Advertisement

ಯೋಗಿ ಪ್ರಮಾಣವಚನ ಸ್ವೀಕಾರ : ಅಡ್ವಾಣಿ,ಮೋದಿ ಸೇರಿದಂತೆ ಗಣ್ಯರು ಭಾಗಿ 

02:46 PM Mar 19, 2017 | |

ಲಕ್ನೋ: ಪ್ರಬಲ ಹಿಂದುತ್ವವಾದಿ,ಸಂಸದ  ಯೋಗಿ ಆದಿತ್ಯನಾಥ್‌ ಅವರು  ಉತ್ತರ ಪ್ರದೇಶದ 32ನೇ ಮುಖ್ಯಮಂತ್ರಿಯಾಗಿ ರವಿವಾರ ಮಧ್ಯಾಹ್ನ  ಪ್ರಮಾಣ ವಚನ ಸ್ವೀಕರಿಸಿದರು. 

Advertisement

ಕಾಂನ್ಶಿರಾಮ್‌ ಸ್ಮತಿ ಉಪವನ್‌ನಲ್ಲಿ ನಡೆದ ಭರ್ಜರಿ ಸಮಾರಂಭದಲ್ಲಿ  ಯೋಗಿ ಪ್ರಮಾಣ ವಚನ ಸ್ವೀಕರಿಸಿದರು.  ಅವರೊಂದಿಗೆ  ದಿನೇಶ್‌ ಶರ್ಮ ಮತ್ತು ರಾಜ್ಯಾಧ್ಯಕ್ಷ ಕೇಶವ್‌ ಪ್ರಸಾದ್‌ ಮೌರ್ಯ ಅವರು  ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಬಿಎಸ್‌ಪಿ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಸ್ವಾಮಿ ಪ್ರಸಾದ್‌ ಮೌರ್ಯ ಅವರೂ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 

ಸಮಾರಂಭದಲ್ಲಿ  ಮಾಜಿ ಉಪಪ್ರಧಾನಿ ಎಲ್‌.ಕೆ .ಅಡ್ವಾಣಿ, ಕೇಂದ್ರದ ಹಲವು ಸಚಿವರು , ಎಸ್‌ಪಿ ನಾಯಕರಾದ ಮುಲಾಯಂ ಸಿಂಗ್‌, ಅಖೀಲೇಶ್‌ ಯಾದವ್‌, ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌, ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು , ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಸೇರಿದಂತೆ ಗಣ್ಯಾತೀಗಣ್ಯರು, ಸಾವಿರಾರು ಜನ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next