ಹೊಸದಿಲ್ಲಿ: ಪ್ರಧಾನಿ ನರೆಂದ್ರ ಮೋದಿ ಅವರು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಫಿಟ್‌ನೆಸ್ ಸವಾಲನ್ನು ಸ್ವೀಕರಿಸಿದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿಗೆ ಇನ್ನೊಂದು ಸವಾಲು ಹಾಕಿದ್ದಾರೆ.
ಟ್ವೀಟ್ ಮಾಡಿರುವ ರಾಹುಲ್ ”ನೀವು ಕೊಹ್ಲಿ ಅವರ ಸವಾಲು ಸ್ವೀಕರಿಸಿದ್ದು ನೋಡಿ ಖುಷಿಯಾಯಿತು. ನನ್ನ ದೊಂದು ಸವಾಲಿದೆ. ಇಂಧನ ಬೆಲೆಗಳನ್ನು ಇಳಿಸಿ ಇಲ್ಲವಾದಲ್ಲಿ ಕಾಂಗ್ರೆಸ್ ರಾಷ್ಟ್ರವ್ಯಾಪಿ ಚಳುವಳಿ ನಡೆಸಿ ಬೆಳೆ ಇಳಿಸುವಂತೆ ಮಾಡುತ್ತದೆ.ನಾನು ನಿಮ್ಮ ಉತ್ತರಕ್ಕಾಗಿ ಎದುರು ನೋಡುತ್ತಿದ್ದೇನೆ” ಎಂದು ಬರೆದಿದ್ದಾರೆ.
ಕೇಂದ್ರ ಕೇಂದ್ರ ಮಾಹಿತ ತಂತ್ರಜ್ಞಾನ, ಯುವಜನ ಮತ್ತು ಕ್ರೀಡಾಸಚಿವ ರಾಜ್ಯವರ್ಧನ ಸಿಂಗ್ ರಾಠೋಡ್ ಅವರ ‘ಹಮ್ ಫಿಟ್ ತೋ ಇಂಡಿಯಾ ಫಿಟ್’ ಎಂಬ ಧ್ಯೇಯ ವಾಕ್ಯದಡಿ ಫಿಟ್‌ನೆಸ್ ಚಾಲೆಂಜ್ ಅಭಿಯಾನದಲ್ಲಿ ಕೊಹ್ಲಿ ಅವರು ಪ್ರಧಾನಿ ಮೋದಿ ಅವರಿಗೆ ವಿಡಿಯೋ ಅಪ್‌ಲೋಡ್ ಮಾಡುವಂತೆ ಸವಾಲೆಸೆದಿದ್ದರು.
ತೇಜಸ್ವಿ ಯಾದವ್ ಸವಾಲು
”ಕೊಹ್ಲಿ ಅವರ ಸವಾಲು ಸ್ವೀಕರಿಸುವುದು ದೊಡ್ಡದಲ್ಲ. ಯುವಜನರಿಗೆ ಉದ್ಯೋಗ ನೀಡಲು, ರೈತರ ಸಮಸ್ಯಗಳಿಗೆ ಪರಿಹಾರ, ದಲಿತರು ಮತ್ತು ಅಲ್ಪಸಂಖ್ಯಾತರ ವಿರುದ್ಧ ಯಾವುದೇ ಹಿಂಸೆಗೆ ಲ್ಲವೆಂದು ಭರವಸೆ ನೀಡುವಂತೆ ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ನರೇಂದ್ರ ಮೋದಿ ಸರ್.. ನೀವು ನನ್ನ ಸವಾಲನ್ನು ಸ್ವೀಕರಿಸುತ್ತೀರಾ?” ಎಂದು ಬಿಹಾರ ಮಾಜಿ ಡಿಸಿಎಂ ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.