರವಾಗಿ ನೆನಪಿದೆ, ಅದು ಕ್ರಿ.ಶ 2005ರ ಶುಭ ಶುಕ್ರವಾರ. ನಮ್ಮ ಕ್ಲಾಸಿನ ಅಷ್ಟೂ ಹುಡುಗಿಯರ ಪೈಕಿ, ಯೂನಿಫಾರ್ಮ್ ತೊಟ್ಟುಕೊಂಡ ಗಂಧರ್ವ ಕನ್ಯೆಯೊಬ್ಬಳು ಮು¨ªಾಗಿ ಮಂದಹಾಸ ಬೀರುತ್ತಿದ್ದ ದಿವ್ಯ ಘಳಿಗೆಯಲ್ಲಿ ಸುಮಾರು ಹದಿನೈದು ವರ್ಷಗಳಿಂದ ನನ್ನೊಡನಿದ್ದ ನನ್ನ ಹೃದಯ ಎದೆಯ ಜಾರುಗುಪ್ಪೆಯ ಮೇಲಿಂದ ನಿನ್ನತ್ತ ಜಾರಿಕೊಂಡು ಬಂದಿತ್ತು. ಇಡೀ ತರಗತಿಯ ಕಿಟಕಿ, ಬಾಗಿಲಿನ ಮೇಲೆÇÉಾ ಹಸಿರು ಚಿಗುರುತ್ತಿತ್ತು. ಕಪ್ಪು ಹಲಗೆಯ ಈ ತುದಿಯಿಂದ ಆ ತುದಿಯ ಮೇಲೆ ಮಳೆಬಿಲ್ಲು ಮಕಾಡೆ ಮಲಗಿತ್ತು. ನಿನ್ನ ದೇಹದ ಪ್ರತೀ ಜೀವಕೋಶಗಳು ಚಂದನವನ್ನು ಸ್ರವಿಸುತ್ತಿದ್ದವು. ನಾನು ಕಣ್ಮುಚ್ಚಿಕೊಂಡು ನಿನ್ನನ್ನೇ ಧೇನಿಸುತ್ತಿ¨ªೆ.
ನಿನ್ನ ಮಾಯಾವಿ ಮುಂಗುರುಳುಗಳು ಕವನ ವಾಚಿಸಲು ವೇದಿಕೆ ಮಾಡಿಕೊಡುತ್ತಿದ್ದ ಆ ಪ್ರಶಾಂತವಾದ ಹಣೆ, ಜಗದ ಅತೀ ಸುಂದರ ಕಣ್ಣುಗಳು ಎನ್ನುವ ಶಿರೋನಾಮೆ ಅಡಿಯಲ್ಲಿ ಗಿನ್ನೀಸು ಪುಸ್ತಕ ಸೇರಬಹುದಾದ ನಿನ್ನ ಕಾಜಲ… ಕಣ್ಣುಗಳು, ಮು¨ªಾದ ಮೂಗುತಿಗೆ ಸುಪಾರಿ ಕೊಟ್ಟು ನನ್ನ ಹೃದಯವನೇ ಕದ್ದ ನಿನ್ನ ಆ ಕಿಡಿಗೇಡಿ ಮೂಗು, ನನ್ನ ಬಡಪಾಯಿ ಕೆನ್ನೆಗೆ ಕೋಟಿ ಕೋಟಿ ಮುತ್ತುಗಳ ಸಾಲ ಕೊಡಬಹುದಾದಷ್ಟು ಶ್ರೀಮಂತವಾದ ನಿನ್ನ ತುಟಿಗಳು, ಅದೇ ತುಟಿ ದಂಡೆಯ ಮೇಲೆ ಧ್ಯಾನಸ್ಥ ಬುದ್ಧನಂತೆ ಕುಳಿತಿರುವ ಆ ಒಂಟಿ ಮಚ್ಚೆ, ನಿನ್ನ ಮೋಹಕ ಕಿವಿಯೋಲೆ, ಟಿಪಿಕಲ… ವಾಯುÕ, ಅಲ್ಪಾಯುಷ್ಯದ ನಿನ್ನ ಮುನಿಸು… ಎಲ್ಲವೂ ನನಗೆ ತುಂಬಾ ಅಂದರೆ ತುಂಬಾ ಇಷ್ಟ.
ನಿನಗೆ ಈ ವಿಷಯ ಗೊತ್ತಾ? ಕನ್ನಡದ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ‘ಕಾಮನಬಿಲ್ಲು’ ಎಂಬ ಪದಕ್ಕೆ ಸಮಾನಾರ್ಥಕ ಪದ ಬರೆಯಿರಿ ಎಂದು ಕೇಳಿದ್ದ ಪ್ರಶ್ನೆಗೆ ಮುಲಾಜಿಲ್ಲದೆ ನಾನು ನಿನ್ನ ಹೆಸರನ್ನು ಇನಿಷಿಯಲ್ಲಿನ ಸಮೇತ ಪೂರ್ತಿಯಾಗಿಯೇ ಬರೆದು ಬಂದಿ¨ªೆ!. ನಿನ್ನ ಕಣ್ಣ ಹೊಂಬೆಳಕಿಗೆ ಸೋತುಹೋದ ಮೇಲೆಯೇ “ಬೆಳಕು ಶಕ್ತಿಯ ಒಂದು ರೂಪ’ ಎನ್ನುವ ನಮ್ಮ ವಿಜ್ಞಾನದ ಮಾಸ್ತರರ ಪಾಠ ಈ ಪೆದ್ದನ ತಲೆಗೆ ಹತ್ತಿದ್ದು.
ಈ ಹನ್ನೆರಡು ವರುಷಗಳಲ್ಲಿ ಮೂರು ಸರಕಾರಗಳು ಬಂದು ಹೋಗಿವೆ, ನಿನ್ನ ಹೆಜ್ಜೆಗುರುತುಗಳಿದ್ದ ನಮ್ಮ ಶಾಲೆಯ ಆವರಣಕ್ಕೆÇÉಾ ಕಾಂಕ್ರೀಟಿನ ಮೇಕಪ್ಪು ಮಾಡಿಸಲಾಗಿದೆ, ನಿನ್ನಿಷ್ಟದ ಜೋಳ, ಹುಳಿ ಮಾವಿನ ಹೋಳುಗಳು ಐವತ್ತು ಪೈಸೆ ಬೆಲೆಗೆ ಈಗ ಸಿಗುತ್ತಿಲ್ಲ. ಇಂಥ ಸಂದಿಗ್ಧ ಕಾಲಘಟ್ಟದಲ್ಲಿಯೂ ನಿನ್ನೆಡಗಿನ ನನ್ನ ಪ್ರೇಮ ನಿವೇದನೆಯ ಧಾವಂತ ಕಿಂಚಿತ್ತೂ ಬದಲಾಗಿಲ್ಲ. ಇಂತಹ ನನ್ನ ಸಕ್ಕರೆ ನಿ¨ªೆಯ ಸ್ವಪ್ನದ ಹುಡುಗಿಯ ಹಾಲ್ಬಣ್ಣದ ಅಂಗಾಲನು ನನ್ನ ಅಂಗೈಯ ಅಡ್ಡ ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಊರೆÇÉಾ ಮೆರವಣಿಗೆ ಮಾಡುವಷ್ಟು ಭಕ್ತಿ ಇದೆ. ಪಿಳ್ಳೆನೆವಗಳ ಹೊತ್ತು ನಿನ್ನ ಭೇಟಿ ಮಾಡುವ ಮಹತ್ತರ ಯೋಜನೆಗಳಿವೆ.
ಇನ್ನು ಮುಂದೆ ಸಮಯದ ಹಂಗಿಲ್ಲದ ನಾನು ಪ್ರತಿಸಲ ಭೇಟಿಗೆ ಬೇಕಂತಲೇ ಕೈಗಡಿಯಾರವ ಮರೆತು ಬರುವೆ. ನೀನೂ ಅಷ್ಟೇ, ನಿನ್ನ ತೋಳ ನನ್ನ ಹನ್ನೆರಡು ವರುಷಗಳ ಏಕಾಂತವನ್ನು ಧೂಳು ಮಾಡಲು ಸಿದ್ದವಾಗಿಯೇ ಬಾ!
– ಇಂತಿ ಬ್ಲಾಕ್ ಬೋರ್ಡಿಗಿಂತ ಜಾಸ್ತಿ ನಿನ್ನನ್ನೇ ತನ್ಮಯನಾಗಿ ನೋಡುತ್ತಿದ್ದವ
– ಡಾ. ಮಹೇಂದ್ರ ಎಸ್. ತೆಲಗರಹಳ್ಳಿ