ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಟೋಕ್ಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ಅಥ್ಲೀ ಟ್‌ಗಳ ಜತೆ ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ, ನೀವೆಲ್ಲರೂ ದೇಶಕ್ಕೆ ರೋಲ್ ಮಾಡೆಲ್‌ಗಳು ಎಂದು ಹೇಳಿ ಶುಭ ಹಾರೈಸಿದರು.
2016ರ ರಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತರಾದ ದೇವೇಂದ್ರ ಜಜಾರಿಯಾ, ಮರಿಯಪ್ಪನ್ ತಂಗವೇಲು ಸೇರಿದಂತೆ 10 ಪ್ಯಾರಾ ಅಥ್ಲೀಟ್‌ಗಳ ಜತೆ ಪ್ರಧಾನಿ ಮೋದಿ ಮಾತುಕತೆ ನಡೆಸಿದರು.
ಒತ್ತಡವಿಲ್ಲದೆ ಸ್ಪರ್ಧಿಸಿ:
ಯಾವುದೇ ಒತ್ತಡವಿಲ್ಲದೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ. ನಿಮ್ಮ ಜೀವನದ ಎಲ್ಲ ನ್ಯೂನ್ಯತೆಗಳ ಹೊರತಾಗಿಯೂ ನಂಬಿಕೆ ಕಳೆದುಕೊಳ್ಳದೆ ಛಲದಿಂದ ಸ್ಪರ್ಧಿಸಿ. ನಿಮ್ಮ ಕಠಿಣ ಪರಿಶ್ರಮ ಹಾಗೂ ದೃಢ ಸಂಕಲ್ಪದಿಂದ ಎಲ್ಲ ಅಡೆತಡೆಗಳನ್ನು ಮೆಟ್ಟಿನಿಂತು ನೀವು ಈ ಹಂತಕ್ಕೆ ತಲುಪಿದ್ದೀರಿ. ನೀವೆಲ್ಲ ಈಗ ಜಗತ್ತಿನ ಅತೀ ದೊಡ್ಡ ಕ್ರೀಡಾ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದೀರಿ ಎಂದು ಮೋದಿ ಕ್ರೀಡಾಪಟುಗಳಲ್ಲಿ ಆತ್ಮವಿಶ್ವಾಸ ತುಂಬಿದರು.
ಎಲ್ಲರೂ ಜಯಶಾಲಿಗಳೇ…
ನೀವೆಲ್ಲರೂ ಜಯಶಾಲಿಗಳೇ. ಜತೆಗೆ ರೋಲ್ ಮಾಡೆಲ್ ಕೂಡ ಆಗಿದ್ದೀರಿ. ಟೋಕೊÂ ಪ್ಯಾರಾಲಿಂಪಿಕ್ಸ್‌ನಲ್ಲಿ ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನವನ್ನು ನೀವೆಲ್ಲರೂ ತೋರಲಿದ್ದೀರಿ, ದೇಶವನ್ನು ಹೆಮ್ಮೆ ಪಡುವಂತೆ ಮಾಡಲಿದ್ದೀರಿ ಎನ್ನುವ ವಿಶ್ವಾಸವಿದೆ ಎಂದು ಮೋದಿ ಹೇಳಿದರು.