Advertisement

“ಲವ್‌ ಜಿಹಾದ್‌’ವಿರುದ್ಧ ಸುಗ್ರೀವಾಜ್ಞೆಗೆ ಯೋಗಿ ಚಿಂತನೆ

11:31 PM Sep 18, 2020 | mahesh |

ಲಕ್ನೋ: ಲವ್‌ ಜಿಹಾದ್‌ ಹೆಸರಿನಲ್ಲಿ ನಡೆಯುವ ಮತಾಂತರ ತಡೆಯಲು ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್‌ ದಿಟ್ಟ ನಿಲುವು ತಳೆದಿದ್ದಾರೆ. ಈ ಬಗ್ಗೆ ಕಠಿಣ ಕ್ರಮ ರೂಪಿಸುವುದಲ್ಲದೆ, ಅಗತ್ಯಬಿದ್ದರೆ ಸುಗ್ರೀವಾಜ್ಞೆ ಜಾರಿಗೊಳಿಸಲು ಮುಂದಾಗುವುದಾಗಿ ಎಚ್ಚರಿಸಿದ್ದಾರೆ.

Advertisement

ಲಕ್ನೋದಲ್ಲಿ ಇತ್ತೀಚೆಗಷ್ಟೇ ಒಬ್ಬಳು ಹಿಂದೂ ಮಹಿಳೆ ಲವ್‌ ಜಿಹಾದ್‌ಗೆ ಗುರಿಯಾಗಿ ಅನ್ಯಧರ್ಮಕ್ಕೆ ಮತಾಂತರ ವಾಗಿದ್ದಳು. ಕೆಲವೇ ದಿನಗಳಲ್ಲಿ ಆಕೆಯ ಹತ್ಯೆ ನಡೆದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಯೋಗಿ ಆದಿತ್ಯನಾಥ್‌, ಲವ್‌ ಜಿಹಾದ್‌ಗೆ ಪೂರ್ಣವಿರಾಮ ಹಾಕಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. “ಲವ್‌ ಜಿಹಾದ್‌ ಒಂದು ಸಂಘಟಿತ ಕೃತ್ಯ. ಇದರ ನಿಯಂ ತ್ರಣಕ್ಕೆ ಅಗತ್ಯಬಿದ್ದರೆ ಸುಗ್ರೀವಾಜ್ಞೆ ತರಲೂ ಚಿಂತಿಸಲಾಗುವುದು’ ಎಂದು ಸಿಎಂ ಹೇಳಿ ರುವ ಬಗ್ಗೆ ಮೂಲಗಳು ಖಚಿತಪಡಿಸಿವೆ.

ಇತ್ತೀಚೆಗಷ್ಟೇ ಕಾನ್ಪುರದಲ್ಲಿ ಲವ್‌ ಜಿಹಾದ್‌ ಪ್ರಕರಣ ವೊಂದರ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿತ್ತು. ಇದಕ್ಕೂ ಮೊದಲು ಉ.ಪ್ರ. ಕಾನೂನು ಆಯೋಗ ಬಲವಂತದ ಮತಾಂತರ ನಿಯಂತ್ರಿಸಲು ಕಾನೂನಿನ ಅವಶ್ಯಕತೆ ಇರುವುದಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next