Advertisement

ನೀವೂ ಸಂಪರ್ಕಾಧಿಕಾರಿಯಾಗಿ

07:46 AM Feb 06, 2019 | |

ಪ್ರತಿಷ್ಠಿತ ಸಂಸ್ಥೆಯಿಂದ ವೈದ್ಯಕೀಯ ಅಥವಾ ಆರೋಗ್ಯ ಶಿಬಿರ ಆಗುತ್ತಿದೆ ಹಾಗೂ ಇದರಿಂದ ಸಾರ್ವಜಕನಿಕರಿಗೆ ಉಪಯೋಗವಾಗುವಂತಹ ಹಾಗೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಕಾರ್ಯಕ್ರಮವನ್ನು ರೂಪಿಸುವ ವ್ಯಕ್ತಿಯ ಪಾತ್ರ ಪ್ರತೀ ಸಂಸ್ಥೆಗೂ ಮುಖ್ಯವಾಗಿರುತ್ತದೆ. ಅಂತಹ ವೃತ್ತಿಯೇ ಪಿಆರ್‌ಒ.

Advertisement

ಹೌದು, ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವುದು ಎಲ್ಲರ ಕಾರ್ಯ. ಮಾತ್ರವಲ್ಲದೆ ಅದೊಂದು ಸಾಮಾಜಿಕ ಹೊಣೆಗಾರಿಕೆಯೂ ಹೌದು. ಹಾಗಾಗಿ ಈ ಕೆಲಸವನ್ನು ನಿರ್ವಹಿಸುವ ಹಾಗೂ ಸಾರ್ವಜನಿಕರಿಗೆ ಮತ್ತು ಒಂದು ಸಂಸ್ಥೆಯ ಮಧ್ಯೆ ಕೊಂಡಿಯಾಗಿರುವ ವ್ಯಕ್ತಿಯೇ ಸಾರ್ವಜನಿಕ ಸಂಪರ್ಕಾಧಿಕಾರಿ.

ಸಂಸ್ಥೆಯಿಂದ ನಡೆಯುವ ಸಾಮಾಜಿಕ ಕಾರ್ಯಕ್ರಮ, ಹೆಲ್ತ್‌ ಕ್ಯಾಂಪೇನ್‌, ಸಂಸ್ಥೆಯ ಹೆಸರನ್ನು ಪ್ರಚಲಿತಗೊಳಿಸಲು ಮಾಡಬೇಕಾದ ಕಾರ್ಯತಂತ್ರಗಳನ್ನು ರೂಪಿಸುವುದು ಈತನ ಹೊಣೆಗಾರಿಕೆಯಾಗಿರುತ್ತದೆ.

ಮಾಧ್ಯಮ ಸ್ನೇಹಿ
ಈತ ಮಾಧ್ಯಮಗಳ ಸ್ನೇಹಿತನಾಗಿ ತನ್ನ ಸಂಸ್ಥೆಯ ಪತ್ರಿಕಾಗೋಷ್ಠಿ, ಪತ್ರಿಕಾ ಹೇಳಿಕೆ, ಜಾಹೀರಾತು, ಪ್ರಚಾರ, ಸಾಮಾಜಿಕ ಕಾರ್ಯಕ್ರಮಗಳು, ಜನಪರ ಕಾಳಜಿ ಹೀಗೆ ಸಂಸ್ಥೆ ನಡೆಸುವ ಪ್ರತಿಯೊಂದು ಕಾರ್ಯಕ್ರಮಕ್ಕೂ ಮಾಧ್ಯಮಗಳ ಮುಖಾಂತರ ಸಾರ್ವಜನಿಕರಿಗೆ ಹತ್ತಿರವಾಗುವಂತೆ ಸುದ್ದಿಗಳನ್ನು ತಲುಪಿಸುವ ಕಾರ್ಯವನ್ನು ಮಾಡುತ್ತಾನೆ.

ಶಿಕ್ಷಣ
ಮಾತುಗಾರಿಕೆ, ಚಾಣಾಕ್ಷತನ, ಆಲೋಚನ ಶಕ್ತಿ, ಕ್ರಿಯಾಶೀಲತೆ ಜತೆಗೆ ಉತ್ತಮ ಸಂವಹನ ಕಲೆಯನ್ನು ಹೊಂದಿದ್ದರೆ ಈ ಕ್ಷೇತ್ರದಲ್ಲೇ ಉನ್ನತ ಶಿಕ್ಷಣವನ್ನು ಮಾಡಬಹುದು. ಪದವಿಯನ್ನು ಜರ್ನಲಿಸಂ, ಮಾರ್ಕೆಟಿಂಗ್‌ ಆ್ಯಂಡ್‌ ಕಮ್ಯುನಿಕೇಶನ್‌ ಅಥವಾ ಮೇಜರ್‌ ಲ್ಯಾಂಗ್ವೇಜ್‌ನಲ್ಲಿ ಪಡೆದು ಸ್ನಾತಕೋತ್ತರ ಪದವಿಯನ್ನು ಮಾಡಬಹುದು ಅಥವಾ ಪಾರ್ಟ್‌ಟೈಮ್‌ ಶಿಕ್ಷಣವನ್ನು, ಶಾರ್ಟ್‌ಟೈಮ್‌ ಕೋರ್ಸ್‌, ಡಿಪ್ಲೊಮಾ ಕೋರ್ಸ್‌ಗಳನ್ನು ಅನೇಕ ಶಿಕ್ಷಣ ಸಂಸ್ಥೆಗಳು ನೀಡುತ್ತವೆ. ಹೀಗೆ ಶಿಕ್ಷಣದ ಜತೆಗೆ ಹವ್ಯಾಸವಾಗಿ ಇದನ್ನು ಕಲಿಯಬಹುದು.

Advertisement

ಉದ್ಯೋಗಾವಕಾಶ
ಪಬ್ಲಿಕ್‌ ರಿಲೇಶನ್‌ ಆಫೀಸರ್‌, ಸೋಶಿಯಲ್‌ ಮೀಡಿಯಾ ಮಾರ್ಕೆಟಿಂಗ್‌, ಮಾರ್ಕೆಟಿಂಗ್‌ ಮ್ಯಾನೇಜರ್‌, ರೈಟಿಂಗ್‌ ಈವೆಂಟ್ ಕೋ ಆರ್ಡಿನೇಟರ್‌, ಪ್ರಸ್‌ ಸೆಕ್ರೇಟರಿ, ಮೀಡಿಯಾ ಪ್ಲಾನರ್‌, ನ್ಪೋಕ್ಸ್‌ಪರ್ಸನ್‌ ಹೀಗೆ ಹಲವು ರೀತಿಯಲ್ಲಿ ಸಂಸ್ಥೆಯ ಪರವಾಗಿ ಕೆಲಸವನ್ನು ನಿರ್ವಹಿಸಬಹುದು. ಅಥವಾ ಪಾರ್ಟ್‌ ಟೈಮ್‌ ಕೆಲಸವನ್ನೂ ನಿರ್ವಹಿಸಬಹುದು. ಆಸಕ್ತ, ಕ್ರಿಯಾಶೀಲ ಯುವಕರಿಗೆ ಮಾಧ್ಯಮ, ಸಂಸ್ಥೆಯ ಮಧ್ಯೆ ಸಂಬಂಧ ಏರ್ಪಡಿಸುವ ಜವಾಬ್ದಾರಿಯುತ ಕೆಲಸವನ್ನು ನಿರ್ವಹಿಸುವ ಹೊಣೆಗಾರಿಕೆಯೊಂದಿಗೆ ಉತ್ತಮ ಸಂಭಾವನೆಯನ್ನು ಪಡೆಯುವ ವೃತ್ತಿ ಇದಾಗಿದೆ. 

ಸಂಸ್ಥೆಯ ಸಂಪರ್ಕ ಕೊಂಡಿ
ಸಂಸ್ಥೆಗೆ ಸಮಾಜದ ಮಧ್ಯೆ ಸಂಪರ್ಕ ಕೊಂಡಿಯಾಗಿ ಸಂಸ್ಥೆಯ ಪ್ರತಿಯೊಂದು ಹೊಸ ಯೋಜನೆಗೆ ಪ್ರಚಾರ, ಯಶಸ್ಸಿಗೆ ಬೇಕಾದ ಕಾರ್ಯಯೋಜನೆಗಳ ರಚನೆ, ಮಾಧ್ಯಮಗಳ ಮಧ್ಯೆ ಉತ್ತಮ ಬಾಂಧವ್ಯವನ್ನು ಸೃಷ್ಟಿಸಿ ಸಂಸ್ಥೆಯ ಕುರಿತು ಸಮಾಜಕ್ಕೆ ಮಾಹಿತಿ ನೀಡುವ ಕೆಲಸವನ್ನು ಪಿಆರ್‌ಒ ಮಾಡುತ್ತಾನೆ.

Advertisement

Udayavani is now on Telegram. Click here to join our channel and stay updated with the latest news.

Next