Advertisement

Kollywood: ಯೋಗಿ ಬೋಟ್‌ಗೆ ಸುದೀಪ್‌ ಸಾಥ್‌

03:38 PM Dec 18, 2023 | Team Udayavani |

ತಮಿಳಿನ ಖ್ಯಾತ ಕಾಮಿಡಿ ನಟ ಯೋಗಿ ಬಾಬು ಮತ್ತೆ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಯೋಗಿ ಬಾಬು ನಟನೆಯ “ಬೋಟ್‌’ ಸಿನಿಮಾದ ಟೀಸರ್‌ ರಿಲೀಸ್‌ ಆಗಿದ್ದು,ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ತೆರೆಗೆ ಬರುತ್ತಿದೆ.

Advertisement

ವಿಶೇಷ ಎಂದರೆ ಕನ್ನಡದಲ್ಲೂ ಸಿನಿಮಾ ತೆರೆಗೆ ಬರುತ್ತಿದ್ದು, ಈ ಮೂಲಕ ಯೋಗಿ ಸ್ಯಾಂಡಲ್‌ವುಡ್‌ ಎಂಟ್ರಿ ಕೊಡುತ್ತಿದ್ದಾರೆ. “ಬೋಟ್‌’ ಸಿನಿಮಾದ ಟೀಸರ್‌ ರಿಲೀಸ್‌ ಮಾಡುವ ಮೂಲಕ ಯೋಗಿ ಬಾಬು ಅವರಿಗೆ ನಟ ಸುದೀಪ್‌ ಶುಭಕೋರಿದ್ದಾರೆ.

“ಬೋಟ್‌’ ಚಿಂಬು ದೇವನ್‌ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾ. ಚಿಂಬು ದೇವನ್‌ ದಳಪತಿ ವಿಜಯ್‌ ನಟನೆಯ “ಪುಲಿ’ ಸಿನಿಮಾ ಸೇರಿದಂತೆ ಇನ್ನು ಕೆಲವು ಸಿನಿಮಾಗಳನ್ನು ನೀಡಿದ್ದಾರೆ. ಇದೀಗ ಯೋಗಿ ಬಾಬು ಅವರಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.ವಿಶೇಷ ಎಂದರೆ ಸಂಪೂರ್ಣ ಸಿನಿಮಾ ಸಮುದ್ರದಲ್ಲಿಯೇ ಚಿತ್ರೀಕರಣಗೊಂಡಿದೆ.

ಜಪಾನ್‌, ಚೆನ್ನೈ ಮೇಲೆ ಬಾಂಬ್‌ ದಾಳಿ ಮಾಡಿದಾಗ ಹತ್ತು ಜನರು ಚಿಕ್ಕ ಬೋಟ್‌ ಏರಿ ಪರಾರಿಯಾಗುತ್ತಾರೆ. ಬೋಟ್‌ ನಲ್ಲಿ ಚಿಕ್ಕ ರಂಧ್ರವಾಗುತ್ತೆ. ಬಳಿಕ ಈ ಹತ್ತು ಜನ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾರೆ, ಸಮುದ್ರದಿಂದ ಹೇಗೆ ಭೂಮಿ ಸೇರುತ್ತಾರೆ ಎನ್ನುವುದೇ ಚಿತ್ರದ ತಿರುಳು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next