Advertisement

ಯೋಗಕ್ಕಿಲ್ಲ ಮತೀಯ ಕಳಂಕ

01:02 PM Jul 05, 2017 | Team Udayavani |

ಧಾರವಾಡ: ನಮ್ಮ ಸನಾತನರು ಕೊಟ್ಟ ಯೋಗ ಆಧಾರಿತ ಜೀವನ ಪದ್ಧತಿಯಲ್ಲಿ ಯಾವುದೇ ಮತೀಯ ಕಳಂಕವಿಲ್ಲ ಎಂದು ಮಂಡಿಹಾಳ ಶಿವಾನಂದ ಕುಟೀರದ ಆನಂದ ಗುರೂಜಿ ಹೇಳಿದರು. ಇಲ್ಲಿನ ಕಾಮನಕಟ್ಟಿಯ ಹಳೇಪ್ಯಾಟಿ ವೀರಭದ್ರೇಶ್ವರ ದೇವಸ್ಥಾನ  ಸಭಾಭವನದಲ್ಲಿ ಹಮ್ಮಿಕೊಂಡಿದ್ದ ನಿತ್ಯ ಜೀವನದಲ್ಲಿ ಅಧ್ಯಾತ್ಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಸನಾತನರು ತಮ್ಮ ಸತ್ಯ-ಪ್ರತ್ಯಕ್ಷ ಅನುಭವದಿಂದ ಕೊಟ್ಟ ಯೋಗ ವಿಜ್ಞಾನದಿಂದ ಬದುಕು ರೂಪಿಸಿಕೊಂಡು ಜನ್ಮ ಸಾರ್ಥಕಪಡಿಸಿಕೊಳ್ಳುವ ಸಮಯವಿದು. ಎಲ್ಲೆಡೆಯೂ ಪರಿವರ್ತನೆಯ ಗಾಳಿ ಬೀಸುತ್ತಿದೆ ಎಂದರು. ಒಂದಷ್ಟು ಜೀವಾತ್ಮರು ಧೈರ್ಯ ಮಾಡಿ ಗೃಹಸ್ಥ ಜೀವನದ ಜೊತೆಗೆ ಅದರ ನೈಜ ಅರ್ಥ ಹುಡುಕಲು ಹಾಗು ಸತ್ಯದ ಅನ್ವೇಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮನೋಭಾವ ಹೊಂದಿ ಕತ್ತಲಲ್ಲಿ ತಡಕಾಡುತ್ತಿದ್ದಾರೆ. 

ಅವರಿಗೆ ಯೋಗ್ಯ ಮಾರ್ಗದರ್ಶನ ಬೇಕಾಗಿದೆ. ಅಧ್ಯಾತ್ಮವೆಂದರೆ ವಯಸ್ಸಾದ ನಂತರ, ಮೂಲೆಗುಂಪಾದ ನಂತರ ಏನೋ ಒಂದಿಷ್ಟು ಸಾಂತ್ವನದ ತಂಪು ಪಡೆಯುವ ಪ್ರಯತ್ನ ಎಂಬ ತಪ್ಪು ಗ್ರಹಿಕೆ ಇದೆ. ಈ ಗ್ರಹಿಕೆ ತೆಗೆದು ಹಾಕಿ, ಆ ಸನಾತನರು ಕೊಟ್ಟ ಯೋಗ ವಿದ್ಯೆಯನ್ನು ಸರಿಯಾದ ದೃಷ್ಟಿಕೋನದಲ್ಲಿ ಅರ್ಥೈಸಿಕೊಂಡು ಸಾಗಬೇಕಿದೆ ಎಂದು ತಿಳಿಸಿದರು. 

ಬಸವರಾಜ ಹಿರೇಮಠ, ಗಣೇಶ  ಕುಮಾರ ಪಾಟೀಲ, ಗುರುರಾಜ ಕರಿಗಾರ, ಸಂತೋಷ ಕುಮಾರ ಪಾಟೀಲ, ಶ್ರೀನಿವಾಸ ಪಾಟೀಲ, ಮಾರುತಿ ಕುರಬರ, ಮಹೇಶ ಜಿಗಳೂರ, ತುಷಾರ ಜೋಶಿ, ವಿಕ್ರಮ ಸಿಕ್ಕಲಗಾರ, ವಿನಾಯಕ ಸುಕ್ಕದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next