Advertisement

LGM: ನನ್ನ CSK ತಂಡಕ್ಕೆ ಸೇರಿಸಿಕೊಳ್ಳಿ; ಯೋಗಿ ಬಾಬು ಮಾತಿಗೆ ಧೋನಿ ಕೊಟ್ಟ ರಿಪ್ಲೈ ವೈರಲ್‌

12:23 PM Jul 11, 2023 | Team Udayavani |

ಚೆನ್ನೈ: ಮಹೇಂದ್ರ ಸಿಂಗ್‌ ಈಗ ಕ್ರಿಕೆಟಿಗ ಮಾತ್ರವಲ್ಲದೆ ಸಿನಿಮಾ ನಿರ್ಮಾಪಕರೂ ಆಗಿದ್ದಾರೆ. ಧೋನಿ ಎಂಟರ್ಟೈನ್ಮೆಂಟ್ ಬ್ಯಾನರ್‌ ಅಡಿಯಲ್ಲಿ ಸಿನಿಮಾ ರೆಡಿ ಆಗಿರುವುದು ಗೊತ್ತೇ ಇದೆ. ಇದೀಗ ಈ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ.

Advertisement

ಟೀಮ್‌ ಇಂಡಿಯಾದ ಮಾಜಿ ನಾಯಕ, ಚೆನ್ನೈ ಸೂಪರ್‌ ಕಿಂಗ್ಸ್‌ ಕಪ್ತಾನ ಮಹೇಂದ್ರ ಧೋನಿ “ಧೋನಿ ಎಂಟರ್ಟೈನ್ಮೆಂಟ್” ಬ್ಯಾನರ್‌ ಅಡಿಯಲ್ಲಿ “ಎಲ್‌ ಜಿಎಂ” ( ಲೆಟ್ಸ್‌ ಗೆಟ್‌ ಮ್ಯಾರೇಡ್)‌  ಸಿನಿಮಾದ ಟ್ರೇಲರ್‌ ಹಾಗೂ ಆಡಿಯೋ ಲಾಂಚ್‌ ಅದ್ಧೂರಿಯಾಗಿ ನಡೆದಿದೆ. ಕಾರ್ಯಕ್ರಮದಲ್ಲಿ ಧೋನಿ ದಂಪತಿ ಹಾಗೂ ಕಲಾವಿದರು ಭಾಗಿಯಾಗಿದ್ದರು.

ಚೆನ್ನೈನ ಲೀಲಾ ಪ್ಯಾಲೇಸ್‌ನಲ್ಲಿ ‘ಎಲ್‌ಜಿಎಂ’ ಚಿತ್ರದ ಆಡಿಯೋ ಮತ್ತು ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಈ ವೇಳೆ ಸಿನಿಮಾದಲ್ಲಿ ನಟಿಸಿರುವ ಕಾಲಿವುಡ್‌ ನ ಖ್ಯಾತ ಹಾಸ್ಯನಟ ಯೋಗಿ ಬಾಬು ಅವರು ಧೋನಿ ಅವರ ಬಳಿ ಕೇಳಿರುವ ಒಂದು ಮಾತಿಗೆ ಧೋನಿ ಕೊಟ್ಟ ಉತ್ತರ ವೈರಲ್‌ ಆಗಿದೆ.

ಇದನ್ನೂ ಓದಿ:  Ajith Kumar: “ಅಜಿತ್‌ ನನಗೆ ಮೋಸ ಮಾಡಿದ್ದಾರೆ..” ಥಲಾ ವಿರುದ್ಧ ಗುಡುಗಿದ ನಿರ್ಮಾಪಕ

Advertisement

“ಧೋನಿ ಅವರೇ ನನ್ನನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ನೇಮಿಸಿಕೊಳ್ಳಿ” ಎಂದಿದ್ದಾರೆ.

“ಅಂಬಾಟಿ ರಾಯುಡು ನಿವೃತ್ತರಾಗಿದ್ದಾರೆ. ಆದ್ದರಿಂದ ನಿಮಗೆ ಸಿಎಸ್‌ಕೆಯಲ್ಲಿ ಸ್ಥಾನವಿದೆ. ನಾನು ಮ್ಯಾನೇಜ್‌ಮೆಂಟ್‌ನೊಂದಿಗೆ ಮಾತನಾಡುತ್ತೇನೆ. ಆದರೆ, ನೀವು ಚಲನಚಿತ್ರಗಳಲ್ಲಿ ತುಂಬಾ ಬ್ಯುಸಿಯಾಗಿದ್ದೀರಿ. ನೀವು ನಿರಂತರವಾಗಿ ಆಡಬೇಕು. ಅವರು ತುಂಬಾ ವೇಗವಾಗಿ ಬೌಲ್ ಮಾಡುತ್ತಾರೆ ಮತ್ತು ಅವರು ನಿಮ್ಮನ್ನು ಗಾಯಗೊಳಿಸಲು ಬೌಲ್ ಮಾಡುತ್ತಾರೆ.” ಎಂದು ತಮಾಷೆಯಾಗಿ ಉತ್ತರ ನೀಡಿದ್ದಾರೆ.

‘ಲೆಟ್ಸ್ ಗೆಟ್ ಮ್ಯಾರೀಡ್’ (‘ಎಲ್‌ಜಿಎಂ’) ಫ್ಯಾಮಿಲಿ ಎಂಟರ್‌ಟೈನರ್ ಆಗಿದ್ದು, ಹರೀಶ್ ಕಲ್ಯಾಣ್ ಮತ್ತು ಇವಾನಾ ,ನದಿಯಾ ತಾಯಿಯ ಯೋಗಿ ಬಾಬು ಮತ್ತು ಮಿರ್ಚಿ ವಿಜಯ್ ಮುಂತಾದ ಕಲಾವಿದರು ನಟಿಸಿದ್ದಾರೆ. ಈ ಸಿನಿಮಾವನ್ನು ರಮೇಶ್ ತಮಿಳ್ಮನಿ ನಿರ್ದೇಶನ  ಮಾಡಿದ್ದಾರೆ.

ಟ್ರೇಲರ್‌ ಗಮನ ಸೆಳೆಯುತ್ತಿದ್ದು ವರ್ಷದ ಕೊನೆಯಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next