Advertisement
“ಇನ್ಮೆಲೆ ನನ್ನನ್ನು ಮಾತಾಡಿಸಲೇಬೇಡ. ಫೋನ್ ಮಾಡೋಕೆ ಪ್ರಯತ್ನ ಮಾಡ್ಬೇಡ. ಯಾಕೆ, ಏನು ಅಂತೆಲ್ಲಾ ಪ್ರಶ್ನೆನೂ ಕೇಳ್ಬೇಡ… ಪ್ಲೀಸ್ ಕಣೋ ಪೆದ್ದು… ನನ್ನ ಪಾಡಿಗೆ ನನ್ನ ಬಿಟ್ಟುಬಿಡು…’ ಇಂಥದ್ದೊಂದು ಮಾತು ನಿನ್ನಿಂದ ಬಂತಲ್ಲ; ಆ ಕ್ಷಣ ನನ್ನ ಹೃದಯವೆಂಬ ಹೃದಯವು ಲಬ್‌ಡಬ್ ಬಡಿತ ನಿಲ್ಲಿಸಿ ಕೆಲಕಾಲ ಸ್ತಬ್ಧವಾಗಿತ್ತು. ಅದೇ ಕ್ಷಣಕ್ಕೆ ನನಗೆ ತಿಳಿಯದೇ ಕಣ್ಣಂಚು ಒದ್ದೆಯಾಗಿತ್ತು. ಕಣ್ಣೀರಿನ ಹನಿಗಳು ಸ್ಪರ್ಧೆಗಿಳಿದವರಂತೆ ಕೆನ್ನೆಯನ್ನು ತೋಯಿಸಿದವು.
ಕಣ್ಣಿನಲ್ಲೇ ಪಿಸುಗುಟ್ಟಿ, ಮೌನಭಾಷೆಯಲ್ಲೇ ಕೋಟಿ ಭಾವನೆಗಳನ್ನು ವಿನಿಮಯ ಮಾಡಿಕೊಳ್ಳುವ ಕಲೆಯನ್ನು ನನಗೆ ಕಲಿಸಿದವಳೇ ನೀನು. ಯಾವಾಗಲೂ ವಟವಟ ಅಂತ ಮಾತಾಡ್ತಿದ್ದ ನಾನು, ನೀನು ಎದುರಿಗಿದ್ದಾಗ ಮಹಾ ಮೌನಿಯಾಗುತ್ತಿದ್ದೆ. ನಿನ್ನ ಪ್ರೀತಿ ಜೀವನಪರ್ಯಂತ ನನಗಾಗಿಯೇ ಮೀಸಲಾಗಿರಬೇಕು ಅಂತ ಕನಸು ಕಾಣಿ¤ರೋ ಪರಮ ಸ್ವಾರ್ಥಿ ನಾನು. ನೀನು ನನಗೆ ಪ್ರೀತಿಯಷ್ಟೇ ಅಲ್ಲ, ಬಹುದೊಡ್ಡ ಸ್ಫೂರ್ತಿ ಕೂಡ ಹೌದು. ನೀನು ಸಿಕ್ಕ ಮೇಲೆ ಬದುಕಿಗೊಂದು ಶಿಸ್ತು ಬಂತು. ಜವಾಬ್ದಾರಿಯನ್ನು ಹೊರೋಕೆ ಹೆಗಲು ಸಿದ್ಧವಾಯ್ತು. ಈಗೀಗ ಯಾವಾಗಂದ್ರೆ ಆಗ ಎದ್ದು ಓದ್ಕೋಳ್ತಾ ಇರ್ತೀನಿ. ಚೆನ್ನಾಗಿ ಓದಿ, ಒಳ್ಳೆಯದೊಂದು ಕೆಲಸ ಪಡ್ಕೊàಬೇಕು, ಆಮೇಲೆ ನಿನಗೆ ಇಷ್ಟವಾಗಿದ್ದನ್ನೆಲ್ಲಾ ತಂದು ನಿನ್ನ ಮಡಿಲಿಗೆ ಸುರಿಯಬೇಕು ಅಂತೆಲ್ಲಾ ಕನಸು ಕಾಣುತ್ತಿದ್ದೇನೆ.
Related Articles
Advertisement
ನಿನ್ನ ಒಲವಿನ ಸಣ್ಣ ಮುಗುಳುನಗೆಗಾಗಿ ಕಾಯ್ತಿರೋ…
ರವಿತೇಜ, ಚಿಗಳಿಕಟ್ಟೆ