Advertisement
ಜಾತಿಯನ್ನೂ ಮೀರಿದ ಸುಧಾರಣೆಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಯೋಗಿ ಮಾಡೆಲ್ ಎಂದು ಕೇಳಿದ ಕೂಡಲೇ ಕೆಲವರು ಕೆಂಡಾಮಂಡಲರಾಗುತ್ತಾರೆ. ಸಹಜ, ಅಸ್ತಿತ್ವ ಕಳೆದುಕೊಳ್ಳುವ ಸೂಚನೆ ಸಿಕ್ಕ ರಾಜಕಾರಣಿಗಳ ಮೊದಲ ಪ್ರತಿಕ್ರಿಯೆ ಅದುವೇ ಇರುತ್ತದೆ. ಯೋಗಿ ಮಾಡೆಲ್ ಎಂದರೆ ಅದು ಮುಸಲ್ಮಾನರ ವಿರುದ್ಧದ ಆಡಳಿತ ಎಂದು ಒಂದು ವರ್ಗದ ಮಾಧ್ಯಮಗಳು ಚಿತ್ರಣ ಕಟ್ಟಿಕೊಡಲು ತವಕಿಸುತ್ತವೆ. ಅದೂ ಸಹಜವೇ. ಈ ಹಿಂದೆ ಮೋದಿ ಮಾಡೆಲ್ ಎಂದರೆ ಅಲ್ಪಸಂಖ್ಯಾತ ವಿರೋಧಿ ಆಡಳಿತ ಎಂದು ಆ ನಾಯಕರು ಮತ್ತು ಆ ಮಾಧ್ಯಮಗಳು ಬೊಬ್ಬೆ ಹೊಡೆಯುತ್ತಿದ್ದವು. ಆದರೆ ಗುಜರಾತ್‌ನಲ್ಲಿ ಜಾತಿಯನ್ನೂ ಮೀರಿ ಪ್ರತಿಯೊಬ್ಬರ ಜೀವನ ಕ್ರಮದಲ್ಲೂ ಆದ ಉನ್ನತಿ ಸ್ವತಃ ಅಲ್ಲಿನ ಜನತೆಯ ಅನುಭವಕ್ಕೆ ಬರುತ್ತಿತ್ತು. ಹಾಗಾಗಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಗುಜರಾತ್‌ನ ಜನ ಮತ್ತೆ ಮತ್ತೆ ಚುನಾಯಿಸಿದರು. ಅಭಿವೃದ್ಧಿಯ ವೇಗದ ವಿಚಾರದಲ್ಲಿ ಗುಜರಾತದಷ್ಟೇ ವೇಗವಾಗಿ ಬೆಳೆಯುತ್ತಿರುವ ಉತ್ತರ ಪ್ರದೇಶ ಅರೆಕಾಲಿಕ ರಾಜಕಾರಣ ಮಾಡುತ್ತಿದ್ದವರ ನಿದ್ದೆಗೆಡಿಸಿದೆ.
Related Articles
Advertisement
ಬುಲ್ಡೋಜರ್ ಸಂಸ್ಕೃತಿ ನಮ್ಮದಲ್ಲಬಿ.ಕೆ.ಹರಿಪ್ರಸಾದ್, ವಿಧಾನಪರಿಷತ್ ಪ್ರತಿಪಕ್ಷ ನಾಯಕರು
ಯುಪಿ ಮಾಡೆಲ್ ಎಂದು ಪದೆ ಪದೇ ಹೇಳುವ ಮೂಲಕ ರಾಜ್ಯ ಬಿಜೆಪಿಯರು ಕರ್ನಾಟಕದ ಮಾನ ಹರಾಜು ಹಾಕುತ್ತಿದ್ದರು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಅದೇ ರಾಗ ಹಾಡುವ ಮೂಲಕ ಕರ್ನಾಟಕ ಘನತೆ, ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ. ಇಡೀ ರಾಷ್ಟ್ರಕ್ಕೆ ಮಾದರಿ ನಮ್ಮದು. ಇವರ ಆಡಳಿತ ವೈಫಲ್ಯ ಹಾಗೂ ಸೈದ್ಧಾಂತಿಕ ನಡೆಗೆ ಕೆಲವು ಘಟನೆಗಳು ನಡೆದಿವೆ, ಅವುಗಳನ್ನು ನಿಯಂತ್ರಿಸುವ ಸಾಮರ್ಥ್ಯ ಇಲ್ಲದೆ ಉತ್ತರ ಪ್ರದೇಶದ ಆಡಳಿತ ಜಾರಿಗೆ ತರುತ್ತೇವೆ ಎಂದು ಹೇಳುತ್ತಿರುವುದು ಮೂರ್ಖತನದ ಪರಮಾವಧಿ. ಬುಲ್ಡೋಜರ್ ಸಂಸ್ಕೃತಿ ನಮ್ಮದಲ್ಲ, ಒಪ್ಪಲು ಸಾಧ್ಯವೇ ಇಲ್ಲ. ಮೂಲತಃ ಉತ್ತರಪ್ರದೇಶದಲ್ಲಿ ಈ ದೇಶದ ನೆಲದ ಕಾನೂನೇ ಇಲ್ಲ. ಸಂವಿಧಾನಕ್ಕೆ ಎಳ್ಳಷ್ಟೂ ಬೆಲೆ ಕೊಡುತ್ತಿಲ್ಲ. ಅತಿ ಹೆಚ್ಚು ಅತ್ಯಾಚಾರಗಳು ಆಗಿರುವುದು, ದೌರ್ಜನ್ಯ, ಕೊಲೆಗಳು ಆಗಿರುವುದೇ ಅಲ್ಲಿ.ಬುಲಂದ್‌ಶಹರ್ ಹಾಗೂ ಬಲರಾಂಪುರ ಘಟನೆಗಳೇ ಇದಕ್ಕೆ ಸಾಕ್ಷಿ. ಅಲ್ಲಿನ ಕಾನೂನು ಇಲ್ಲಿ ಅಡಾಪ್ಟ್ ಮಾಡಿಕೊಳ್ಳುತ್ತೇವೆ ಎಂದು ಹೇಳುವುದು ಕನ್ನಡಿಗರೆಲ್ಲರೂ ತಲೆತಗ್ಗಿಸಬೇಕಾದ ವಿಚಾರ. ಕರ್ನಾಟಕದ ಇತಿಹಾಸ ಪ್ರಗತಿಯದು. ಇಲ್ಲಿನ ಸಾಧನೆ ಹಾಗೂ ಇಲ್ಲಿನ ಕಾನೂನುಗಳು ರಾಷ್ಟ್ರಕ್ಕೆ ಮಾದರಿಯಾಗಿದ್ದವು. ಬಿಜೆಪಿ ಸರ್ಕಾರ ಬಂದ ಮೇಲೆ ಇದೆಲ್ಲವೂ ರಿವರ್ಸ್‌ಗೇರ್ ಆಗುತ್ತಿವೆ. ತಲೆ ಬುಡ ಗೊತ್ತಿಲ್ಲದ ಯುಪಿ ಮಾಡೆಲ್ ಬಗ್ಗೆ ಬಿಜೆಪಿಯವರು ಮಾತನಾಡುತ್ತಿದ್ದಾರೆ. ಹಾಗಾದರೆ ಗುಜರಾತ್ ಮಾಡೆಲ್ ಫೈಲ್ಯೂರ್ ಆಗಿ ಹೋಯ್ತಾ. ಬಿಜೆಪಿಯ ಕ್ರಿಮಿನಲ್ ಮೆಂಟಾಲಿಟಿ ನಾಯಕರಿಗೆ ಮಾತ್ರ ಇಂತಹ ಐಡಿಯಾಗಳು ಬರಲು ಸಾಧ್ಯ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧವೇ 27 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಅವರು ಮುಖ್ಯಮಂತ್ರಿಯಾದ ತಕ್ಷಣ ಮಾಡಿದ ಕೆಲಸ ಆ ಎಲ್ಲ ಪ್ರಕರಣ ವಾಪಸ್ ಪಡೆದದ್ದು. ರಾಜ್ಯದಲ್ಲೂ ಕ್ರಿಮಿನಲ್ ಮೆಂಟಾಲಿಟಿ ಇರುವವರು ಮುಖ್ಯಮಂತ್ರಿಯಾಗಬೇಕು ಎಂಬುದು ಆ ಪಕ್ಷದವರ ಇರಾದೆ ಇರಬಹುದು.
ಮೂರು ವರ್ಷದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ಏನೂ ಇಲ್ಲ ಹೀಗಾಗಿ, ಯುವ ಸಮೂಹಕ್ಕೆ ಉದ್ಯೋಗ ಕೊಡದೆ ಭಾವನಾತ್ಮಕ ವಿಷಯಗಳನ್ನು ತುಂಬಿಸುವುದು ಚುನಾವಣೆ ಹತ್ತಿರ ಬರುತ್ತಿದ್ದಂತೆ ಆಪರೇಷನ್ ಕಮಲದ ನಂತರ ಆಪರೇಷನ್ ಡೆಡ್‌ಬಾಡಿ ಮಾಡುವುದು. ಒಂದು ಜೀವಕ್ಕೆ 25 ಲಕ್ಷ ಬೆಲೆ ಕಟ್ಟುವುದು. ಸಾವಿನಲ್ಲಿ ರಾಜಕಾರಣ ಮಾಡುವುದು ಉತ್ತರ ಪ್ರದೇಶ ಮಾದರಿಯೇ. ನಮ್ಮ ಕಾನೂನು ಅಷ್ಟು ದುರ್ಬಲವಾಗಿದೆಯಾ. ಎಸ್‌ಡಿಪಿಐ, ಪಿಎಫ್ಐ ಯಾರೇ ಆಗಲಿ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಿ, ನಿಷೇಧಿಸಿ ಬರೀ ದೂರುತ್ತಾ ರಾಜಕೀಯ ಲಾಭಕ್ಕೆ ಹವಣಿಸಿದರೆ ಹೇಗೆ. ಸುರತ್ಕಲ್‌ನ ಸಂಘ ಪರಿವಾರದ ಯುವಕನೇ ಎಸ್‌ಡಿಪಿಐ ಹಾಗೂ ಪಿಎಫ್ಐಗೆ ಯಾರ ಪೋಷಿಸುತ್ತಿದ್ದಾರೆ ಎಂಬುದು ಬಹಿರಂಗಗೊಳಿಸಿದ್ದಾರೆ. ರಾಜ್ಯದ ಮಾನ ಮಾರ್ಯದೆ ದೇಶದ ಮಟ್ಟದಲ್ಲಿ ಹರಾಜು ಹಾಕಬೇಡಿ, ಕರ್ನಾಟಕದ ಗೌರವ ಕಾಪಾಡಿ, ಕರ್ನಾಟಕಕ್ಕೆ ಉತ್ತರಪ್ರದೇಶ ಮಾಡೆಲ್ ಬೇಕಿಲ್ಲ. ಸಂವಿಧಾನ ಹಾಗೂ ಈ ನೆಲದ ಕಾನೂನು ಚೌಕಟ್ಟಿನಲ್ಲಿ ನಮ್ಮದೇ ಮಾಡೆಲ್ ಅನುಸರಿಸಿ ಸಾಕು.