Advertisement

Hathras Stampede:  ಹಾಥರಸ್‌ ಕಾಲ್ತುಳಿತ ನ್ಯಾಯಾಂಗ ತನಿಖೆಗೆ: ಯೋಗಿ

09:53 AM Jul 04, 2024 | Team Udayavani |

ಹಾಥರಸ್‌: ಕಾಲ್ತುಳಿತದಿಂದ 121 ಮಂದಿ ಅಸುನೀಗಿದ ಘಟನೆ ಬಗ್ಗೆ ನ್ಯಾಯಂಗ ತನಿಖೆ ನಡೆಸುವುದಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಘೋಷಿಸಿದ್ದಾರೆ. ಆಗ್ರಾದ ಎಡಿಜಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದು, ಹಲವು ಮಜಲುಗಳಲ್ಲಿ ತನಿಖೆಯಾಗ ಬೇಕಿದೆ. ಹಾಗಾಗಿ ನಿವೃತ್ತ ಜಡ್ಜ್ ಒಬ್ಬರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಯನ್ನೂ ನಡೆಸಲಾಗುವುದು ಎಂದಿದ್ದಾರೆ.

Advertisement

ಇದೇ ವೇಳೆ ಮೃತಪಟ್ಟವರಲ್ಲಿ 6 ಮಂದಿ ಬೇರೆ ರಾಜ್ಯದವರು. 4 ಮಂದಿ ಹರಿಯಾಣ ಹಾಗೂ ಮಧ್ಯ ಪ್ರದೇಶ, ರಾಜಸ್ಥಾನದಿಂದ ತಲಾ ಒಬ್ಬರು ಸತ್ಸಂಗಕ್ಕೆ ಬಂದಿದ್ದರು ಎಂದು ತಿಳಿಸಿದರು. ಆಯೋಜಕರ ಜತೆ ಸೇವಾದಾರರು ಸಹ ದುರಂತಕ್ಕೆ ಹೊಣೆ. ಜನದಟ್ಟಣೆ ಯಲ್ಲಿ ಸೇವಾದಾರರು ಸಹಾಯ ಮಾಡುವ ಬದಲು ಕಾಲು¤ಳಿತ ಸಂಭವಿಸುತ್ತಿದ್ದಂತೆ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಸಿಎಂ ಹೇಳಿದ್ದಾರೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿ: ಸಿಬಿಐ ತನಿಖೆಗೆ ಮನವಿ ಮಾಡಿ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಸಲ್ಲಿಕೆಯಾಗಿದೆ. ವಕೀಲ ಗೌರವ್‌ ದ್ವಿವೇದಿ ಅರ್ಜಿ ಸಲ್ಲಿಸಿದ್ದು, ಜಿಲ್ಲಾಡಳಿತ ಇದರ ಹೊಣೆ ಹೊರಬೇಕು, ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದಿದ್ದಾರೆ. ಇದೇ ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ. ಇದೇ ವೇಳೆ, ಘಟನೆ ಬಗ್ಗೆ ರಾಜ್ಯಸಭೆಯಲ್ಲೂ ಮೌನಾಚರಣೆ ನಡೆಸಲಾಯಿತು.

ಸಮಾಜಘಾತುಕ ಶಕ್ತಿಗಳ ಕೈವಾಡ: ಬಾಬಾ ಆರೋಪ
ಸತ್ಸಂಗ ಆಯೋಜಿಸಿದ್ದ “ಭೋಲೇ ಬಾಬಾ’ ಮೊದಲ ಪ್ರತಿಕ್ರಿಯೆ ನೀಡಿದ್ದು, ಘಟನೆಯ ಹಿಂದೆ ಸಮಾಜಘಾತುಕ ಶಕ್ತಿಗಳ ಕೈವಾಡವಿದೆ. ಈ ಕಾಲ್ತುಳಿತ ಉಂಟಾಗುವ ಮೊದಲೇ ಸ್ಥಳದಿಂದ ತೆರಳಿದ್ದಾಗಿ ಹೇಳಿಕೊಂಡಿದ್ದಾರೆ.

ಕರುಣಾಜನಕ ಕಥೆ: ಉನ್ನಾವೋದಿಂದ ಸತ್ಸಂಗಕ್ಕೆ ಬಂದಿದ್ದ ಮಹಿಳೆಯೊಬ್ಬರು ತನ್ನ ಅತ್ತಿಗೆ ಕಳೆದುಕೊಂಡ ದುಃಖದಲ್ಲಿ ಹಾಗೂ ಕಾಣೆಯಾದ ಅತ್ತಿಗೆಯ 5 ವರ್ಷದ ಮಗುವಿನ ಹುಡುಕಾಟದ ನಡುವೆ “ಈ ವ್ಯಥೆ ಬಡವರಿಗೇ ಹೊರತು, ಶ್ರೀಮಂತ ರಿಗಿಲ್ಲ’ ಎಂದು ಅಳಲು ತೋಡಿಕೊಂಡಿದ್ದಾರೆ.

Advertisement

ಲೈಂಗಿಕ ದೌರ್ಜನ್ಯ ಕೇಸಲ್ಲಿ “ಭೋಲೇ ಬಾಬಾ’ ಹೆಸರು
ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲೂ ಭೋಲೇ ಬಾಬಾ ಹೆಸರಿರುವುದು ಬೆಳಕಿಗೆ ಬಂದಿದೆ. ಆಗ್ರಾ, ಕಾಸ್‌ಗಂಜ್‌, ಫಾರೂಖಾಬಾದ್‌, ರಾಜಸ್ಥಾನ ಸೇರಿದಂತೆ ಹಲವೆಡೆ ಈತನ ಹೆಸರಿನನಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣಗಳು ದಾಖಲಾಗಿವೆ. ಭೋಲೇ ಬಾಬಾ ಎಂದು ಕರೆಯಲ್ಪಡುವ ಸೂರಜ್‌ ಪಾಲ್‌ ಈ ಹಿಂದೆ ಪೊಲೀಸ್‌ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ್ದು, 1997ರಲ್ಲಿ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸಿದ್ದನು. ಅದಕ್ಕಾಗಿ ಜೈಲುವಾಸವನ್ನೂ ಅನುಭವಿಸಿದ್ದನು ಎಂದು ವರದಿಯಾಗಿದೆ.

ಇದನ್ನೂ ಓದಿ: UK Election 2024: ಇಂದು ಬ್ರಿಟನ್‌ನಲ್ಲಿ ಸಂಸತ್‌ ಚುನಾವಣೆ… ನಾಳೆ ಫ‌ಲಿತಾಂಶ

Advertisement

Udayavani is now on Telegram. Click here to join our channel and stay updated with the latest news.

Next