Advertisement

“ಒಂಬತ್ತನೇ ದಿಕ್ಕಿ’ನಲ್ಲಿ ಯೋಗಿ ಹುಟ್ಟುಹಬ್ಬ!

08:52 AM Jul 07, 2020 | Lakshmi GovindaRaj |

ಸ್ಯಾಂಡಲ್‌ವುಡ್‌ನ ಲೂಸ್‌ಮಾದ ಯೋಗಿ ಹುಟ್ಟುಹಬ್ಬಕ್ಕೆ ನಿರ್ದೇಶಕ ದಯಾಳ್ ಪದ್ಮನಾಭನ್ “ಒಂಬತ್ತನೇ ದಿಕ್ಕು’ ಚಿತ್ರದ ಟೀಸರ್‌ನ್ನು ಬಿಡುಗಡೆ ಮಾಡುವ ಮೂಲಕ ವಿಶೇಷ ಉಡುಗೊರೆ ನೀಡಿದ್ದಾರೆ. ನಟ ಯೋಗಿ ಸೋಮವಾರ 31 ವಸಂತಕ್ಕೆ ಕಾಲಿಟ್ಟಿದ್ದು, ಯೂಟ್ಯೂಬ್‌ನಲ್ಲಿ ಚಿತ್ರದ ಟೀಸರ್‌ ರಿಲೀಸ್‌ ಆಗಿದೆ. ಅಲ್ಲದೇ ಬಿಡುಗಡೆಯಾದ ಈ ವಿಶೇಷ ಟೀಸರ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

Advertisement

ಈಗಾಗಲೇ ಚಿತ್ರವು ಸೆನ್ಸಾರ್‌ನಿಂದ ಯಾವುದೇ ಕಟ್ಸ್ ಇಲ್ಲದೆ ಯು/ಎ ಪ್ರಮಾಣ ಪತ್ರವನ್ನುಪಡೆದುಕೊಂಡಿದೆ. ಅಂದಹಾಗೆ ಸುಮಾರು 40 ದಿನಗಳ ಕಾಲ ಬೆಂಗಳೂರು, ಶ್ರೀರಂಗಪಟ್ಟಣದಲ್ಲಿ ಚಿತ್ರೀಕರಣಗೊಂಡಿರುವ ಸಿನಿಮಾದಲ್ಲಿ ಟ್ರಾವೆಲ್ ಏಜೆಂಟ್ ಆಗಿ ಯೋಗಿ ಕಾಣಿಸಿಕೊಂಡಿದ್ದು, ಸಾಮಾನ್ಯ ಹುಡುಗಿಯ ಪಾತ್ರದಲ್ಲಿಅದಿತಿ ಪ್ರಭುದೇವ ನಟಿಸಿದ್ದಾರೆ. ಉಳಿದಂತೆ ಸಂಪತ್‍ಕುಮಾರ್, ಆಶೋಕ್ , ಶೃತಿ ನಾಯಕ್, ಯತಿರಾಜ್, ಮಧುಸೂಧನ್ ಮುಂತಾದವರು ನಟಿಸಿದ್ದು, ವಿಶೇಷ ಪಾತ್ರದಲ್ಲಿ ಸಾಯಿಕುಮಾರ್ ಕಾಣಿಸಿಕೊಂಡಿದ್ದಾರೆ.

ಇನ್ನು ಈ ಚಿತ್ರಕ್ಕೆ ಡಿ ಪಿಕ್ಚರ್ಸ್‍ ನ ದಯಾಳ್ ಪದ್ಮನಾಭನ್, ಜಿ. ಸಿನಿಮಾಸ್‍ನ ಗುರು ದೇಶಪಾಂಡೆ ಮತ್ತು ಚೆನ್ನೈ ಮೂಲದ ಕೆ9 ಸ್ಟುಡಿಯೋ ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ, ಪ್ರೀತಿ ಮೋಹನ್ ಸಂಕಲನ, ವಿಕ್ರಂ ಮೋರ್ ಸಾಹಸ ಮತ್ತು ಅಭಿಷೇಕ್ ಎಸ್.ಎನ್. ಸಂಭಾಷಣೆ ಚಿತ್ರಕ್ಕಿದೆ. ಅಲ್ಲದೇ ಈ ಸಿನಿಮಾ ಬಳಿಕ ಯೋಗಿ ಅಭಿನಯದ ಮತ್ತೊಂದು ಬಿಗ್‌ ಸಿನಿಮಾಗೆ ರೆಡಿಯಾಗುತ್ತಿದ್ದಾರೆ. ಹೌದು, ತಮ್ಮದೇ ಬ್ಯಾನರ್‌ನಲ್ಲಿ “ಕಂಸ’ ಎಂಬ ಚಿತ್ರದಲ್ಲಿ ನಟಿಸುವ ಬಗ್ಗೆ ಈಗಾಗಲೇ ಸುದ್ದಿಯೂ ಆಗಿದೆ. ಸರ್ಕಾರದ ಅನುಮತಿ, ಹಾಗೂ ಚಿತ್ರಮಂದಿರಗಳ ಆರಂಭ ನೋಡಿಕೊಂಡು ಬಿಡುಗಡೆ ಮಾಡುವ ಉತ್ಸಾಹದಲ್ಲಿದೆ ಚಿತ್ರತಂಡ.

Advertisement

Udayavani is now on Telegram. Click here to join our channel and stay updated with the latest news.

Next