ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಇನ್ನು ಮುಂದೆ ಯಾವುದೇ ಮಾಫಿಯಾ ಅಥವಾ ಕ್ರಿಮಿನಲ್ ಗಳು ಕೈಗಾರಿಕೋದ್ಯಮಿಗಳಿಗೆ ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ಮತ್ತು ಅವರ ಸಹೋದರನ ಹತ್ಯೆಯ ಬಳಿಕ ಯೋಗಿ ಈ ಹೇಳಿಕೆ ಬಂದಿದೆ.
ಲಕ್ನೋ ಮತ್ತು ಹರ್ದೋಯಿ ಜಿಲ್ಲೆಗಳಲ್ಲಿ ಜವಳಿ ಪಾರ್ಕ್‌ಗಳನ್ನು ಸ್ಥಾಪಿಸಲು ಎಂಒಯು ಗೆ ಸಹಿ ಹಾಕುವ ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿದರು. ಪಿಎಂ ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ಸ್ ಮತ್ತು ಅಪೆರೆಲ್ (ಪಿಎಂ ಮಿತ್ರ) ಯೋಜನೆಯಡಿ ಜವಳಿ ಪಾರ್ಕ್‌ಗಳನ್ನು ಸ್ಥಾಪಿಸಲಾಗುತ್ತಿದೆ.
ಇದನ್ನೂ ಓದಿ:Atiq Ahmad ವಕೀಲರ ಮನೆ ಬಳಿ ಕಚ್ಚಾ ಬಾಂಬ್ ಸ್ಫೋಟ: ಉದ್ದೇಶಿತ ದಾಳಿ ಅಲ್ಲ ಎಂದ ಪೊಲೀಸರು
“ಈಗ ವೃತ್ತಿಪರ ಕ್ರಿಮಿನಲ್ ಅಥವಾ ಮಾಫಿಯಾ ಕೈಗಾರಿಕೋದ್ಯಮಿಗೆ ಫೋನ್ ಮೂಲಕ ಬೆದರಿಕೆ ಹಾಕಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು. ಸಿಎಂ ಯೋಗಿ ಹೇಳಿಕೆಗೆ ಪ್ರೇಕ್ಷಕರು ಕರಡಾತನ ಮಾಡಿದರು.
“ಉತ್ತರ ಪ್ರದೇಶವು ಗಲಭೆಗಳಿಗೆ ಕುಖ್ಯಾತವಾಗಿತ್ತು. ಕೇವಲ ಹಲವು ಜಿಲ್ಲೆಗಳ ಹೆಸರುಗಳೇ ಜನರನ್ನು ಹೆದರಿಸುತ್ತಿದ್ದವು. ಈಗ ಭಯಪಡುವ ಅಗತ್ಯವಿಲ್ಲ” ಎಂದರು.